ಕೆ ಆರ್ ಪೇಟೆ : ಒಂದು ಸಮುದಾಯಕ್ಕೆ ಸುಣ್ಣ ,ಒಂದು ಸಮುದಾಯಕ್ಕೆ ಬೆಣ್ಣೆ ,ನೀಡುವ ರಾಜಕಾರಣಿ ನಾನಲ್ಲ: ಸಚಿವ ಕೆ ಸಿ ನಾರಾಯಣಗೌಡ ಅಭಿಪ್ರಾಯ
ಕೆ ಆರ್ ಪೇಟೆ ತಾಲೂಕಿನ ವಿಶ್ವಕರ್ಮ ಸಮುದಾಯದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಸಮುದಾಯ ಭವನವನ್ನು ಪಟ್ಟಣದ ಕೃಷಿ ಇಲಾಖೆ ಸಮೀಪಲ್ಲಿ ಇರುವ ನಿವೇಶನದಲ್ಲಿ ಒಂದು ಕೋಟಿ ವೆಚ್ಚದ ಸಮುದಾಯ ಭವನಕ್ಕೆ ಸಚಿವ ಕೆ ಸಿ ನಾರಾಯಣಗೌಡ ರವರು ಸಮುದಾಯದ ಮುಖಂಡರ ಜೊತೆಗೋಡಿ ಗುದ್ದಲಿ ಪೂಜೆಯನ್ನು ನೆರವೇರಿಸಿ,ಮಾತನಾಡಿದ ಅವರು ತಾಲೂಕಿನಲ್ಲಿ ಟಿಕೆ ಟಿಪ್ಪಣಿಗಳು ನಡೆಯುತ್ತಿದೆ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಬದಲು ನಾವು ಅಭಿವೃದ್ಧಿಯ ಕಡೆ ಚಿಂತಿಸೋಣ ನಾನು ಬೇರೆಯ ರಾಜಕಾರಣಿಯಂತೆ ಒಂದು ಸಮುದಾಯಕ್ಕೆ ಸುಣ್ಣ ಮತ್ತೊಂದು ಸಮುದಾಯಕ್ಕೆ ಬೆಣ್ಣೆ ನೀಡುವ ರಾಜಕಾರಣಿಯಲ್ಲ ಪ್ರತಿ ಸಮುದಾಯಗಳನ್ನು ಅಭಿವೃದ್ಧಿಪಡಿಸುವುದೇನೆ ನನ್ನ ಗುರಿ, ಇಂದಿನಿಂದಲೂ ವಿಶ್ವಕರ್ಮ ಸಮುದಾಯದ ಒಡನಾಡಿಯಲ್ಲಿ ಬೆಳೆದವನು ಎಂದು ತಮ್ಮ ಅಭಿಪ್ರಾಯ ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿಳನೇರೆ ಅಂಬರೀಷ್,ಪುರಸಭಾ ಸದಸ್ಯ ಪ್ರಮೋದ್,ವಿಶ್ವ ಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಕುಮಾರ್,ಬಿಜೆಪಿ ಮುಖಂಡ ಕರ್ತೆನಹಳ್ಳಿ ಸುರೇಶ್,ಡಿ ಪಿ ಪರಮೇಶ್, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಸುರೇಶ್, ಸಚಿವರ ಆಪ್ತ ಸಹಾಯಕ ದಯಾನಂದ್, ಈಶ್ವರ್ ಚಾರ್, ಪ್ರಸನ್ನ ಸೇರಿದಂತೆ ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 988043255



