“I N S ವಿಕ್ರಾಂತ್ ಅನ್ನು ಇಂದು ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕಾರ್ಯರಂಭಗೊಳಿಸಿದ ಪ್ರಧಾನಿ ಮೋದಿ”

ಕೊಚ್ಚಿ: I N S ವಿಕ್ರಾಂತ್ ಅನ್ನು ಇಂದು ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕಾರ್ಯರಂಭಗೊಳಿಸಿದ ಪ್ರಧಾನಿ ಮೋದಿ.

ಭಾರತದ ಮೊದಲ ಸ್ವದೇಶಿ ವಿಮಾನ ವಾಹಕ ನೌಕೆ ಐ ಎನ್ ಎಸ್ ವಿಕ್ರಾಂತ ಅನ್ನು ಇಂದು ಕೊಚಿನ್ ಸಿಪಿಆರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಾರಂಭಗೊಳಿಸಿದರು.
ಈ ವೇಳೆ ಮಾತನಾಡಿದ ಮೋದಿ, ಇಂದು ಭಾರತವು ದೇಶಿಯ ತಂತ್ರಜ್ಞಾನದೊಂದಿಗೆ ಬೃಹತ್ ವಿಮಾನ ವಾಹಕ ನೌಕೆಯನ್ನು ತಯಾರಿಸುವ ವಿಶ್ವದ ಕೆಲವೇ ದೇಶಗಳಿಗೆ ಸೇರಿಕೊಂಡಿದೆ. ಇಂದು ಐಎನ್ಎಸ್ ವಿಕ್ರಂತ್ ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ, ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ ಎಂದರು.
ಐಎನ್ಎಸ್ ವಿಕ್ರಾಂತ್ ಅನ್ನು ಭಾರತ ಆತ್ಮನಿರ್ಭರವಾಗುತಿರುವುದರ ವಿಶಿಷ್ಟ ಪ್ರತಿಬಿಂಬ ಎಂದು ಕರೆದ ಮೋದಿ, ಗುರಿಗಳು ತ್ವರಿತವಾಗಿದ್ದರೆ, ಪ್ರಯಾಣಗಳು ದೀರ್ಘವಾಗಿದ್ದರೆ ,ಸಾಗರ ಮತ್ತು ಸವಾಲುಗಳು ಅಂತ್ಯವಿಲ್ಲದಾದರೆ ಆಗ ಭಾರತದ ಉತ್ತರ ವಿಕ್ರಂತ್. ಸ್ವತಂತ್ರದ ಅಮೃತದ ಅನುಪಮವಾದ ಅಮೃತ ವಿಕ್ರಾಂತ. ವಿಕ್ರಾಂತ್ ಭಾರತ ಸ್ವಾವಲಂಬಿಯಾಗುವುದರ ವಿಶಿಷ್ಟ ಪ್ರತಿಬಿಂಬವಾಗಿದೆ.
ಐಎನ್ಎಸ್ ವಿಕ್ರಂತ್ ದೇಶದ ನೌಕಾ ಬಲವನ್ನು ಹೆಚ್ಚಿಸಲು ಸಜ್ಜಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಯುದ್ಧ ನೌಕೆಯನ್ನು “ಚಲನೆಯಲ್ಲಿರುವ ನಗರ” ಎಂದೇ ಗುರುತಿಸಲಾಗಿದೆ.

ಭಾರತದಲ್ಲಿ ನಿರ್ಮಾಣವಾಗಿರುವ ಅತಿ ದೊಡ್ಡ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ 262 m ಉದ್ದ ಮತ್ತು 62 ಮೀಟರ್ ಅಗಲವಾಗಿದೆ,ರಷ್ಯಾದ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾದ ಎನ್ ಎಸ್ ವಿಕ್ರಮಾದಿತ್ಯ ನಂತರ ಇದೇ ದೇಶದ ಎರಡನೇ ವಿಮಾನವಾಹಕ ನೌಕೆಯಾಗಿದೆ.
ಈ ವಿಮಾನವಾಹಕ ನೌಕೆಯ ಹ್ಯಾಂಗರ್ ಎರಡು ಒಲಂಪಿಕ್ ಗಾತ್ರದ ಪೂಲ್ ಗಳಷ್ಟು ದೊಡ್ಡದಾಗಿದೆ. ಆರಂಭದಲ್ಲಿ ಯುದ್ಧ ನೌಕೆ ಮಿಗ್ ಫೈಟರ್ ಜೆಟ್ ಗಳು ಮತ್ತು ಕೆಲವು ಹೆಲಿಕ್ಯಾಪ್ಟರ್ ಗಳನ್ನು ಒಯ್ಯುತ್ತದೆ.

ಯುದ್ಧ ನೌಕೆಯ ಆಜ್ಞೆಯನ್ನು ಪಡೆದ ನಂತರ ನೌಕಾ ಪಡೆಯು ವಾಯುಯಾನ ಪ್ರಯೋಗವನ್ನು ನಡೆಸುತ್ತದೆ. ಐಎನ್ಎಸ್ ವಿಕ್ರಂತ್ 1,600 ಸಿಬ್ಬಂದಿ ಮತ್ತು 30 ವಿಮಾನಗಳಿಗೆ ಅವಕಾಶ ಕಲ್ಪಿಸುತ್ತದೆ. ಗಂಟೆಗೆ 3,000 ಚಪಾತಿ ತಯಾರಿಸುವ ಯಂತ್ರಗಳನ್ನು ಇದರಲ್ಲಿ ಅಳವಡಿಸಲಾಗಿದೆ.

16 ಹಾಸಿಗೆಗಳ ಆಸ್ಪತ್ರೆ, 250 ಟ್ಯಾಂಕರ್ ಇಂಧನ ಮತ್ತು 2,400 ಕಂಪಾರ್ಟ್ಮೆಂಟ್ ಗಳನ್ನು ಇದು ಹೊಂದಿದೆ. ಇದರ ನಿರ್ಮಾಣಕ್ಕೆ ಒಂದು ದಶಕಗಳೇ ಬೇಕಾಯಿತು.

ವರದಿ : ಸಿಂಚನ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *