ಕೌಸಲ್ಯ ಸುಪ್ರಜಾ ರಾಮ ಸಿನಿಮಾಗೆ ಪ್ರೇಕ್ಷಕ ಪ್ರಭು ಫುಲ್ ಮಾರ್ಕ್ಸ್ ಕೊಟ್ಟಿದ್ದಾನೆ

ಕೌಸಲ್ಯ ಸುಪ್ರಜಾ ರಾಮ ಸಿನಿಮಾಗೆ ಪ್ರೇಕ್ಷಕ ಪ್ರಭುಗಳು ಜೈ ಹೇಳೋದರ ಜೊತೆಗೆ ಸೂಪರ್ ಆಗಿದೆ ಅನ್ನೋದು ಕೂಡ ಹೇಳಿ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯದ ಶಶಾಂಕ್ ನಿರ್ದೇಶನದ ಈ ಸಿನಿಮಾ ನಿನ್ನೆ ಇಷ್ಟ ಬಿಡುಗಡೆಯಾಗಿ ರಾಜ್ಯಾದ್ಯಂತ ಭಾರಿ ಮೆಚ್ಚುಗೆಯನ್ನ ಪಡಿತಾ ಇದೆ ಸಿನಿಮಾದಲ್ಲಿ ಮಿಲನ ನಾಗರಾಜ್ ಮತ್ತೆ ಬೃಂದಾಚಾರ್ಯ ಎಂಬ ಇಬ್ಬರು ನಾಯಕಿಯರಿದ್ದು ಸಿನಿಮಾದಲ್ಲಿ ಅವರ ಪಾತ್ರವೂ ಕೂಡ ಬಹಳ ಮುಖ್ಯವಾಗಿದೆ.ಕೌಶಲ್ಯ ಸುಪ್ರಜಾ ರಾಮ ಸಿನಿಮಾಗೆ ಪ್ರೇಕ್ಷಕ ಪ್ರಭುಗಳು ಜೈ ಹೇಳೋದರ ಜೊತೆಗೆ ಸೂಪರ್ ಆಗಿದೆ ಅನ್ನೋದು ಕೂಡ ಹೇಳಿ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಅಭಿನಯದ ಶಶಾಂಕ್ ನಿರ್ದೇಶನದ ಈ ಸಿನಿಮಾ ನಿನ್ನೆ ಇಷ್ಟ ಬಿಡುಗಡೆಯಾಗಿ ರಾಜ್ಯಾದ್ಯಂತ ಭಾರಿ ಮೆಚ್ಚುಗೆಯನ್ನ ಪಡಿತಾ ಇದೆ ಸಿನಿಮಾದಲ್ಲಿ ಮಿಲನ ನಾಗರಾಜ್ ಮತ್ತೆ ಬೃಂದಾಚಾರ್ಯ ಎಂಬ ಇಬ್ಬರು ನಾಯಕಿಯರಿದ್ದು ಸಿನಿಮಾದಲ್ಲಿ ಅವರ ಪಾತ್ರವೂ ಕೂಡ ಬಹಳ ಮುಖ್ಯವಾಗಿದೆ ಲ್. ಇದೊಂದು ಫ್ಯಾಮಿಲಿ ಸಬ್ಜೆಕ್ಟ್ ಆಗಿದ್ದು ಈ ಸಿನಿಮಾದಲ್ಲಿ ಸಂಬಂಧಗಳು, ಬಾಂಧವ್ಯ -ತಾಯಿ ಮಗನ ನಂಟು, ಹಾಗೆಯೇ ಗಂಡ ಹೆಂಡ್ತಿ ಸಂಬಂಧದಲ್ಲಿ ಅತಿ ಮುಖ್ಯವದದ್ದು ಒಲವೇ ಹೊರತಾಗಿ ಧೋರಣೆಯಲ್ಲಾ ಅನ್ನೋ ಅಂತಹ ವಿಷಯ ಆಧರಿಸಿ

ಈ ಸಿನಿಮಾನ ತಯಾರಾಗಿದೆ. ಸಿನಿಮಾದಲ್ಲಿ ಎಂಟರ್ಟೈನ್ಮೆಂಟ್ಗೆ ಯಾವುದೇ ಕೊರತೆ ಇಲ್ಲ ಸಿನಿಮಾ ಉದ್ದಕ್ಕೂ ಕಾಮಿಡಿ ಇದೆ, ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಒಳ್ಳೆ ಹಾಡುಗಳಿವೆ, ಈ ಸಿನಿಮಾದಲ್ಲಿ ಸಹ ಕಲಾವಿದರ ಪಾತ್ರವು ಅಷ್ಟೇ ಬಹು ಮುಖ್ಯವಾಗುತ್ತೆ ಹಾಗಾಗಿ ನಟ ರಂಗಾಯಣ ರಘು, ಅಚ್ಚುತ್ ಕುಮಾರ್, ಸುಧಾ ಬೆಳವಾಡಿ ಮತ್ತು ಬಿ. ಎಂ. ಗಿರಿರಾಜ್ ಅದನ್ನ ಭರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾದ ಹೈಲೈಟ್ ಅಂದ್ರೆ ಹಲವು ಸನ್ನಿವೇಶಗಳು ಆ ಸನ್ನಿವೇಶಗಳಲ್ಲಿ ಪಾತ್ರಗಳು ಪಡೆಯೋ ತಿರುವುಗಳು, ಅದು ಸಿನಿಮಾದ ಆಯಮಾನ ಹೆಚ್ಚಿಸುವುದು ಮತ್ತೆ ಇಡೀ ಸಿನಿಮಾದ ಪೂರ್ತಿ ಡಾರ್ಲಿಂಗ್ ಕೃಷ್ಣ ಅವರು ಒಂದು ಆಟಿಟ್ಯೂಡ್ ಕ್ಯಾರಿ ಮಾಡಿದ್ದಾರೆ ಅದು ಸಿನಿಮಾಗೆ ಒಂದು ದೊಡ್ಡ ಕೊಡುಗೆ ಆಗುತ್ತೆ. ನೋಡುಗರಿಗೆ ಕ್ಷಣಮಾತ್ರವು ಬೋರಾಗಿಸದೆ ಎಲ್ಲಿಯೂ ಅಹಿಕರ ದೃಶ್ಯವಿಲ್ಲದಿರುವ ಸಾಂಸಾರಿಕ ಸಿನಿಮಾ ಇದಾಗಿದೆ. ಒಟ್ಟಾರೆಯಾಗಿ ಹೇಳಬೇಕು ಅಂತ ಅಂದ್ರೆ ಈ ವಾರ ಅಂತ್ಯದಲ್ಲಿ ನೀವು ಒಂದು ಒಳ್ಳೆ ಕನ್ನಡ ಸಿನಿಮಾ ನೋಡಬೇಕು ಅಂತ ನಿರ್ಧರಿಸಿದರೆ ನಿಮ್ಮ ಆಯ್ಕೆ ಕೌಸಲ್ಯ ಸುಪ್ರಜಾ ರಾಮ ಆಗಿರಲಿ.
ವರದಿ: P. ಘನಶ್ಯಾಮ್ – ಬೆಂಗಳೂರು




