ಸಾರ್ವಜನಿಕ ಸ್ಥಳದಲ್ಲಿ ಏರ್ ಗನ್ ರೀತಿಯ ಪಿಸ್ತೂಲ್ ಮತ್ತು ಲಾಂಗ್ ಅನ್ನು ಹಿಡಿದುಕೊಂಡು ಜೆಪಿ ರಸ್ತೆಯಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಏರ್ ಗನ್ ರೀತಿಯ ಪಿಸ್ತೂಲ್ ಮತ್ತು ಲಾಂಗ್ ಅನ್ನು ಹಿಡಿದುಕೊಂಡು ಜೆಪಿ ರಸ್ತೆಯಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳ ಬಂಧನ

ಸಾಗರ ಟೌನ್ ಪೊಲೀಸ್ ಠಾಣ ವ್ಯಾಪ್ತಿಯ ಸಾಗರಪೇಟೆಯ ಜೆಪಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ದಿನಾಂಕ 11 /02 /24ರಂದು ಸಂಜಯ್ ತಂದೆ ಪ್ರೇಮಾನಂದ ವಾಸ ಚೌಡಿ ಗುಡಿಸಾಗರ ಮತ್ತು ನವೀನ್ ಎಂಬ ವ್ಯಕ್ತಿಗಳು ಪಿಸ್ತೂಲ್ ಮತ್ತು ಲಾಂಗ್ ಅನ್ನು ಹಿಡಿದುಕೊಂಡು ಓಡಾಡುತ್ತಿದ್ದರು. ಆಗ ಸಂಜಯ್ ರವರು ಅವರ ಹತ್ತಿರ ಹೋಗಿ ಕೇಳಿದಾಗ ನಾವು ಈ ಏರಿಯಾದ ಡಾನ್ ಗಳು ನಮ್ಮನ್ನು ಯಾರೂ ಕೇಳೋ ಹಾಗಿಲ್ಲ ಎಂದು ಹೇಳಿ ಎ ಬಚ್ಚಾ ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹಾಕುತ್ತೇವೆ ಎಂದು ಹೆದರಿಸಿದ್ದು ಸಂಜಯ್ ರವರು ನೀಡಿದ ದೂರಿನ ಮೇರೆಗೆ ಠಾಣ ಅಪರಾಧ ಸಂಖ್ಯೆ 5624 ಕಾಲಂ 25(1)ಬೀ 3 ಮತ್ತು 25 ಆಯುಧ ಕಾಯ್ದೆ ಹಾಗೂ 506 ಸಹಿತ 34 ಐಪಿಸಿ ನಿತ್ಯ ಪ್ರಕರಣ ದಾಖಲಾಗಿರುತ್ತದೆ. ನಂತರ ಆರೋಪಿಗಳನ್ನು ಪತ್ತೆ ಮಾಡುವಂತೆ ಶ್ರೀ ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಜಿಲ್ಲಾ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ಜಿಲ್ಲೆ, ಮತ್ತು ಶ್ರೀ ಅನಿಲ್ ಕುಮಾರ ಭೂಮ ರೆಡ್ಡಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಕರಿಯಪ್ಪ ಮಾನ್ಯ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ಜಿಲ್ಲೆ ರವರುಗಳ ಸೂಚನೆಯ ಮೇರೆಗೆ ಶ್ರೀ ಗೋಪಾಲಕೃಷ್ಣ ನಾಯಕ್ ಮಾನ್ಯ ಪೋಲಿಸ್ ಉಪಾ ದೀಕ್ಷಕರು ಸಾಗರ ಉಪ ವಿಭಾಗ ಸಾಗರ ರವರ ಮಾರ್ಗದರ್ಶನದ ಮೇರೆಗೆ ಶ್ರೀ ಸೀತಾರಾಮ್ ಪಿ.ಐ ಸಾಗರ ಟೌನ್ ಪೋಲಿಸ್ ಠಾಣೆ, ಮತ್ತು ಸಿಬ್ಬಂದಿಗಳಾದ ಶ್ರೀನಿವಾಸ್ ಮತ್ತು ವಿಶ್ವನಾಥ್ ರವರು ದಿನಾಂಕ 12/02/2024 ರಂದು ಸಂಜೆ 6:45 ಗಂಟೆಗೆ ಗಣಪತಿ ಕೆರೆ ಏರಿಯ ರಸ್ತೆಯಲ್ಲಿ ಆರೋಪಿಗಳಾದ 1) ದರ್ಶನ್ ತಂದೆ ಕುಮಾರ್ ನಾಯಕ್ 18 ವರ್ಷ ಬಾವಿ ಕೆಲಸ ವಾಸ ಜೆ.ಪಿ ರಸ್ತೆ ನಾಗಾಲಯ ದೇವಸ್ಥಾನದ ಹತ್ತಿರ ಬಾಡಿಗೆ ಮನೆ ಸ್ವಂತ ವಿಳಾಸ ಕೋಹಳ್ಳಿ ತಾಂಡ ಆಯನೂರು 2) ನವೀನ್ ತಂದೆ ಸಿ.ಪಿ ನಾಗರಾಜ್ 27 ವರ್ಷ ಪೇಂಟಿಂಗ್ ಕೆಲಸ ವಾಸ ಜೆಪಿ ರಸ್ತೆ ಸಾಗರ ಟೌನ್ ರವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಒಂದು ನಕಲಿ ಏರ್ ಗನ್ ರೀತಿಯ ಪಿಸ್ತೂಲ್ ಹಾಗೂ ಸುಮಾರು ಎರಡು ಅಡಿ ಉದ್ದದ ಲಾಂಗ್ ಅನ್ನು ಆರೋಪಿಗಳ ಸಮೇತ ವರ್ಷಕ್ಕೆ ಪಡೆದು ದಿನಾಂಕ 13/02/ 24 ರಂದು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ದಿನಾಂಕ 27/02/2024 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸುತ್ತಿರುತ್ತದೆ. ಈ ಕಾರ್ಯ ಮಾಡಿದ ಸಾಗರ ಪೇಟಿ ಪೊಲೀಸ್ ಠಾಣೆಯ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧಿಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದನೆ ಸಲ್ಲಿಸಿರುತ್ತಾರೆ.

ವರದಿ: ಅಪೂರ್ವ ಸಾಗರ

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *