ಚಾಮರಾಜನಗರ: ಜನರ ಸಂಕಷ್ಟಗಳನ್ನು ಆಲಿಸಿ ಪರಿಹರಿಸುವುದೇ ರಾಮರಾಜ್ಯದ ಪರಿಕಲ್ಪನೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಮತ.

ಅಕ್ಟೋಬರ್ ಸಮಾಜದ ಕಟ್ಟಕಡೆಯ ಜನರ ಸಂಕಷ್ಟಗಳನ್ನು ಆಲಿಸಿ ಪರಿಹರಿಸುವುದರ ರಾಮರಾಜ್ಯದ ಕಲ್ಪನೆಯಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಗರದ ಡಾಕ್ಟರ್ ರಾಜ್ ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಮಾಯಣ ಮಹಾಭಾರತ ದೇಶದ ಶ್ರೇಷ್ಠ ಗ್ರಂಥಗಳಾಗಿದ್ದು ಅದರಲ್ಲೂ ರಾಮಾಯಣ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಜಗತ್ಪ್ರಸಿದ್ಧವಾಗಿದೆ.
ಮಹಾತ್ಮಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ನಿಂದ ಪ್ರೇರೇಪಿತರಾಗಿದ್ದರು ಶ್ರೀರಾಮನ ರಾಮರಾಜ್ಯ ಇಂದಿಗೂ ಮಾದರಿಯಾಗಿದೆ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುನ್ನಡೆಗೆ ಬರಬೇಕು ಎಂದು ಶಾಸಕರಾದ ಸಿ .ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಇದೇ ವೇಳೆ ವಸತಿ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ವಾಲ್ಮೀಕಿ ಜಯಂತಿ ಅಂಗವಾಗಿ ನೀಡಿರುವ ಸಂದೇಶವನ್ನು ಕಾರ್ಯಕ್ರಮದಲ್ಲಿ ವಾಚಿಸಲಾಯಿತು.
ವಾಲ್ಮೀಕಿ ಮಹರ್ಷಿಗಳು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ನೆಲೆಯಾಗಿದ್ದ ಅವರು ವಾಲ್ಮೀಕಿ ರಚಿತ ರಾಮಾಯಣವು ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ಮಹಾ ಕಾವ್ಯವಾಗಿದೆ ಮಹಾಕಾವ್ಯದಲ್ಲಿ “ಮಾತೃದೇವೋಭವ” “ಪಿತೃದೇವೋಭವ” ‘ಆಚಾರ್ಯದೇವೋಭವ” ಮತ್ತು” ಅತಿಥಿ ದೇವೋಭವ’ ದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ ಜೊತೆಗೆ ಮಮತೆ ಸಮತೆ ಭ್ರಾತೃತ್ವ ತ್ಯಾಗ ದೇಶಪ್ರೇಮ ಅಳಿಲುಸೇವೆ ಪಿತೃವಾಕ್ಯ ಪರಿಪಾಲನೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ ಶ್ರೇಷ್ಠ ಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿಗಳು ಬಗ್ಗೆ ರಾಮರಾಜ್ಯದ ಪರಿಕಲ್ಪನೆ ನೀಡಿದ ಮಹಾನ್ ದಾರ್ಶನಿಕರ ಅಜ್ಞಾನದಿಂದ ಸುಜ್ಞಾನದಡೆಗೆ ಸಾಗುವ ದಾರಿಯನ್ನು ತೋರಿಸಿಕೊಟ್ಟ ತಪಸ್ಸುಗಳು ಎಲ್ಲಿಯವರೆಗೆ ಭೂಮಿಯ ಮೇಲೆ ಬೆಟ್ಟಗುಡ್ಡಗಳು ನದಿಗಳು ಜೀವರಾಶಿಗಳು ಇರುತ್ತವೆಯೋ ಅಲ್ಲಿಯವರೆಗೆ ರಾಮಾಯಣ ಜೀವಂತವಾಗಿರುತ್ತದೆ.ಮತ್ತು ವಾಲ್ಮೀಕಿಯವರ ಹೆಸರು ಅಜರಾಮರವಾಗಿರುತ್ತದೆ ಪರಿಶಿಷ್ಟ ಪಂಗಡಗಳ ಸರ್ವತೋಮುಖ ಅಭಿವದ್ಧಿಗೆ ಸರಕಾರ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ ಎಂದು ತಿಳಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ತಮ್ಮ ಸಂದೇಶದಲ್ಲಿ ಕೋರಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ರಾಮಾಯಣ ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿಯವರು ಜನಮಾನಸದಲ್ಲಿ ಇದ್ದಾರೆ ಭೂಮಿಯ ಮೇಲೆ ಪ್ರಕೃತಿ ನದಿ ಬೆಟ್ಟ ಗುಡ್ಡಗಳು ಇರುವವರೆಗೂ ವಾಲ್ಮೀಕಿ ರಾಮಾಯಣ ಚಿರ ಸ್ಥಾಯಿಯಾಗಿ ಹುಟ್ಟಿನಿಂದ ಯಾರೂ ಕೆಟ್ಟವರಲ್ಲ ನಾವು ಮಾಡುವ ಕ್ರಿಯೆಗಳು ಪಾತ್ರಗಳು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ತಿಳಿಸಿದರು.
