ಫೈನಲ್ ಪ್ರವೇಶಿಸಿದ ಭಾರತೀಯ ವನಿತೆಯರ ತಂಡ.

ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಥೈಲ್ಯಾಂಡ್ ತಂಡವನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದೆ.
ಬಾಂಗ್ಲಾದೇಶದ ಸಿಲ್ಹೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಒವರ್ ಗಳಲ್ಲಿ 148 ರನ್ ಮಾಡಿತ್ತು.
ಇದನ್ನು ಬೆನ್ನತ್ತಿದ ಥೈಲ್ಯಾಂಡ್ 74 ರನ್ ಗಳಿಸಲಷ್ಟೆ ಶಕ್ತವಾಯಿತು. ಈ ಪಂದ್ಯವನ್ನು 74 ರನ್ ಅಂತರದಿಂದ ಗೆದ್ದಿರುವ ಭಾರತವು ಅಂತಿಮ ಹಣಾಹಣಿಗೆ ಕಾಲಿಟ್ಟಿದೆ. ಭಾರತದ ಪರ ದೀಪ್ತಿ ಶಮಾ೯ 7ರನ್ ನೀಡಿ 3 ವಿಕೆಟ್ ಕಬಳಿಸಿ ಉತ್ತಮ ಪ್ರದಶ೯ನ ನೀಡಿದರು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



