“ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ”

ಮೈಸೂರು: ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ.

ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು ಚಾಮುಂಡಿಪುರಂ ನಿವಾಸಿ ನಿತಿನ್ ಎಂಬವರಿಗೆ ಡೆಂಗ್ಯೂ ಆಗಿ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಹೆಚ್ಚಾಗಿ ಈಗಾಗಲೇ ಕಾಣಿಸಿ ಕೊಳ್ಳುತ್ತಿರುವುದರಿಂದ ವಾರ್ಡ್ ನಂಬರ್ 55ರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ರವರು ತಮ್ಮ ವಾರ್ಡಿನಲ್ಲಿ ವೈದ್ಯಾಧಿಕಾರಿಗಳಾದ ಡಾಕ್ಟರ್ ಮಮತಾ ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ನೀರು ತುಂಬಿರುವ ತೊಟ್ಟಿಗಳು, ಬಕೆಟ್ ಗಳು, ಟೈಯರ್ ನಲ್ಲಿ ನೀರು ತುಂಬಿ, ಹೆಚ್ಚಿಗೆ ಉಪಯೋಗಿಸದ ನೀರಿನ ಬಗ್ಗೆ ಹಾಗೂ ನೀರಿನ ಮೇಲೆ ಸೊಳ್ಳೆ ಕೂರದಂತೆ, ಸೊಳ್ಳೆ ಮೊಟ್ಟೆ ಇಡುವುದರ ಬಗ್ಗೆ ಜಾಗೃತಿ ಮೂಡಿಸಿ ಪರೀಕ್ಷಿಸಲಾಯಿತು

ಈ ಸಂದರ್ಭದಲ್ಲಿ ಮುಖಂಡರಾದ ಸಂದೀಪ್, ಧರ್ಮೇಂದ್ರ ಇದ್ದರೂ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *