120 ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದ ಶಾಸಕ ಎಸ್.ಎ.ರಾಮದಾಸ್.

ಮೈಸೂರು:120 ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದ ಶಾಸಕ ಎಸ್.ಎ.ರಾಮದಾಸ್.

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜೆಪಿ.ನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆ ಸಮೂಹ ವತಿಯಿಂದ‌ 120 ಜನ ಆಟೋಚಾಲಕರಿಗೆ ಶಾಸಕ ಎಸ್.ಎ.ರಾಮದಾಸ್ ಸಮವಸ್ತ್ರ ವಿತರಿಸಿದರು.

ನಂತರ ಮಾತನಾಡಿದ ಅವರು ಸಮಾಜದಲ್ಲಿ ಆಟೋ ಚಾಲಕರು ದುಡಿಮೆಯ ಜೊತೆಯಲ್ಲೇ ಸೇವಮಾನೋಭಾವದ ಕಳಕಳಿಯುಳ್ಳವರು,ಪ್ರಧಾನಿ ನರೇಂದ್ರಮೋದಿ ರವರ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ವಂತ ಆಟೋವಾಹನ ಕೊಳ್ಳುವ ಆಟೋ ಚಾಲಕರಿಗೆ ರಾಷ್ಟ್ರೀಕೃತ ಬ್ಯಾಂಕ್ ನ ಒಡಂಬಡಿಕೆ ಜೊತೆಯಲ್ಲಿ ಸಬ್ಸಿಡಿ ಕೊಡಿಸುವ ಮೂಲಕ ಆಟೋ ನೀಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶೆಣ್ಯರವರು, ಯಶಸ್ವಿನಿ ಸೋಮಶೇಖರ್,ಬಿಜೆಪಿ ಮುಖಂಡರಾದ ಓಂ ಶ್ರೀನಿವಾಸ್,ಸಂತೋಷ್,ಅಕ್ಷಯ್, ಅಜಯ್ ಶಾಸ್ತ್ರಿ, ಶಿವರಾಜ್,ಕೃಷ್ಣ, ರಾಘವೇಂದ್ರರವರ ನೇತೃತ್ವದಲ್ಲಿ ಜೆಪಿನಗರದ ಆಟೋ ಚಾಲಕರಿಗೆ ಸಮವಸ್ತ್ರ ನೀಡಲಾಯಿತು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *