ಪಿರಿಯಾಪಟ್ಟಣ : ಹಾಲು ಒಕ್ಕೂಟದಿಂದ ಸಿಗುವ ಅನುದಾನಗಳನ್ನು ಉತ್ಪಾದಕರು ಸದುಪಯೋಗಪಡಿಸಿಕೊಳ್ಳಬೇಕೆಂದು ವಿಸ್ತರಣಾಧಿಕಾರಿ ಶ್ರೀಕಾಂತ್ ತಿಳಿಸಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಸಾಲುಕೊಪ್ಪಲು ಹಾಲು ಉತ್ಪಾದಕ ಸಹಕಾರ ಸಂಘದ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಸಂಘವು ಈ ಸಾಲಿನಲ್ಲಿ ಉತ್ತಮ ಲಾಭ ಗಳಿಸಿದೆ.ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಇರುವ ಮೈಸೂರು ಹಾಲು ಒಕ್ಕೂಟದಲ್ಲಿ ಮೇವು ತುಂಡರಿಸುವ ಯಂತ್ರ, ರಬ್ಬರ್ ಮ್ಯಾಟ್ ,ಹಾಲು ಕರೆಯುವ ಯಂತ್ರ ,ಕೃತಕ ಗರ್ಭಧಾರಣಾ ಸೌಲಭ್ಯ ,ರಾಸುಗಳಿಗೆ ಪ್ರಥಮ ಚಿಕಿತ್ಸೆ ಸೌಲಭ್ಯ ಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಹಾಲು ಉತ್ಪಾದಕರು ಪಡೆದುಕೊಳ್ಳಬೇಕು.
ಕರ್ನಾಟಕ ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನದಿಂದ ರೈತರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.ಆದ್ದರಿಂದ ಶುದ್ಧ ಹಾಲು ಉತ್ಪಾದನೆ ಮಾಡುವ ಮೂಲಕ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯಮ್ಮ ಉಪಾಧ್ಯಕ್ಷರದ ಶ್ವೇತ ನಿರ್ದೇಶಕರುಗಳಾದ ರಾಣಿ ವಸಂತಮ್ಮ ಜಯಮ್ಮ ಪಾರ್ವತಮ್ಮ ಸಾವಿತ್ರಿ ನಾಗಮ್ಮ ಸಾಕಮ್ಮ ಮಹಾದೇವಮ್ಮ ಮುಖ್ಯ ಕಾರ್ಯನಿರ್ವಣಧಿಕಾರಿ ಸೌಮ್ಯ ಹಾಲು ಪರಿವೀಕ್ಷಕ ಧನಂಜಯ್ ಸೇರಿದಂತೆ ಊರಿನ ಗ್ರಾಮಸ್ಥರು ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

