“ಎರಡು ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಶಾಲಾ ಕೊಠಡಿಗಳನ್ನು ಹೆಚ್ಚುವರಿಯಾಗಿ ನಿಮಾ೯ಣ: ಶಾಸಕ ಎಂ.ಅಶ್ವಿನ್ ಕುಮಾರ್”

ಟಿ.ನರಸೀಪುರ : ಎರಡು ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಶಾಲಾ ಕೊಠಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಿ ಮಕ್ಕಳ ಉತ್ತಮ ಗುಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದೆಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಮೂಗೂರು ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರೌಡಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಭೂಮಿ ರೂಜೆ ನೆರವೇರಿಸಿ ಮಾತನಾಡಿ,11 ಕೊಠಡಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗುವುದು.ಇದರಿಂದ ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದರು.

ಗ್ರಾ.ಪಂ.ಅದ್ಯಕ್ಷೆ ಚಂದ್ರಮ್ಮ,ಎಸ್.ಡಿ.ಎಂ.ಸಿ.ಅದ್ಯಕ್ಷ ಮಹದೇವಸ್ವಾಮಿ, ಕೆ.ಪಿ.ಎಸ್.ಸಿ ಉಪಾಧ್ಯಕ್ಷ ಸಿದ್ದರಾಜು, ಪ್ರಾಂಶುಪಾಲೆ ರಾಜಶ್ರೀ,ಗೌಡರ್ ಜಗದೀಶ್ ಮೂರ್ತಿ, ಚಂದ್ರಶೇಖರ್,ಎಂ.ಆರ್.ಸೂಂದರ್.ಎಂ.ಎಂ.ಜಗದೀಶ್, ನಾಗೇಂದ್ರ, ಶಿವಮೂರ್ತಿ, ಕ್ಷೇತ್ರಾದ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ,ಎಂ.ಆರ್.ಸೋಮಣ್ಣ,ಎಂ.ಎಂ.ಬಸವಣ್ಣ ಸೇರಿದಂತೆ ಮತ್ತಿತರರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *