ಗುಜರಾತ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಂಟೈನರ್.

ಗುಜರಾತ್ ವಲ್ಸಾದ್ ನ ಮೋತಿವಾಡ ಗ್ರಾಮದ ಬಳಿ NH48 ನಲ್ಲಿ ಕಂಟೈನರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂಣ೯ ಸುಟ್ಟು ಕರಕಲಾಗಿದೆ.
5 ಆಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿವೆ. ಈ ಕುರಿತು ಮಾತನಾಡಿದ ಅಗ್ನಿಶಾಮಕ ಅಧಿಕಾರಿಯೊಬ್ಬರು ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ಬಂದೆವು. ಟ್ರಕ್ ಮುಂಬೈನಿಂದ ಅಹಮದಾಬಾದ್ ಗೆ ಶಂಪೂ ಮತ್ತು ಸುಗಂಧ ದ್ರವ್ಯದ ಬಾಟಲಿಗಳನ್ನು ಹೊತ್ತೊಯ್ಯುತ್ತಿತ್ತು.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸತತ ಒಂದೂವರೆ ಗಂಟೆಗಳ ಕಾಲ ಬೆಂಕಿ ನಂದಿಸಿರುವುದಾಗಿ ತಿಳಿಸಿದರು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

