“ಯುವಕರ ಶಕ್ತಿ ಪ್ರಧಾನಿ ನರೇಂದ್ರ ಮೋದಿ”

ಕೊಪ್ಪಳ : ಯುವಕರ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಹೇಳಿದರು.

ಕುಕನೂರ ಪಟ್ಟಣದ ಸರ್ಕಾರಿ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮತ್ತು ಕೈಗಾರಿಕಾ ಮತ್ತು ತರಬೇತಿ ಉದ್ಯೋಗ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶಿಕ್ಷು ಮೇಳ ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರು ಯುವಜನತೆಯ ಶಕ್ತಿಯಾಗಿದ್ದಾರೆ.

ಇಂದು ಅಲ್ಲದೆ ನಿರುದ್ಯೋಗವನ್ನು ಹೋಗಲಾಡಿಸಲು ಐಟಿಐ ಮುಗಿಸಿದ ವಿದ್ಯಾರ್ಥಿಗಳಿಗೆ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ 1ವರ್ಷಗಳ ತರಬೇತಿ ಹೊಂದಿ ನಂತರ ಬಹುಷ್ಯ ಭದ್ರಗೊಳಿಸಲು ಯೋಗ್ಯ ವಾದ ತರಬೇತಿಯನ್ನು ಹಮ್ಮಿಕೊಂಡಿದ್ದಾರೆ.

ರಾಷ್ಟ್ರಾದ್ಯಂತ ಇದು ನಿಜಕ್ಕೂ ಅತ್ಯಮೂಲ್ಯವಾದ ಕೆಲಸವಾಗಿದೆ ಅಲ್ಲದೆ ಯುವಜನತೆ ಐದರಿಂದ ಹತ್ತು ಸಾವಿರಕ್ಕೆ ದುಡಿಯುವ ಬದಲಾಗಿ ರಾಷ್ಟ್ರೀಯ ಕಂಪೆನಿಗಳಲ್ಲಿ ಸೇವೆ ಸಲ್ಲಿಸಿ ಉತ್ತಮ ಮಟ್ಟದಲ್ಲಿ ಜೀವನ ರೂಪಿಸಿಕೊಳ್ಳಲು ಭದ್ರ ಬುನಾದಿ ಹಾಕುತ್ತಿದ್ದಾರೆ.

ಭಾರತದಾದ್ಯಂತ ವಿಸ್ತರಣೆಯಾಗುತ್ತಿದೆ ಇದರಲ್ಲಿ ಯಾವುದೇ ರೀತಿಯಾದಂತಹ ಕಷ್ಟಪಟ್ಟು ಕೆಲಸ ಮಾಡುವ ಕೌಶಲ್ಯವಿಲ್ಲ ನಮ್ಮ ಶಕ್ತಿಯನ್ನು ವಿಕೇಂದ್ರೀ ಕಳುಹಿಸುವುದಕ್ಕಾಗಿ ಈ 1ತರಬೇತಿ ಅನುಕೂಲತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ ಇದರ ಉಪಯೋಗವನ್ನು ಯುವಜನತೆ ಉಪಯೋಗಿಸಿಕೊಂಡು ಉತ್ತಮ ಜೀವನದಲ್ಲಿ ರೂಢಿಸಿಕೊಳ್ಳಲು ಮುಂದಾಗಬೇಕೆಂದು ಹೇಳಿದರು .

ಈ ಸಂದರ್ಭದಲ್ಲಿ ಬೆಂಗಳೂರಿನ ಶಿಶಿಕ್ಷು ಮೇಳದ ಸಂಚಾಲಕಿ ಪಿ. ಅಮೃತಾ, ಮಂಗ್ಳೂರು ತರಬೇತಿ ಕೇಂದ್ರದ ಅಧಿಕಾರಿ ವೇಶಗಾರಿ ಶರಣಪ್ಪ , ಐಟಿಐ ಅಧೀಕ್ಷಕಿ ನೀಲಕ್ಕ , ಕುಕನೂರು ತರಬೇತಿ ಅಧಿಕಾರಿ ತಿಮ್ಮರಾಜು ವಿ , ಹೀರೋ ಹೋಂಡಾ ಕಂಪೆನಿಯ ಪ್ರತಿನಿಧಿ ಗುರುರಾಜ, ಟೊಯೋಟ ಕಂಪೆನಿಯ ಮತ್ತು ಕಿರ್ಲೋಸ್ಕರ್ ಕಂಪೆನಿಯ ವಾಸುದೇವ ಮಾತನಾಡಿದರು . ತರಬೇತಿ ಅಧಿಕಾರಿ ಯಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು , ಮಾಡಿದ್ದೀನಿ ಶಿವಲೀಲಾ ನಿರೂಪಣೆ ಮಾಡಿದರು, ಪದ್ಮಾವತಿ ಬಿ ಮುರಾರಿ, ನಬೀ ಸಾಬ್ ಬಿನ್ನಾಳ ,ಭೋಜರಾಜ್ ಸೊಪ್ಪಿಮಠ, ಮಯೂರ್ ತಳವಾರ್ , ತಿಪ್ಪಣ್ಣ ಹೊಸಮನಿ, ಶಬ್ಬೀರ್ ಬಿನ್ನಾಳ , ವಿದ್ಯಾರ್ಥಿಗಳು ಹಾಗೂ ಇತರರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *