ಚಾಮರಾಜನಗರ : ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸಂತ್ರಸ್ತರ ಜೊತೆಗೆ ಸಂವಾದ.

ಭಾರತ್ ಜೋಡೋ ಯಾತ್ರೆಯ ನಡುವೆ ರಾಹುಲ್ ಗಾಂಧಿ ಚಾಮರಾಜನಗರದ ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸಿನಲ್ಲಿ ಸೋಲಿಗರು ಮತ್ತು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸಂತ್ರಸ್ತರ ಜೊತೆಗೆ ಸಂವಾದ ನಡೆಸಿದ್ರು . ಇನ್ನು ರಾಹುಲ್ ಗಾಂಧಿ ಜೊತೆಗಿನ ಸಂವಾದದ ವೇಳೆ ಕುಟುಂಬದ ಸದಸ್ಯರು ಕಣ್ಣೀರಿಟ್ರು .
ಸಂವಾದದಲ್ಲಿ ಆಮ್ಲಜನಕ ದುರಂತದಲ್ಲಿ ತಂದೆಯನ್ನು ಕಳೆದುಕೊಂಡ ಸಂತ್ರಸ್ತರು ಮಗುವೊಂದು ಅಳುತ್ತಾ ಮಾತನಾಡಿ , ನಮ್ಮ ಅಪ್ಪ ಇದ್ದಾಗ ನಾನು ಏನೇ ಕೇಳಿದ್ರು ತಂದು ಕೊಡುತ್ತಿದ್ರು . ನಮ್ಮ ಅಪ್ಪ ತೀರಿ ಹೋದ್ರು . ನಮ್ಮ ಅಮ್ಮಗೆ ಏನು ತೆಗೆದುಕೊಡುವುದಕ್ಕೆ ಆಗ್ತಿಲ್ಲ . ಅಪ್ಪನನ್ನು ಡಾಕ್ಟರ್ ಗಳೆ ಸಾಯಿಸಿದ್ದು , ಆದ್ರೆ ನಾನು ಡಾಕ್ಟರ್ ಓದಿ ಜನಗಳ ಸೇವೆ ಮಾಡ್ತೀನಿ ಅಂತಾ ರಾಹುಲ್ ಗಾಂಧಿ ಮುಂದೆ ಅಳಲು ತೋಡಿಕೊಂಡು.
ಸರ್ಕಾರ ಸಹಾಯ ಮಾಡಬಹುದಿತ್ತು . ನಾವು ಪಕ್ಷವಾಗಿ ಸಹಾಯ ಮಾಡಬೇಕು . ಮುಂದೆ ಸರ್ಕಾರ ಬರುತ್ತದೆ ಪರಿಹಾರ ಕೊಡಲು ಯತ್ನಿಸುತ್ತೇವೆ . ರಾಹುಲ್ ಗಾಂಧಿ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವಾಗ ಸ್ವತಃ ಡಿಕೆ ಶಿವಕುಮಾರ್ ಮಗುವಿನ ಅಳು ನೋಡಿ ಕಣ್ಣೀರಿಟ್ರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


