ಕೊಪ್ಪಳ: ಗಂಗಾವತಿ ನಗರದ ಸಾರ್ವಜನಿಕ ಆಸ್ಪಾತ್ರೆಯಲ್ಲಿ ಕೆ.ಕೆ.ಆರ್.ಡಿ.ಯೋಜನೆ.

ಗಂಗಾವತಿ ನಗರದ ಸಾರ್ವಜನಿಕ ಆಸ್ಪಾತ್ರೆಯಲ್ಲಿ ಕೆ.ಕೆ.ಆರ್.ಡಿ.ಯೋಜನೆಯಡಿಯಲ್ಲಿ ಸುಮಾರು
3 ಕೋಟಿ ರೂಪಾಯಿ ವೆಚ್ಚದಲ್ಲಿ ಇಂದು ನೂತನವಾಗಿ ಸಿ.ಟಿ.ಸ್ಕ್ಯಾನ್ ಯಂತ್ರದ ಪರಿವೀಕ್ಷಣೆಯನ್ನ ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಮತ್ತು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ವೀಕ್ಷಣೆ ಮಾಡಿದರು
ನಂತರ ಶಾಸಕ ಪರಣ್ಣ ಮನವಳ್ಳಿ ಮಾತನಾಡಿ 80 ಸ್ಲೈಸ್ ಹೃದಯ ರಕ್ತದೋಳಗಿನ ಸಂಚಾರ ನೋಡಬಹುದು.ನಿತ್ಯ ನಾಲ್ಕಾರು ರೋಗಿಗಳಿಗೆ ಸ್ಕ್ಯಾನಿಂಗ್ ಮಾಡಿಸಲು ಹೊರಗಡೆಗೆ ಕಳುಹಿಸಲಾಗುತ್ತಿತ್ತು ಇನ್ನೂ ಕೆಲವು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಕೆಲಸ ನಡೆಯುತ್ತದೆ ಎಂದರು.
ರೇಷನ್ ಕಾರ್ಡು ಇದ್ದವರಿಗೆ, ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಸ್ಕ್ಯಾನ ಮಾಡಲಾಗುತ್ತಿದೆ . ಎಪಿಲ್ ಕಾರ್ಡುದಾರರಿಗೆ
ನಿಗದಿತ ಬೆಲೆ ಹಾಕಲಾಗುತ್ತದೆ.ಹೊರಗಡೆ ಸಿಟಿ ಸ್ಕ್ಯಾನ್ ಮಾಡಿದರೆ, 4500 ಆಗುತ್ತೆ, ಆದರೆ ಇಲ್ಲಿ ಉಚಿತವಾಗಿ ದೊರೆಯಲಿದೆ. ಕೊಪ್ಪಳ ಫುಲ್ ಬಾಡಿ ಸ್ಕ್ಯಾನರ್, ಎಲುಬು, ರಕ್ತ ಸೇರಿದಂತೆ ಎಲ್ಲ ರೋಗಗಳ ಪತ್ತೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ. ನಗರ ಯೋಜನೆ ಪ್ರಾದಾಧಿಕಾರಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ. ನಗರಸಭೆ ಸದಸ್ಯ ವಾಸುದೇವ ನವಲಿ.ಉಮೇಶ ಸಿಂಗನಾಳ.
ಪರಶುರಾಮ ಮಡ್ಡೇರ್,ನವೀನಕುಮಾರ ಪಾಟೀಲ್. ಬಗರ ಹುಕಂ ಸಮಿತಿಯ ಸದಸ್ಯದ ಸಿದ್ದಲಿಂಗಯ್ಯ ಗಡ್ಡಿಮಠ. ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಚ್ಚಪ್ಪ ಸಿದ್ದಾಪುರ ಆರೋಗ್ಯ ಸಮಿತಿಯ ಸದಸ್ಯ ಟಿ.ಆರ್.ರಾಯಿಭಾಗಿ.ಬಿಜೆಪಿ ಮಹಿಳಾ ನಗರ ಘಟಕ ಅಧ್ಯಕ್ಷ. ರೇಖಾ ರಾಯಿಭಾಗಿ.ಕಾರ್ಯದರ್ಶಿ.
ಶೋಭ ರಾಯಿಕಾರ್.ಮಹಿಳಾ ಮುಖಂಡರಾದ ಲಲಿತಮ್ಮ.ವೀಠಪ್ಪ.ಹೊಸಳ್ಳಿ ಶ್ರೀನಾಥ್. ಶಿವಪ್ಪ.ಪೂಜಾರ.ಸೇರಿದಂತೆ ಮತ್ತೀತರರು ಉಪಸ್ಥೀತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



