“ಜೆ . ಆಗ್ನೇಸ್ ಸಾರ ಗೆ ಲಭಿಸಿದ ಜಿಲ್ಲಾಧಿಕಾರಿ ಅವರ ಆಡಳಿತ ವೈಖರಿ ತಿಳಿಯುವ ಅವಕಾಶ”

ಚಾಮರಾಜನಗರ: ಕೊಳ್ಳೇಗಾಲದ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಜೆ . ಆಗ್ನೇಸ್ ಸಾರ ಗೆ ಲಭಿಸಿದ ಜಿಲ್ಲಾಧಿಕಾರಿ ಅವರ ಆಡಳಿತ ವೈಖರಿ ತಿಳಿಯುವ ಅವಕಾಶ.

ಚಾಮರಾಜನಗರ ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕೊಳ್ಳೇಗಾಲದ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಜೆ .ಆಗ್ನೆಸ್ ಸಾರಾ ಅವರಿಗೆ ಇಂದು ಇಡೀ ದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರೊಂದಿಗೆ ಇದ್ದು ಜಿಲ್ಲಾಡಳಿತದ ಕಾರ್ಯವೈಖರಿ ವೀಕ್ಷಣೆಗೆ ಅವಕಾಶ ದೊರೆಯಿತು.

ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯಾಗಿರುವ ಜೆ.ಆಗ್ನೆಸ್ ಸಾರ ಅವರನ್ನು ಜಿಲ್ಲಾಧಿಕಾರಿಗಳೊಂದಿಗೆ.ಇಂದು ಇಡೀ ದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರೊಂದಿಗೆ ಇದ್ದು ಜಿಲ್ಲಾಡ ಳಿತ ಕಾರ್ಯವೈಖರಿ ವೀಕ್ಷಣೆಗೆ ಅವಕಾಶ ದೊರೆಯಿತು.

ಜಿಲ್ಲಾ ಕೌಸಲ್ಯಾ ಉದ್ಯಮ ಶೀಲತೆ ಜೀವನೋಪಾಯ ಇಲಾಖೆ ಆಯ್ಕೆ ಮಾಡಿತ್ತು .
ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಯವರೊಂದಿಗೆ ಇದ್ದು ಜಿಲ್ಲಾಧಿಕಾರಿಯವರ ದಿನದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಯವರ ಆಡಳಿತ ಕಾರ್ಯಚಟುವಟಿಕೆಗಳನ್ನು ನೋಡುವ ಸ್ಮರಣೀಯ ಅವಕಾಶ ದೊರೆಯಿತು .

ಇಂದು ಬೆಳಿಗ್ಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಗೆ ಪೋಷಕರೊಂದಿಗೆ ಆಗಮಿಸಿದ್ದ ಆಗ್ನೆಸ್ ಸಾರ ಅವರನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ರವರು ಹೂಗುಚ್ಚ ನೀಡಿ ಸ್ವಾಗತಿಸಿದರು.

ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿಯವರು ಮುಂದೆ ಏನಾಗಬೇಕೆಂದು ಬಯಸಿದ್ದೀರಿಎಂದು ಆಗ್ನೆಸ್ ಸಾರಾ ಅವರನ್ನು ಪ್ರಶ್ನಿಸಿದರು.? ಇದಕ್ಕೆ ಪ್ರತಿಕ್ರಿಯಿಸಿದ ಆಗ್ನೆಸ್ ಸಾರ ರವರು ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎಂದುಕೊಂಡಿದ್ದೇನೆ ಎಂದರು.

ಬಳಿಕ ಜಿಲ್ಲಾಧಿಕಾರಿಯವರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಭವನ ನಿರ್ವಹಣಾ ಸಮಿತಿ ಗಿರಿಜನರು ಶೈಕ್ಷಣಿಕ ಅಭಿವೃದ್ಧಿ ಸಂಬಂಧ ಸಭೆ ಮಹಾಲಯ ಅಮವಾಸ್ಯೆ. ದೀಪಾವಳಿ ಜಾತ್ರೆ. ಸೇರಿದಂತೆ ಪೂರ್ವಭಾವಿ ಸಭೆ ಸೇರಿದಂತೆ ಇತರೆ ಸಭೆಗಳಲ್ಲಿ ಆಗ್ನೆಸ್ ಸಾರ ಅವರು ಜಿಲ್ಲಾಧಿಕಾರಿಗಳ ಪಕ್ಕದಲ್ಲೇ ಕುಳಿತು ವೀಕ್ಷಿಸಿದ ಸಂದರ್ಭದಲ್ಲಿ ಟಿಪ್ಪಣಿ ಸಹ ಮಾಡಿಕೊಳ್ಳುತ್ತಿದ್ದರು.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹತ್ತಿರದಿಂದ ಆಡಳಿತ ಕಾರ್ಯಗಳನ್ನು ನಡೆಸಿದರು. ಸಭೆಯ ಬಳಿಕ ಸಂಜೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ರವರು ಆಗ್ನೆಸ್ ಸಾರ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು .ಮುಂದಿನ ಭವಿಷ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು .

ಇದೇ ವೇಳೆ ಅನಿಸಿಕೆ ಹಂಚಿಕೊಂಡ ಆಗ್ನೇಸಾ ರವರು ಜಿಲ್ಲಾಧಿಕಾರಿಯವರೊಂದಿಗೆ 1ದಿನ ಇದ್ದು ಕಾರ್ಯ ಆಡಳಿತ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದು ಅವಕಾಶವಾಗಿದೆ ತನಗೆ ಅತ್ಯಂತ ಸಂತಸ ತಂದಿದೆ ಅವಕಾಶ ನೀಡಿದ ಜಿಲ್ಲಾಧಿಕಾರಿಗಳು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಗೆ ಧನ್ಯವಾದಗಳು ನನಗೆ ಬೆಂಬಲವಾಗಿ ನಿಂತಿರುವ ನನ್ನ ಪೋಷಕರಿಗೂ ಸಹ ವಂದನೆಗಳನ್ನು ತಿಳಿಸುತ್ತೇನೆ ಎಂದರು .

ಜಿಲ್ಲಾಧಿಕಾರಿಯವರು ಎಲ್ಲ ಸಭೆ ಕಾರ್ಯಗಳಲ್ಲಿ ಪಾಲ್ಗೊಂಡು ತಾಳ್ಮೆ ಸಹನೆಯಿಂದ ಮಾಹಿತಿ ಪಡೆಯುವ ಹಾಗೂ ಸಲಹೆ ಸೂಚನೆಗಳನ್ನು ನೀಡುವ ಕಾರ್ಯ ವೈಖರಿಯನ್ನು ಹತ್ತಿರದಿಂದ ನೋಡುವ ಸದಾವಕಾಶ ನನಗೆ ದೊರಕಿತು ಇದು ನನಗೆ ಸ್ಫೂರ್ತಿದಾಯಕವಾಗಿದೆ ಎಂದು ಆಗ್ನೆಸ್ ಸಾರ ಜಿಲ್ಲಾಧಿಕಾರಿಯವರ ಜತೆ ಇದ್ದ ತಮ್ಮ 1ದಿನದ ಅನುಭವ ಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ .ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕೆ .ಎಸ್. ಸುಂದರ್ .ಡಿವೈಎಸ್ಪಿ.ಪ್ರಿಯ ದರ್ಶಿನಿ ಸಾಣಿಕೊಪ್ಪ. ಜಿಲ್ಲಾ ಕೌಸಲ್ಯಾ ಅಧಿಕಾರಿ ಎ. ಮಹಮ್ಮದ್ ಅಕ್ಬರ್. ಆಗ್ನೆಸ್ ಸಾರ ಅವರ ತಂದೆ ಜೋಸೆಫ್ ಅಲೆಗ್ಸಾಂಡರ್. ತಾಯಿ ಶರ್ಮಿಳಾ .ಇತರರು ಭಾಗವಹಿಸಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *