“ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕೃಷ್ಣರಾಜಪೇಟೆ ಯೋಗಪಟು ಅಲ್ಲಮಪ್ರಭು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ”

ಕೆ ಆರ್ ಪೇಟೆ : ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕೃಷ್ಣರಾಜಪೇಟೆ ಯೋಗಪಟು ಅಲ್ಲಮಪ್ರಭು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ್ ಡೆವೆಲೆಪ್ ಮೆಂಟ್ ಫೌಂಡೇಶನ್ ತಮಿಳುನಾಡು ರಾಜ್ಯದ ಸಂಸ್ಥಾಪಕ ಅಧ್ಯಕ್ಷ ಅಜಿತ್ ಕುಮಾರ್ ಅವರ ನೇತೃತ್ವದಲ್ಲಿ ಗೋವಾ ರಾಜ್ಯದ ಕೊಲಂಗುಟೆ ಬೀಚ್ ನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ನಡೆದ 19 ವರ್ಷದ ಮೇಲ್ಪಟ್ಟವರಿಗೆ ನಡೆದ ನಾಲ್ಕನೇ ರಾಷ್ಟ್ರಮಟ್ಟದ ಯೋಗ ಸ್ಪರ್ದೆಯಲ್ಲಿ ಕೆ ಆರ್ ಪೇಟೆ ಅಲ್ಲಮಪ್ರಭು ಎಸ್ ಎಂ ಅವರು ಚಿನ್ನದ ಪದಕ ಪಡೆದಿದ್ದಾರೆ.

ಯೋಗ ಸ್ಪರ್ದೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಶಾಸಕರಾದ ಮೈಕೆಲ್ ಲೋಬೋ ಅವರು ನೆರವೇರಿಸಿದರು.

ದೇಶದ ಹಲವು ಭಾಗಗಳಿಂದ ಆಗಮಿಸಿದ ಸ್ಪರ್ಧಿಗಳಲ್ಲಿ ಅಕ್ಟೋಬರ್ 8,9,10, ರಂದು ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆ ಇಡೀ ದೇಶದ ಗಮನ ಸೆಳೆದ ಅಲ್ಲಮಪ್ರಭು ಎಸ್ ಎಂ ಎಂಬ ಇಪ್ಪತ್ನಾಲ್ಕು ವರುಷದೊಳಗಿನ ಈ ಹುಡುಗ ಚಿನ್ನದ ಪದಕ ಗೆಲ್ಲುವ ಮೂಲಕ.

ಥೈಲ್ಯಾಂಡ್ ನಲ್ಲಿ ಮಾರ್ಚ್ 2023ರಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ ಯಾಗಿದ್ದಾನೆ.ಕೆ ಆರ್ ಪೇಟೆ ಹುಡುಗನ ಸಾಧನೆಗೆ ಕ್ರೀಡಾ ಸಚಿವ ನಾರಾಯಣಗೌಡ ಹಾಗೂ ಮಾಜಿ ಶಾಸಕ ಕೆ ಬಿ ಚಂದ್ರಶೇಖರ್,ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ್ ರಾಮೇಗೌಡ, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಹಾಗೂ ಮನ್ಮುಲ್ ನಿರ್ದೇಶಕರಾದ ಹೆಚ್ ಟಿ ಮಂಜು ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *