ಹೆಚ್ಚುತ್ತಿದೆ ಮಂಕಿಫಾಕ್ಸ್ ಪ್ರಕರಣ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ

ಕೇರಳದಲ್ಲಿ 3 ಮಂಕಿಪಾಕ್ಸ್ ಪ್ರಕರಣ, ಕರ್ನಾಟಕ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್ ನಲ್ಲಿ ತೀವ್ರ ಕಟ್ಟೆಚ್ಚರ

ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಕೇರಳ ಮತ್ತು ಕರ್ನಾಟಕ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್ ಗೆ ಇಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿಗಳಾದ ಡಾ”ಚಿದಂಬರ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ,ಡಾ” ಟಿ. ರವಿಕುಮಾರ್ ರವರು ಮತ್ತು ತಂಡದವರು ಭೇಟಿ ನೀಡಿ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸಿದರು,
ನಂತರ ಮಾತನಾಡಿದ ಅವರು ಡಾ”ಚಿದಂಬರ್ ರವರು ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ. ಈ ಪ್ರಕರಣಗಳು ಆಮದು ಮಾಡಿಕೊಂಡ ಅಥವಾ ಕಾಡು ಪ್ರಾಣಿಗಳಿಂದು ಹರಡಿರುವ ಸಂಭವವಿದೆ.
ಸಾರ್ವಜನಿಕರು ಭಯ ಬಿಡಿ: ನಮ್ಮಲ್ಲಿ ಒಂದು ಮಂಕಿಪಾಕ್ಸ್ ಪ್ರಕರಣವು ವರದಿ ಆಗಿಲ್ಲ, ಸರ್ಕಾರ ಎಲ್ಲಿಗೇವರೆ ಆದೇಶ ಹೊರಡಿಸುವುದು ಅಲ್ಲಿಯವರೆಗೆ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ಕಳೆದ 3 ವಾರಗಳಿಂದ ಕೇರಳ ರಾಜ್ಯದಲ್ಲಿ 3 ಮಂಕಿಪಾಕ್ಸ್ ರೋಗ ಕಂಡುಬರುತ್ತದೆ ಅದರಿಂದ ಕೇರಳ ಮತ್ತು ಕರ್ನಾಟಕ ಗಡಿ ಭಾಗವಾದ ಬಾವಲಿ ಚೆಕ್ ಪೋಸ್ಟ್ ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಎರಡು ತಂಡವನ್ನು ರಚನೆ ಮಾಡಿ ಒಂದು ತಂಡ ಬೆಳಗ್ಗೆ 6:00 ಯಿಂದ ಮಧ್ಯಾಹ್ನ 2:00 ಗಂಟೆ ಇನ್ನೊಂದು ತಂಡ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ತನಕ ಕರ್ತವ್ಯ ನಿರ್ವಹಿಸಬೇಕು ತಂಡದವರು ಕೇರಳದಿಂದ ಬರುವ ಪ್ರಯಾಣಿಕರನ್ನು ಪ್ರತಿದಿನ ಜ್ವರ ತಪಾಸಣೆ ಮತ್ತು ಗುಳ್ಳೆಗಳ ತಪಾಸಣೆ ಮಾಡಿ,ಪ್ರಯಾಣಿಕರ ಹೆಸರುಗಳನ್ನು ಒಂದು ಪುಸ್ತಕದಲ್ಲಿ ನೊಂದಣಿ ಮಾಡಿ, ಪ್ರತಿ ದಿನ ಜಿಲ್ಲಾ ಸರ್ವೇಕ್ಷಣಾ ಕಚೇರಿ ಮೈಸೂರು ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ ಪ್ರವಾಸಿಗರು ಹೆಚ್ಚು ಪ್ರವಾಸ ಮಾಡಬಾರದು ಎಂದು ಹೇಳಲಾಗುತ್ತಿದ್ದೆ ಹಾಗೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈ ಗೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ತಿಳಿಸಿದರು.

ಮಂಕಿಪಾಕ್ಸ್ ರೋಗ ಲಕ್ಷಣಗಳು
ದೇಹದ ಮೇಲೆ ಗುಳ್ಳೆ
ರೋಗ 7-14 ದಿನಗಳವರೆಗೆ ಅವಧಿಯನ್ನು ಇರುತ್ತದೆ ಮತ್ತು ಶೀತ, ಜ್ವರ, ತಲೆನೋವು, ಸ್ನಾಯು ದೌರ್ಬಲ್ಯ, ಊತ, ಚರ್ಮದ ಮೇಲೆ ಗುಳ್ಳೆ ಮತ್ತು ಬಳಲಿಕೆ ರೋಗಲಕ್ಷಣಗಳು ಇರುತ್ತವೆ.
ಮಂಕಿಪಾಕ್ಸ್ ದುಗ್ಧರಸ ಗ್ರಂಥಿಗಳಲ್ಲಿ ಊತವನ್ನು ಉಂಟುಮಾಡುತ್ತದೆ.
ಅಂಗೈಗಳು, ಪಾದಗಳು ಮತ್ತು ನಿಮ್ಮ ಬಾಯಿಯ ಒಳಭಾಗವನ್ನು ಒಳಗೊಂಡಂತೆ ದೇಹದ ಮೇಲೆ ವ್ಯಾಪಕವಾದ ದದ್ದು/ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಹೆಚ್ಚು ಬಾಧಿಸುವ ಗುಳ್ಳೆಗಳು
ಮಂಕಿಪಾಕ್ಸ್ ಚಿಕಿತ್ಸೆ
ಈ ಗುಳ್ಳೆಗಳು ನೋವಿನಿಂದ ಕೂಡಿದ್ದು ದ್ರವದಿಂದ ತುಂಬಿರುತ್ತದೆ. ಗುಳ್ಳೆ ಮುತ್ತುಗಳಂತೆ ಕಾಣಿಸುತ್ತವೆ ಮತ್ತು ಅವುಗಳ ಸುತ್ತಲೂ ಕೆಂಪು ವಲಯಗಳನ್ನು ಹೊಂದಿರುತ್ತವೆ. ಇದರಿಂದ ಹೊರಬರಲು ಎರಡು ಮೂರು ವಾರಗಳು ತೆಗೆದುಕೊಳ್ಳುತ್ತದೆ.
ಮಂಕಿಪಾಕ್ಸ್‌ನ್ನು ಸಾಮಾನ್ಯವಾಗಿ ಚಿಕಿತ್ಸೆಯಿಂದ ಗುಣಪಡಿಸಬಹುದು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ದಿನೇಶ್,,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ,ನಾಗೇಂದ್ರ ಮಂಜುನಾಥ್, ಟಿ.ರವಿರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಾದ ಪ್ರವೀಣ್, ಚೇತನ್, ಪೊಲೀಸ್ ಇಲಾಖೆ ರೇವಣ್ಣ, ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ನಾಗರಾಜು ಹಾಜರಿದ್ದರು.

ನಂದಿನಿ ಮೈಸೂರು

Leave a Reply

Your email address will not be published. Required fields are marked *