“ಸೆಲ್ಫೀ ವಿಥ್ ಗಣೇಶ ವಿಜೇತರಿಗೆ ಬಹುಮಾನ”

ಕುವೆಂಪುನಗರದ ನೃಪತುಂಗ ರಸ್ತೆಯ ಕರ್ನಾಟಕ ವಿಪ್ರ ವೇದಿಕೆ ವತಿಯಿಂದ ಆನ್ ಲೈನ್ ಮೂಲಕ Selfie with ಗಣೇಶ.

ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳು ಆನ್ ಲೈನ್ ಮೂಲಕ ತಮ್ಮ ತಮ್ಮ ಮನೆಯಲ್ಲಿ ಗೌರಿಗಣೇಶನನ್ನು ಅಲಂಕರಿಸಿದ ಚಿತ್ರವನ್ನು ಕಳಿಸಿಕೊಡುವ ಮೂಲಕ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು

ಅದರಲ್ಲಿ ಉತ್ತಮವಾಗಿ ಅಲಂಕರಿಸಿದ 5ಜನ ಸ್ಪರ್ಧಿಗಳನ್ನು ಗುರುತಿಸಿ ಬಹುಮಾನ ನೀಡಲಾಯಿತು
ಮೊದಲನೇ ಬಹುಮಾನ ಟಿ ಕೆ ಲೇಔಟ್ ನಿವಾಸಿ ರಮ್ಯಾ ,ಎರಡನೆ ಬಹುಮಾನ ಬೊಂಬು ಬಜಾರ್ ನಿವಾಸಿ ತೃಪ್ತಿ ,ಮೂರನೇ ಬಹುಮಾನ ರಾಮಕೃಷ್ಣನಗರದ ಸುಮುಖ ,ನಾಲ್ಕನೇ ಬಹುಮಾನ ಟಿಕೆ ಲೇಔಟ್ ನಿವಾಸಿ ಚೈತ್ರ ಚಂದ್ರಶೇಖರ್ ,ಐದನೇ ಬಹುಮಾನ ಕುವೆಂಪು ನಗರದ ನಿವಾಸಿ ಪ್ರತಿಭಾ ಗುರುರಾಜ್ ರವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು

ಗೌರವಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್
ಗೌರಿ ಗಣೇಶ ಮನೆಗಳಲ್ಲಿ ಸಡಗರ ಹಬ್ಬದ ವಾತಾವರಣದ ಜೊತೆ ಮನೆಮಂದಿಯೆಲ್ಲಾ ಸೇರಿ ಭಾಂದವ್ಯ ಬೆರೆಯುವ ಸಂಕಲ್ಪಕ್ಕೆ ಪುಷ್ಠಿ ನೀಡುತ್ತದೆ, ಮತ್ತು ಸ್ವತಂತ್ರ ಭಾರತ ಮುನ್ನ ಲೋಕ‌ಮಾನ್ಯ ತಿಲಕರು ಸ್ವಾತಂತ್ರ್ಯ ಪಡೆಯಲು ಧಾರ್ಮಿಕ ಆಚರಣೆಗಳಿಂದಲೂ ಸಹ ಸಂಘಟಿಸಬಹುದು ಎಂದು ಜಾಗೃತಿ ಮೂಡಿಸಿದರು, ಗೌರಿ ಗಣೇಶ ಹಬ್ಬವನ್ನ ಯುವಪೀಳಿಗೆ ಹೆಚ್ಚಾಗಿ ಆಚರಿಸಲು ಮುಂದಾಗಬೇಕು ಎಂದರು..

ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ ಮಾತನಾಡಿ
ಭಾವೈಕ್ಯತೆ ಬಿತ್ತುವ ಹಬ್ಬ
ಗಣೇಶ ಹಬ್ಬ ಆಚರಣೆ ಯಿಂದ ಒಗ್ಗಟ್ಟಿನ ಮಂತ್ರ ಹಾಗೂ ಭಾವೈಕ್ಯತೆ ಬಿತ್ತುವ ಕಾರ್ಯವಾಗುತ್ತಿದೆ
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರನ್ನು ಒಗ್ಗೂಡಿಸಲು ಪ್ರಾರಂಭಿಸಿದ ಗಣೇಶ ಹಬ್ಬದ ಆಚರಣೆಯಿಂದ ಒಗ್ಗಟ್ಟು ಮತ್ತು ಸಾಮರಸ್ಯ ಮೂಡಿದೆ ಎಂದರು ಹಬ್ಬಗಳಿಂದ ಆದರ್ಶ ಬೋಧನೆಯಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ,ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕಷ್ಣಮೂರ್ತಿ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಕರ್ನಾಟಕ ವಿಪ್ರ ವೇದಿಕೆಯ ಸಂಚಾಲಕರಾದ ಸ್ವಾತಿ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್ ,ಸುಚೇಂದ್ರ ,ಚಕ್ರಪಾಣಿ ,ಪ್ರವೀಣ್ ,ಹಾಗೂ ಇನ್ನಿತರರು ಹಾಜರಿದ್ದರು.

ವರದಿ : ನಂದಿನಿ ‌ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *