ಬೆಂಗಳೂರು: ರಾಜಕಾಲುವೆ ಒತ್ತುವರಿ? ಮನೆ ಕೆಡವದಂತೆ ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ.

ಇಂದೂ ಮುಂದುವರಿಯಲಿರುವ ಆಪರೇಷನ್ ರಾಜಕಾಲುವೆ ಚಾಪ್ಟರ್ -2 ಕೆ.ಆರ್ ಪುರಂನಲ್ಲಿ ಆರಂಭಗೊಳ್ಳಲಿರೋ ಜೆಸಿಬಿ ಘರ್ಜನೆ. ಡೆಮಾಲಿಷ್ ಮಾಡವಬಾರದು ಅಂತಾ ಪೆಟ್ರೋಲ್ ಕ್ಯಾನ್ ಹಿಡಿದು ನಿಂತಿರೋ ಮಹಿಳೆ.
ರಾಜಕಾಲುವೆ ಮೇಲೆ ನಿಂತು ಪೆಟ್ರೋಲ್ ಇಡಿದು ಸಿಎಂ ಬರಲಿ ಅಂತಿರೋ ಮಹಿಳೆ. ಕೆ.ಆರ್ ಪುರಂ ನಾ ಗಾಯತ್ರಿ ಲೇ ಔಟ್ ನಲ್ಲಿ ತೆರವಿಗೆ ಮುಂದಾಗಿರೋ ಪಾಲಿಕೆ. ನಾವು ಇಲ್ಲೇ ಹುಟ್ಟಿ ಬೆಳೆದಿದ್ದು, ನಾವು ಇಲ್ಲಿ ಮನೆ ತೆರವು ಮಾಡೋಕೆ ಬಿಡೋಲ್ಲ ಅಂತೀರೋ ಮಾಲೀಕರು.
ನಮ್ಮ ಮನೆ ಕೆಡುವತಾರೆ ಅಂದ್ರೆ ನಮಗೆ ಪರಿಹಾರ ಬೇಕು. ರಾಜಕಾಲುವೆ ಮೇಲೆಯೇ ಪೆಟ್ರೋಲ್ ಕ್ಯಾನ್ ಹಿಡಿದು ನಿಂತಿರೋ ಮಹಿಳೆ. ಬಿಬಿಎಂಪಿ ಕಣ್ಣಿಗೆ ಕಾಣೋದು ನಮ್ಮಂತವರ ಮನೆ ಮಾತ್ರಾನಾ ಅಂತ ಕಣ್ಣೇರು ಹಾಕ್ತಿರೋ ಮನೆ ಮಾಲೀಕ. ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಮಹಿಳೆ.
ಮನೆ ಮಾಲೀಕ ಸುನೀಲ ಸಿಂಗ್ ಹಾಗೂ ಸೋನಾ ಸಿಂಗ್, ರಾಜಕಾಲುವೆ ಮೇಲೆ ಮನೆ ನಿರ್ಮಾಣ ಆಗಿದೆ ಅಂತ ಮಾರ್ಕ್ ಮಾಡಿರೋ ಬಿಬಿಎಂಪಿ.
2 ಮೀಟರ್ ಒತ್ತುವರಿ ಆಗಿದೆ ಅಂತ ಮಾರ್ಕ್ ಮಾಡಿರೋ ಅಧಿಕಾರಿಗಳು. ಕಾಂಪೌಂಡ್, ಮನೆ ಸೇರಿ 2 ಮೀಟರ್ ತೆರವು ಮಾಡೋಕೆ ಮುಂದಾಗಿರೋ ಅಧಿಕಾರಿಗಳು. ಸಿಎಂ ಇಲ್ಲಿಗೆ ಬರಲೇಬೇಕು ಅಂತ ಹಠ ಹಿಡಿದಿರೋ ಮಾಲೀಕರು
ಕೊನೆಗೂ ದಂಪತಿಗಳ ರಕ್ಷಣೆ ಮಾಡಿದ ಪೊಲೀಸರು. ಕೊನೆಗೂ ದಂಪತಿಗಳ ರಕ್ಷಣೆ.
ಹರಸಾಹಸದಿಂದ ಪೊಲೀಸರು ದಂಪತಿಗಳ ರಕ್ಷಣೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


