“ಸಿಎಂ ಹಾಗೂ ಮಾಜಿ ಸಿಎಂ ಒಂದೇ ಕಾರಿನಲ್ಲಿ ಎಚ್ಎಎಲ್ ಏರ್ ಪೋರ್ಟ್ ಕಡೆ”

ಬೆಂಗಳೂರು: ಸಿಎಂ ಹಾಗೂ ಮಾಜಿ ಸಿಎಂ ಒಂದೇ ಕಾರಿನಲ್ಲಿ ಎಚ್ಎಎಲ್ ಏರ್ ಪೋರ್ಟ್ ಕಡೆ.

ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಿಎಂ ಹಾಗೂ ಮಾಜಿ ಸಿಎಂ ಒಂದೇ ಕಾರಿನಲ್ಲಿ ಹೆಚ್ಎಎಲ್ ಏರ್ಪೋರ್ಟಿಗೆ ಹೊರಟಿದ್ದು ವಿಶೇಷವಾಗಿತ್ತು.
ಕಾವೇರಿ ನಿವಾಸದಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಆರ್ ಅಶೋಕ್ ಹೊರಟರು ಸಿಎಂ ಮತ್ತು ಅಶೋಕ್ ರವರು ಯಡಿಯೂರಪ್ಪ ಕಾರಿನಲ್ಲಿ ಕುಳಿತು ಏರ್ಪೋರ್ಟ್ ಪ್ರಯಾಣಿಸಿದರು.
ಮಂಗಳೂರಿನ ಮೋದಿ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಅಶೋಕ್ ಭಾಗಿಯಾಗಲಿದ್ದಾರೆ, 3800 ಕೋಟಿ ರೂ ಮೊತ್ತದ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಇಂದು ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿದೆ. ಈ ಸಮಾವೇಶಕ್ಕೆ ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸುಮಾರು 1.5 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ.
ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾತನಾಡುವರು .ಕೇಂದ್ರ ಸಚಿವ ಸರ್ಬಾನಂದ ಸೋನಾವಾಲಾ ಅವರು ಸ್ವಾಗತಿಸುವರು. ಶಿಷ್ಟಾಚಾರದಂತೆ ಪ್ರಧಾನಿಯವರು ಭಾಗವಹಿಸುವ ವೇದಿಕೆಯಲ್ಲಿ 10 ಮಂದಿಗೆ ಮಾತ್ರ ಅವಕಾಶ. ರಾಜ್ಯಪಾಲರು, ಮೂರು ಕೇಂದ್ರ ಸಚಿವರು, ಮುಖ್ಯಮಂತ್ರಿ, ಮೂವರು ರಾಜ್ಯ ಸಚಿವರು, ಸಂಸದರು ಇರುತ್ತಾರೆ. ಸರಕಾರಿ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರನ್ನು ವೇದಿಕೆಯಲ್ಲಿ ಅವಕಾಶ ಕಲ್ಪಿಸಲು ಪ್ರಧಾನಿಯವರ ಕಾರ್ಯಾಲಯದಿಂದ ಅನುಮೋದನೆ ಕೊರಲಾಗಿದೆ.

ವರದಿ : ಸಿಂಚನ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *