ಮೈಸೂರು: ಭುವನಹಳ್ಳಿ ಗ್ರಾ.ಪಂ ಎದುರು ಪ್ರತಿಭಟನೆ.

ಪಿರಿಯಾಪಟ್ಟಣ ತಾಲ್ಲೂಕಿನ ಕೊಣಸೂರು ಗ್ರಾಮದ ಕುಂಬಾರರ ಜಾತಿಗೆ ಸೇರಿದ ಶ್ರೀ ಅಂಕನಾಥೇಶ್ವರ ದೇವಸ್ಥಾನದ ಹಿಂಭಾಗದ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಶ್ರೀ ಅಂಕನಾಥೇಶ್ವರ ಕುಂಬಾರರ ಸಂಘ ವತಿಯಿಂದ ಕೊಣಸೂರು ಗ್ರಾಮಸ್ಥರು ವಿವಿಧ ಸಂಘಟನೆಗಳ ಜತೆ ಭುವನಹಳ್ಳಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರು.
ಕೊಣಸೂರು ಗ್ರಾಮದಲ್ಲಿ ಸುಮಾರು 40 ರಿಂದ 50 ಕುಂಬಾರ ಕುಟುಂಬಗಳಿದ್ದು ಇವರು ವಾಸಿಸುತ್ತಿರುವ ಬೀದಿಯಲ್ಲಿ ಶ್ರೀ ಮಣಿಯಮ್ಮ ಅಂಕನಾಥೇಶ್ವರ ದೇವಸ್ಥಾನವಿದ್ದು ಕುಂಬಾರ ಜನಾಂಗದ ಪೂರ್ವಿಕರು ಸುಮಾರು 100 ವರ್ಷದಿಂದ ಪೂಜಾ ಕಾರ್ಯ ನಡೆಸುತ್ತಿದ್ದು ದೇವಸ್ಥಾನಕ್ಕೆ ಸೇರಿದ ಹಿಂಭಾಗದ ಜಾಗದಲ್ಲಿ ಮೂಲಸೌಕರ್ಯಗಳಾದ ಮಹಿಳಾ ಶೌಚಾಲಯ ಮಹಿಳಾ ಸ್ನಾನದಗೃಹ ಕಸದ ತೊಟ್ಟಿ ಹಾಗು ನೀರಿನ ತೊಟ್ಟಿ ನಿರ್ಮಿಸಲು ಜಾಗ ಮೀಸಲಿರಿಸಿ ದೇವಸ್ಥಾನಕ್ಕೆ ತಂತಿಬೇಲಿ ನಿರ್ಮಿಸಿ
ಅನುಭವದಲ್ಲಿದ್ದರು ಕಳೆದ ಗ್ರಾ.ಪಂ ಚುನಾವಣೆಯ ನಂತರ ರಾಜಕೀಯ ದುರುದ್ದೇಶದಿಂದ ಗ್ರಾ.ಪಂ ಅಧಿಕಾರಿಗಳು ಹಾಗೂ ಆಡಳಿತ ವರ್ಗ ಆ ಜಾಗವನ್ನು ಕೊಣಸೂರು ಗ್ರಾಮದ ಮೇಧಾ ಜನಾಂಗದ ಕ್ಷೇಮಾಭಿವೃದ್ಧಿ ಸಂಘಕ್ಕೆ ಖಾತೆ ಮಾಡಿ ಡಿಮ್ಯಾಂಡ್ ಕೂರಿಸಿರುತ್ತಾರೆ, ಈ ವಿಷಯವನ್ನು ಪಿಡಿಒ ಅವರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸರಿಯಾಗಿ ಚರ್ಚಿಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿರುವ ಬಗ್ಗೆ ಜಿ.ಪಂ ಸಿಇಒ ತಾ.ಪಂ ಇಒ ಅವರಿಗೆ ಮೇಲ್ಮನವಿ ಸಲ್ಲಿಸಿದ್ದು ಅವರು ಸಹ ಸೂಕ್ತ ಕ್ರಮಕ್ಕಾಗಿ ಪಿಡಿಒ ಅವರಿಗೆ ಸೂಚಿಸಿದರು ಪಿಡಿಒ ಅವರು ಸ್ಪಂದಿಸದ ಕಾರಣ ನ್ಯಾಯ ದೊರಕಿಸಿಕೊಡುವಂತೆ ಪ್ರತಿಭಟನೆ ನಡೆಸಲಾಗುತ್ತಿದ್ದು ಕುಂಬಾರ ಜನಾಂಗದವರಿಗೆ ಆಗಿರುವ ಅನ್ಯಾಯ ಸರಿಪಡಿಸಿಕೊಡುವಂತೆ ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ಗಿರೀಶ್, ಗ್ರಾ.ಪಂ ಸದಸ್ಯೆ ರಂಜಿತಾ, ಮುಖಂಡರಾದ ಪ್ರಭು, ಶಿವರಾಜ್ ಒತ್ತಾಯಿಸಿದರು.
ಪಿಡಿಒ ದೇವರಾಜೇಗೌಡ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆಯಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಇದೇ ವೇಳೆ ಮೇದರ ಕೇತೇಶ್ವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸಹ ಸರ್ಕಾರಿ ಜಾಗದಲ್ಲಿ ಸಮಾಜದ ವತಿಯಿಂದ ಗುಡಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿದ್ದು ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಪಿಡಿಒ ಅವರಿಗೆ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ ಮಾಜಿ ಸದಸ್ಯೆ ಲಕ್ಷ್ಮಿ, ಮುಖಂಡರಾದ ಭದ್ರಶೆಟ್ಟಿ, ಚಂದ್ರಶೆಟ್ಟಿ, ರಾಜು, ಮಹೇಶ್, ಮಂಜು, ರಮೇಶ್, ರಾಜೇಶ್, ಮೀನಾಕ್ಷಮ್ಮ ಮತ್ತಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



