೧೦೦ ಮತ್ತು ೬೦೦ ಮೀಟರ್ ಓಟದಲ್ಲಿ ರಾಜ್ಯ ಮಟ್ಚಕ್ಕೆ ಆಯ್ಕೆಯಾದ ಮಕ್ಕಳನ್ನುಅಭಿನಂದಿಸಿದ – ಶಾಸಕ ಎಂ.ಅಶ್ವಿನ್ ಕುಮಾರ್

ಟಿ.ನರಸೀಪುರ : ೧೦೦ ಮತ್ತು ೬೦೦ ಮೀಟರ್ ಓಟದಲ್ಲಿ ರಾಜ್ಯ ಮಟ್ಚಕ್ಕೆ ಆಯ್ಕೆಯಾದ ಮಕ್ಕಳನ್ನುಅಭಿನಂದಿಸಿದ – ಶಾಸಕ ಎಂ.ಅಶ್ವಿನ್ ಕುಮಾರ್.

ಅಥ್ಲೆಟಿಕ್ಸ್ ಕ್ರೀಡಾಕೂಟ ಹಾಗೂ ೧೦೦ ಮತ್ತು ೬೦೦ ಮೀಟರ್ ಓಟದಲ್ಲಿ ರಾಜ್ಯ ಮಟ್ಚಕ್ಕೆ ಶಾಲೆಯ ಎರಡು ಮಕ್ಕಳು ಆಯ್ಕೆ.

ಹೊಸ ಕುಕ್ಕೂರು -೨ ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಲಕ್ಮೀ ಹಾಗೂ ಶ್ರೇಯ ೧೦೦ ಮತ್ತು ೬೦೦ ಮೀಟರ್ ಓಟದಲ್ಲಿ ರಾಜ್ಯ ಮಟ್ಚಕ್ಕೆ ಆಯ್ಕೆಯಾಗಿದ್ದು ಶಾಸಕ ಎಂ.ಅಶ್ವಿನ್ ಕುಮಾರ್ ಅಭಿನಂದಿಸಿದರು.

ತಾಲ್ಲೂಕಿನ ತಲಕಾಡು ಹೋಬಳಿಯ ಹೊಸಕುಕ್ಕೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಯ ಭೂಮಿ ಪೂಜೆ ನೆರವೇರಿಸಿ ಶಾಲೆಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ ಶಾಲಾ ಮಕ್ಕಳಿಗೆ ಯಾವುದೇ ಕುಂದು ಕೊರತೆಗಳು ಬಾರದಂತೆ ನಿಗವಹಿಸಿ.ಕ್ರೀಡಾ ಕೂಟದಲ್ಲಿ ಶಾಲೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕೆಂದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಕೆ.ರಾಮಕೃಷ್ಣ, ಸಹಶಿಕ್ಷಕರುಗಳಾದ ನಾಗರಾಜು,ಶಂಕರ,ಅಶೋಕ,ಸಿದ್ದರಾಜು, ಅನಿತಾ,ಮಹೇಶ್ವರಿ ಹಾಗೂ ದೈಹಿಕ ಶಿಕ್ಷಕ ಚೆನ್ನಪ್ಪ ಬಿ. ಸೇರಿದಂತೆ ಇತರರಿದ್ದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *