
ಮೈಸೂರು:22 ಆಗಸ್ಟ್ 2022
ನಂದಿನಿ ಮೈಸೂರು
ಕಟ್ಟಡ ಕಾರ್ಮಿಕರ ಉನ್ನತಿಕರಣಕ್ಕೆ ಸಹಕರಿಸಿ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರಿಗೆ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದಿಂದ ಧನ್ಯವಾದ ತಿಳಿಸುತ್ತೇವೆ ಎಂದು ಸಂಘದ ರಾಜ್ಯಧ್ಯಕ್ಷ ಪಿ.ರಾಜು ತಿಳಿಸಿದರು.
ಮೈಸೂರಿನ ಜಲದರ್ಶಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕೋವಿಡ್ ಸೋಂಕಿಗೆ ಒಳಗಾದ ಕಟ್ಟಡ ಕಾರ್ಮಿಕರಿಗೆ ಮೊದಲ ಅಲೆಯಲ್ಲಿ 5 ಸಾವಿರ,ಎರಡನೇ ಅಲೆಯಲ್ಲಿ 3 ಸಾವಿರ ಪರಿಹಾರವನ್ನು ಸರ್ಕಾರ ಮಂಜೂರು ಮಾಡಿದೆ.ಕಟ್ಟಡ ಕಾರ್ಮಿಕರ ಮಕ್ಕಳ ಮದುವೆಗೆ ನೀಡುವ ಸಹಾಯ ಧನ 50 ಸಾವಿರಕ್ಕಿಂತ ಹೆಚ್ಚು ಮಾಡಿದ್ದಾರೆ.ಅಂತ್ಯಕ್ರಿಯೆ ಸೌಲಭ್ಯದಡಿ ಅನುಗ್ರಹ ರಾಶಿ ಧನ ಸಹಾಯ 71 ಸಾವಿರದಿಂದ 75 ಸಾವಿರ ಕ್ಕೆ ಹೆಚ್ಚಿಸಿದ್ದಾರೆ.ಆದ್ದರಿಂದ ಸಿಎಂ ಹಾಗೂ ಸಚಿವರಿಗೆ ಧನ್ಯವಾದ ತಿಳಿಸುತ್ತೇವೆ.
ನಕಲಿ ಕಟ್ಟಡ ಕಾರ್ಮಿಕರು ಹೆಚ್ಚಾಗಿರುವುದರಿಂದ ನೈಜ ಕಟ್ಟಡ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.ಆದ್ದರಿಂದ
ಕಟ್ಟಡ ಕಾರ್ಮಿಕರು ಸಂಘದ ಸದಸ್ಯರಾಗಬೇಕು.15 ಜಿಲ್ಲೆಗಳಲ್ಲಿ
ಉಚಿತ ನೊಂದಣಿ ಮಾಡಿಕೊಳ್ಳುವ ಮೂಲಕ ನಿಮಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಶಿವಕುಮಾರ್,ಸಿದ್ದಪ್ಪ,ಪುಟ್ಟಮಾದಯ್ಯ,ಕಾಂತರಾಜು,ರಾಜೇಶ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.



