ಕೆ ಆರ್ ಪೇಟೆ : ವೈದ್ಯರೆ ಕ್ಷಯ ರೋಗಿಗಳ ದತ್ತು ಪಡೆದು ಪೌಷ್ಟಿಕಾಹಾರ ಕಿಟ್ ವಿತರಣೆ – ಡಾ ಶಿವಕುಮಾರ್.
ವೈದ್ಯರೆ ಕ್ಷಯ ರೋಗಿಗಳ ದತ್ತು ಪಡೆದು ಪೌಷ್ಟಿಕಾಹಾರ ಕಿಟ್ ವಿತರಣೆ, ಕ್ಷಯರೋಗ ಎಂಬ ಭಯ ಬೇಡ ರೋಗಿಗಳಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ ಶಿವಕುಮಾರ್ ಸಲಹೆ.
ಕೆ ಆರ್ ಪೇಟೆ ಪಟ್ಟಣದಲ್ಲಿ ಇರುವ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರು ತಾಲೂಕಿನ 5ಕ್ಕೂ ಹೆಚ್ಚು ಕ್ಷಯ ರೋಗಿಗಳನ್ನು ದತ್ತು ಪಡೆದು ಪೌಷ್ಟಿಕಾಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ವೈದ್ಯಾಧಿಕಾರಿ ಡಾ ಶಿವಕುಮಾರ್ ರವರು ಕ್ಷಯ ರೋಗ ಎಂದು ಭಯಪಡುವ ಅಗತ್ಯವಿಲ್ಲ
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು, ಕಫದಲ್ಲಿ ರಕ್ತ ತೂಕ ಇಳಿಕೆ, ಹಸಿವು ಆಗದಿರುವುದು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ.
ಕಫ ಪರೀಕ್ಷೆ ಮಾಡಿಸುವುದರಿಂದ ಕ್ಷಯ ಬ್ಯಾಕ್ಟೀರಿಯಾ ನಮ್ಮ ದೇಹ ಸೇರಿರುವುದು ಪತ್ತೆಯಾಗುತ್ತದೆ.ಆಗ ಕ್ಷಯ ಔಷಧಿಗಳನ್ನು ತೂಕಕ್ಕೆ ಮತ್ತು ವಯಸ್ಸಿಗೆ ಅನುಗುಣವಾಗಿ ಸಂಪೂರ್ಣ ಮಾತ್ರೆಗಳನ್ನು ಸೇವಿಸುವುದರಿಂದ ಕ್ಷಯ ನಾಶ ಮಾಡಬಹುದು ಎಂದು ತಿಳಿಸಿದ ಅವರು ಈ ಕ್ಷಯ ರೋಗವು ಗಾಳಿಯಿಂದ ಹರಡುವಂತಹ ರೋಗವಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬೇಗನೆ ಹರಡಬಹುದು.ರೋಗ ಹರಡದಂತೆ ರೋಗಿಯ ಕಫ ಪರೀಕ್ಷೆ ಮಾಡಿಸಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಪಡೆಯುತ್ತಿರುವಾಗ ತಂಬಾಕು, ಮದ್ಯಪಾನ, ಗುಟ್ಕಾ ಈ ತರಹದ ವ್ಯಸನಗಳಿಂದ ದೂರವಿರಬೇಕು. ಜೊತೆಯಲ್ಲಿ ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಉಂಟಾಗುತ್ತದೆ. ಆ ನಿಟ್ಟಿನಲ್ಲಿ ಉತ್ತಮ ಆಹಾರ ಕಿಟ್ ನೀಡುತ್ತಿರುವುದು ,ಸಮುದಾಯದಲ್ಲಿ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವು ಮತ್ತು ಜಾಗೃತಿ ಇರಬೇಕು .ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕು.ಎಲ್ಲಿ ಬೇಕಾದಲ್ಲಿ ಉಗಳಬಾರದು, ಎಂದು ಸಲಹೆ ನೀಡಿ,ಉಳ್ಳವರು ಕೂಡ ಇಂತಹ ರೋಗಿಗಳನ್ನು ದತ್ತು ಪಡೆದು 2025 ರ ವೇಳೆಗೆ ಕ್ಷಯ ಮುಕ್ತ ಭಾರತ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರೋಗ್ಯ ಅಧಿಕಾರಿ ಡಾ: ಚಿಕ್ಕರಾಸೆಗೌಡ,ತಾಲೂಕು ವೈದ್ಯಾಧಿಕಾರಿ ಡಾ ಮಧುಸೂದನ್,ಡಾ: ಶ್ರೀಕಾಂತ್, ಡಾ: ಜಯಪ್ರಕಾಶ್,ಡಾ: ಶಶಿಧರ್, ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