ರಾಮಾಯಣ ಭಾರತೀಯರ ಜೀವನ ಚರಿತ್ರೆ ಸಂಸ್ಕೃತಿ ಮೌಲ್ಯಗಳನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ ಭರತ ಖಂಡದ ಪ್ರಕೃತಿ ಸೌಂದರ್ಯವನ್ನು ರಾಮಾಯಣದಲ್ಲಿ ವರ್ಣಿಸಿರುವ ವಾಲ್ಮೀಕಿಯವರುಕೌಟುಂಬಿಕ ಮೌಲ್ಯಗಳು ಆದರ್ಶ ವ್ಯಕ್ತಿತ್ವವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅನಾದಿಕಾಲದಿಂದಲೂ ವರ್ತಮಾನದವರೆಗೂ ನಿರಂತರವಾಗಿ ವಾಲ್ಮೀಕಿಯವರು ಜನುಮದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಸುತ್ತೂರು ಎಸ್ ಮಾಲಿನಿ ಅವರು ಮುಖ್ಯ ಭಾಷಣ ಮಾಡಿ ಮಾತಾಡಿ ರಾಮಾಯಣ ಮಹಾಭಾರತ ಜಗತ್ತಿನ 2ಸಾರ್ವಕಾಲಿಕ ಶ್ರೇಷ್ಠ ಕಲಾಕೃತಿಗಳಾಗಿವೆ ವಾಲ್ಮೀಕಿಯವರ ರಾಮಾಯಣದಲ್ಲಿ 26 ಸಾವಿರ ಶ್ಲೋಕಗಳು 7 ಕಾಂಡಗಳಿವೆ .ರಾಮಾಯಣದಲ್ಲಿ ಆದರ್ಶ ಪುರುಷ ಮಹಿಳೆ ಸೇರಿದಂತೆ ಇತರ ಸಂಬಂಧಗಳುಸೇರಿದಂತೆ ಇತರ ಸಂಬಂಧಗಳು ಹೇಗೆ ಇತರರಿಗೆ ಮಾದರಿಯಾಗಿರಬೇಕು ಆದರ್ಶ ನಾಯಕತ್ವದ ಹೇಗಿರಬೇಕೆಂಬುದನ್ನು ಕಟ್ಟಿಕೊಂಡು ಕೊಡಲಾಗಿದೆ ಎಂದರು .
ವೇಳೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕೊಳ್ಳೇಗಾಲದ ವಿದ್ಯಾರ್ಥಿನಿ ಲಿಖಿತ ರವರೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 1 ಲಕ್ಷ ಪ್ರೋತ್ಸಾಹಧನ ನೀಡಿ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿ ಸಮ್ಮಾನಿಸಲಾಯಿತು.
ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ನಿಜಗುಣರಾಜು. ನಗರಸಭೆ ಅಧ್ಯಕ್ಷೆ ಆಶಾ . ಸದಸ್ಯರಾದ ಪ್ರಕಾಶ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎಂ. ಗಾಯತ್ರಿ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ. ಪಿ. ಶಿವಕುಮಾರ್. ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ.ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಸುಂದರರಾಜ್.ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪ್ರಮೋದ್ ಕುಮಾರ್ .ಕೆಲ್ಲಂಬಳ್ಳಿ ಸೋಮನಾಯಕ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


