ಕೂಡ್ಲಿಗಿ: ತಂದೆ ಸ್ಮರಣಾರ್ಥ ಉಚಿತ ನೇತ್ರ ಚಿಕಿತ್ಸೆ ಶಿಬಿರ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ.

ಸ್ನೇಹಿತರ ಬಳಗ ವತಿಯಿಂದ 450 ಜನರಿಗೆ ಉಚಿತ ನೇತ್ರ ತಪಾಸಣೆ ಮಾಡಲಾಯಿತು. ಅದರಲ್ಲಿ 300 ಜನರಿಗೆ ಕಣ್ಣಿನ ದೋಷ ಪೊರೆ ಬಂದಿರುವುದು ಬೆಳಕಿಗೆ ಬಂದಿದೆ. ಅವರಿಗೆ ಹೊಸಪೇಟೆ ಯಲ್ಲಿರುವ ನೇತ್ರಲಕ್ಷ್ಮಿ, ಹೊಸಪೇಟೆ ಯಲ್ಲಿರುವ ಅಶ್ವಿನಿ ಆಸ್ಪತ್ರೆ ಗೆ ತೆರಳಬೇಕಿದೆ ಅಲ್ಲಿ ಅವರನ್ನ ಶಸ್ತ್ರ ಚಿಕಿತ್ಸೆ ಒಳಪಡಿಸಲಾಗುವುದು.
ಪ್ರಥಮ ಹಂತದಲ್ಲಿ 60 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಕ್ಕೆ ದಿನಾಂಕ ನಿಗದಿಗೊಳಿಸಲಾಗಿದೆ. ಹಾಗಾಗಿ ಮುಂದಿನ ವಾರ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಹಿರೇಮಠದ ಗಂಗಾಧರ ಸ್ವಾಮಿ, ಅಖಿಲ್ ಮೌಲ್ವಿ ಸಾಬ್ ಮತ್ತು ಯುನೋ ಮೌಲ್ವಿ ಸಾಹೇಬ್, ಹಾಗೂ ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರಹಮಾನ ನೇತ್ರತ್ವದಲ್ಲಿ ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ಕೂಡ್ಲಿಗಿಯ ನಿವೃತ್ತ ಯೋಧರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ನೇಹಿತರ ಬಳಗದ ಅಧ್ಯಕ್ಷ ಬಿ.ಅಬ್ದುಲ್ ರೆಹಮಾನ್ ಅವರು ಸಮಾಜ ಸೇವೆಯಿಂದಲೇ ಆತ್ಮ ತೃಪ್ತಿ ಎನ್ನುವ ದೃಢ ಸಂಕಲ್ಪದಿಂದ ಅವರ ತಂದೆಯವರ ಬಿ ಅಬ್ದುಲ್ ರೌವೂ ಸಾಬ್ ಅವರ ಸ್ಮರಣಾರ್ಥ. ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿ.ಖಾದರ್ ಭಾಷಾ ಡಾಕ್ಟರ್ ಶ್ರೀನಿವಾಸ್ ದೇಶಪಾಂಡೆ .ಧಿಶ ಭಾರದ್ವಾಜ್ ವೈದ್ಯರ ತಂಡ ಮತ್ತು ಇಸ್ಮಾಯಿಲ್ ಸಾಬ್ ಗುತ್ತಿಗೆದಾರರು. ಮಹಮ್ಮತೇಹಿದ ಅಬ್ದುಲ್ ವಾಹಿದ್. ಮಹಮ್ಮದ್ ನಹಿಮ್ ಮಹೇಶ್ ಬಸವರಾಜ್ ಅಕ್ರಂ ಹಕ್ಕು ಪಂಚರ್, ಡಾಕ್ಟರ್ ಕಣ್ಣನ್, ಇಸ್ಮಾಯಿಲ್, ಜಬಿವುಲ್ಲಾ, ಮಹಮ್ಮದ್ ರಫಿ,ಫಯಾಜ್, ಖಾದರ್ ,ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ರಕ್ಷಕ ದಳ ಸಿಬ್ಬಂದಿ ಹಾಗೂ ಕೂಡ್ಲಿಗಿಯ ಸಮಾನ ಮಸ್ಕ ಸ್ವಯಂ ಸೇವಕರು ಶಿಬಿರದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



