ಖಾಸಗೀ ಶಾಲೆ ಮೀರಿಸುವಂತಿದೆ ತಾಳಕೇರಿ ಪ್ರೌಢಶಾಲೆ

ಕೊಪ್ಪಳ:ಖಾಸಗೀ ಶಾಲೆ ಮೀರಿಸುವಂತಿದೆ ತಾಳಕೇರಿ ಪ್ರೌಢಶಾಲೆ.


ಸರಕಾರಿ ಶಾಲೆ ಎಂದರೆ ಹಿಯಾಳಿಸುವ ದಿನಗಳೆ ಹೆಚ್ಚು ಆದರೆ ಇಲ್ಲಿ ಯಲಬುರ್ಗಾ ತಾಲೂಕಿನ ತಾಳಕೇರಿ ಸರ್ಕಾರಿ ಪ್ರೌಢಶಾಲೆಗೆ ಭೇಟೆ ನೀಡಿದರೆ ನಿಮಗೆ ಗೊತ್ತಾಗುವುದು,ಆವಾಗ ನಿಮ್ಮ ತಪ್ಪು ಕಲ್ಪನೆ ಬಿಟ್ಟು ಬಿಡುವಿರಿ,ಇಲ್ಲಿಯ ಶಾಲೆಯ ಶಿಕ್ಷಕರ ಪ್ರಯತ್ನದಿಂದ ಮತ್ತು ವಿಜ್ಞಾನ ಶಿಕ್ಷಕ ದೇವೇಂದ್ರಪ್ಪ ಜಿರ್ಲಿ ರವರ ಪ್ರಯತ್ನ ದಿಂದ ತಾಳಕೇರಿ ಪ್ರೌಢಶಾಲೆ ಖಾಸಗಿ ಶಾಲೆ ಮೀರೀಸುವಂತೆ ಅಭಿವೃದ್ಧಿ ಪಡಿಸಿದ್ದಾರೆ.

ಪಿಯುಸಿ ವಿಜ್ಞಾನ ಕಾಲೇಜಿನಲ್ಲಿ ಸಿಗದಂತ ಸೌಲಭ್ಯ ಪ್ರೌಢಶಾಲೆಯಲ್ಲಿಯೇ ಪ್ರಯೋಗಾಲಯಗಳನ್ನು ಪ್ರಾರಂಭಿಸಿ ಸಿ,ವಿ,ರಾಮನ್, ವಿಜ್ಞಾನ ಕೇಂದ್ರ ಎಂದು ನಾಮಕರಣ ಮಾಡಿರುವದು ಮೆಚ್ಚುವಂತ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರುನಮ್ ಬಣ್ಣಿಸಿದರು,

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮದ ಪ್ರೌಢ ಶಾಲೆ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ನನಗೆ ಸರ್ಕಾರಿ ಶಾಲೆ ಎಂದರೆ ಬಹಳ ಸಂತೋಷ ನಮ್ಮ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆಯೇನಿಲ್ಲ, ಬಿ,ಎ,ಎಸ್,ಏಫ್ ,ಮತ್ತು ನ್ಯೂನೇಮಸ್ಸ ಮತ್ತು ಮೈತ್ರಿ ಸರ್ವ ಸೇವಾ ಸಮಿತಿಯ ವತಿಯಿಂದ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ₹ 5 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ಪ್ರಾರಂಭಿಸಿರುವದು
ಮೇಚ್ಚುವಂತ ಕೆಲಸ, ಈ ಜಿಲ್ಲೆಯಲ್ಲಿ ಕಳೆದ ಬಾರಿ ಎಸ್,ಎಸ್,ಎಲ್,ಸಿ, ಫಲಿತಾಂಶ ಶೇಕಡಾ 67 ರಷ್ಟು ಮಾತ್ರ ಪ್ರಗತಿಯಲ್ಲಿತ್ತು ಪ್ರಸಕ್ತ ಸಾಲಿನಲ್ಲಿ ಫಲಿತಾಂಶ ಶೇಖಡಾ 87 ರಷ್ಟು ಫಲಿತಾಂಶ ಲಭಿಸಿದೆ ಮುಂಬರುವ ದಿನಗಳಲ್ಲಿ ಶೇಖಡಾ 100 ರಷ್ಟು ಫಲಿತಾಂಶ ನಿಮ್ಮ ಜಿಲ್ಲೆಯದಾಗಲಿ ನಿಮ್ಮ ಜಿಲ್ಲೆ
ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ನಿಮ್ಮ ಜಿಲ್ಲೆಯು ಶೈಕ್ಷಣಿಕವಾಗಿಮುಂದೆ ಬರಬೇಕು ಎಂದು ಹೇಳಿದರು,ನಿಮ್ಮ ಶಾಲೆಗೆ ಜಿಲ್ಲಾಪಂಚಾಯತ್,ಡಿ, ಡಿಡಿಪಿಐ,ರವರಿಂದ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಸ್ಥಳೀಯ ಸಂಸ್ಥೆಗಳ ಸಹಕಾರವು ಅತ್ಯವಶ್ಯಕ ಮತ್ತು ಈ ಕಾರ್ಯಕ್ರಮ ಇತರ. ಶಾಲೆಗಳಿಗೂ ಸಹ ಮಾದರಿಯಾಗಿದೆ ಎಂದು ಬಣ್ಣಿಸಿದರು,

ಇದಕ್ಕೂ ಮೋದಲು ವಿಜ್ಞಾನ ಕೇಂದ್ರದ ಪ್ರಯೋಗಾಲಯವನ್ನ ಶಾಲಾ ಮಕ್ಕಳೊಂದಿಗೆ ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಅಮರೇಶಪ್ಪ ಸಿದ್ದಾಪುರ,
ಹೈದರಾಬಾದ್ ಬಿ,ಎ,ಎಸ್,ಏಫ್, ವೇಜೀಟೇಬಲ್ ಸಂಸ್ಥೆಯ ಮುಖ್ಯಸ್ಥ, ವಿಕ್ರಮ್ ನರಸಿಂಹ ಮೂರ್ತಿ,
ಗೋಪಿನಾಥ್ ,ಹರಿಶ ಬಾಬು, ಮಹೇಶ್ ,
ಗಂಗಾಧರ ಸ್ವಾಮಿ, ನಿರಂಜನ್ ಎನ್,ಎಸ್,
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಮುತ್ತುರಡ್ಡಿ ರಡ್ಡೇರ, ಮುಖ್ಯೋಪಾಧ್ಯಾಯ ಬಾಬುಸಾಬ ಲೈನ್ ದಾರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *