ಮಲಯಾಳಿ ಸಮಾಜಂ ಸಾಗರ (ರಿ) ವತಿಯಿಂದ ‘ಮೈತ್ರಿ (My3 X1 ಸಾಗರ)’ ಕ್ರಿಕೆಟ್ ಕ್ಲಬ್ ಸ್ಥಾಪನೆ

ಮಲಯಾಳಿ ಸಮಾಜಂ ಸಾಗರ (ರಿ) ವತಿಯಿಂದ ‘ಮೈತ್ರಿ (My3 X1 ಸಾಗರ)’ ಕ್ರಿಕೆಟ್ ಕ್ಲಬ್ ಸ್ಥಾಪನೆ

ಸಾಗರ: ಮಲಯಾಳಿ ಸಮಾಜಂ ಸಾಗರ (ರಿ) ಯುವ ಘಟಕದ ವತಿಯಿಂದ “ಮೈತ್ರಿ (My3 X1 ಸಾಗರ)” ಎಂಬ ಹೆಸರಿನಲ್ಲಿ ಹೊಸ ಕ್ರಿಕೆಟ್ ಕ್ಲಬ್ ಅನ್ನು ಸ್ಥಾಪಿಸಲಾಗಿದೆ. ಸಮಾಜದ ಎಲ್ಲಾ ಕ್ರೀಡಾ ಚಟುವಟಿಕೆಗಳು ಇನ್ನುಮುಂದೆ ಈ ಕ್ರಿಕೆಟ್ ಕ್ಲಬ್‌ನಡಿ ನಡೆಯಲಿವೆ ಎಂದು ಸಂಘಟನೆ ತಿಳಿಸಿದೆ.

ಕ್ಲಬ್‌ ಸದಸ್ಯರೊಂದಿಗೆ ಮಾತನಾಡಿದ ತಂಡದ ನಾಯಕರಾದ ಜಾನ್ಸನ್ ಮತ್ತು ಲಿಜೋ ಅವರು, ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಉದ್ಯೋಗದ ಒತ್ತಡದಿಂದ ಉಂಟಾಗುತ್ತಿರುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಹೇಳಿದರು. “ಪ್ರತಿಯೊಬ್ಬರ ಜೀವನದಲ್ಲೂ ಕ್ರೀಡೆ ಮುಖ್ಯವಾಗಿದೆ. ಆರೋಗ್ಯಕರ ದೇಹ ಮತ್ತು ಮನಸ್ಸಿಗೆ ನಿಯಮಿತ ಕ್ರೀಡಾ ಚಟುವಟಿಕೆ ಅಗತ್ಯ,” ಎಂದು ಅವರು ಅಭಿಪ್ರಾಯಪಟ್ಟರು.

ಸಮಾಜದ ಸದಸ್ಯರನ್ನು ವಯೋಮಾನದ ಆಧಾರದ ಮೇಲೆ ಮಕ್ಕಳ ವಿಭಾಗ, 18 ವರ್ಷ ಒಳಗಿನವರು, 40 ವರ್ಷ ಒಳಗಿನವರು ಹಾಗೂ 50 ವರ್ಷ ಮೇಲ್ಪಟ್ಟವರು ಎಂಬಂತೆ 3 ರಿಂದ 4 ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳನ್ನು ಆಯೋಜಿಸಿ, ಬೇಸಿಗೆ ರಜೆ ಸಂದರ್ಭಗಳಲ್ಲಿ “ಸ್ಪೋರ್ಟ್ಸ್ ಡೇ” ಕಾರ್ಯಕ್ರಮವನ್ನು ನಡೆಸುವ ಯೋಜನೆ ರೂಪಿಸಲಾಗಿದೆ.

ಸದಸ್ಯರ ನಡುವೆ ಪರಸ್ಪರ ಪರಿಚಯ ಹಾಗೂ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ “ಡೆ ಔಟ್” ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವುದಾಗಿ ಸಂಘಟನೆ ತಿಳಿಸಿದೆ.


ಈ ಸಂದರ್ಭದಲ್ಲಿ ಮಲಯಾಳಿ ಸಮಾಜಂ ಸಾಗರ (ರಿ) ಅಧ್ಯಕ್ಷ ಸಿಸೆಲ್ ಪಣಯಿಲ್ ಸೋಮನ, ಉಪಾಧ್ಯಕ್ಷ ಜಾನ್, ಕಾರ್ಯದರ್ಶಿ ಸಾಬು ಫಿಲಿಪ್, ಆಡಳಿತ ಮಂಡಳಿ ಸದಸ್ಯರಾದ ಗೋಪೀ, ಸಿಬಿನ್ ಹಾಗೂ ಕ್ರಿಕೆಟ್ ತಂಡದ ಸದಸ್ಯರು ಉಪಸ್ಥಿತರಿದ್ದರು. ಇದಲ್ಲದೆ, ಕ್ರಿಕೆಟ್ ಕ್ಲಬ್ ಸದಸ್ಯರಾಗಿ ಜಾನ್ಸನ್ ಥಾಮಸ್, ಲಿಜೋ ಮ್ಯಾಥ್ಯೂ, ಜಿನು ಜೆ, ಸಾಜು ಆಂಟನಿ, ಚಾರ್ಲ್ಸ್ ಜೇಕಬ್, ಅಬ್ದುಲ್ ಅಝೀಸ್, ಅಭಿಲಾಶ್, ಸಿಜೋ, ನುಮಾನ್, ಸಿಬಿ, ಸುಬ್ಬು, ಮಂಜು ಮತ್ತು ಆಲ್ಫ್ರೆಡ್ ಅವರನ್ನು ಸೇರಿಸಲಾಗಿದೆ.

Leave a Reply

Your email address will not be published. Required fields are marked *