ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಶಾಸಕ ಕೆ ಸಿ ನಾರಾಯಣಗೌಡ

ಕೆ.ಆರ್.ಪೇಟೆ: ಕ್ರೀಡಾಪಟುಗಳಿಗೆ, ಶುಭ ಹಾರೈಸಿದ ಸಚಿವ ಕೆ ಸಿ ನಾರಾಯಣಗೌಡ.

ಕೆ ಆರ್ ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಬೂಕನಕೆರೆ ಹೋಬಳಿ ಮಟ್ಟದ 2022-23ನೇ ಸಾಲಿನ ಪ್ರೌಢಶಾಲಾ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಆಗಮಿಸಿ, ಕ್ರೀಡೆಯಲ್ಲಿ ಜಯಗಳಿಸಿದ ಕ್ರೀಡಾಪಟುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸುವ ಮೂಲಕ ಶುಭಕೋರಿ, ಮಾತನಾಡಿದ ಸಚಿವ ಕೆ ಸಿ ನಾರಾಯಣಗೌಡ,ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಧರ್ಮ ಪಾಲಿಸಬೇಕು. ಕ್ರೀಡೆಗಳು ಕಲಿಕೆಗೆ ಹೆಚ್ಚು ಸಹಕಾರಿಯಾಗುತ್ತವೆ. ಜ್ಞಾಪಕ ಶಕ್ತಿ ಹೆಚ್ಚಾಗುವುದರ ಜೊತೆಗೆ ದೈಹಿಕ ಸದೃಢತೆ ಕಾಪಾಡುತ್ತದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು..

ಬಳಿಕ ಗಂಜಿಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಾದರಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ ಕೆ ಮಹೇಶ್ ರವರ ನೇತೃತ್ವದಲ್ಲಿ ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಮುಖವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಗತ್ಯವಿದೆ, ಕೂಡಲೇ ಕಾಲೇಜು ಮಂಜೂರು ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು..

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಪುಟ್ಟಮ್ಮ,ಪ್ರೌಢಶಾಲಾ ಮುಖ್ಯ ಶಿಕ್ಷಕ ಹೆಚ್ ಕೆ ಪ್ರವೀಣಕುಮಾರ್,ಹಿರಿಯಮುಖಂಡ ಜವಾರಾಯಿಗೌಡ ಬುಕನಕೆರೆ,ಇಸಿಒ ವೇಣುಗೋಪಾಲ, ಬೂಕನಕೆರೆ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾಗೇಶ್,ಮುಖಂಡ ಮಂಜು ಮೊದುರು,ವಿಜಯಕುಮಾರ್, ಮಾದೇಶ್,ಪಿ ಡಿ ಒ ರವಿಕುಮಾರ್,ಗ್ರಾಮ ಪಂಚಾಯಿತಿ ಸದಸ್ಯ ದಶರಥ, ಸತೀಶ್,ರವಿ,ತಾ.ಪಂ.ಮಾಜಿ ಸದಸ್ಯ ಚಲುವಯ್ಯ,ಮಹದೇವೇಗೌಡ, ವಕೀಲ ಜಿ ಜೆ ಲೋಕೇಶ್,ಶಿವಣ್ಣ,ಪ್ರಸನ್ನ,
ಜಿ.ಮೀನಾ,ಮೀನಾಕ್ಷಿ
ಹೆಚ್ ಜಿ ಮಂಜು,ಸೋಮಶೇಖರ್ ಹಿರೇಮಠ್,ಅರುಣಕುಮಾರ್,ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಸರ್ವಸದಸ್ಯರು,ಮುಖ್ಯ ಶಿಕ್ಷಕರು, ಸಹಶಿಕ್ಷಕರು,ಸಿಬ್ಬಂದಿ ವರ್ಗ,ವಿದ್ಯಾರ್ಥಿ ವೃಂದ,ಪೋಷಕರು ಹಾಗೂ ಗಂಜಿಗೆರೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು..

ವರದಿ:ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *