“ದಸರಾ ಆನೆ ಲಕ್ಷ್ಮೀಯೂ ಪುತ್ರ ದತ್ತಾತ್ರೆಯನಿಗೆ ಜನ್ಮ ನೀಡಿರುವ ಹಿನ್ನೆಲೆ ಗಜಪಡೆಗೆ ಕಬ್ಬು,ಬೆಲ್ಲ,ಬಾಳೆ ಹಣ್ಣು ನೀಡಿ ಸಂಭ್ರಮಿಸಲಾಯಿತು”

ಮೈಸೂರು: ದಸರಾ ಆನೆ ಲಕ್ಷ್ಮೀಯೂ ಪುತ್ರ ದತ್ತಾತ್ರೆಯನಿಗೆ ಜನ್ಮ ನೀಡಿರುವ ಹಿನ್ನೆಲೆ ಗಜಪಡೆಗೆ ಕಬ್ಬು,ಬೆಲ್ಲ,ಬಾಳೆ ಹಣ್ಣು ನೀಡಿ ಸಂಭ್ರಮಿಸಲಾಯಿತು.

ಮೈಸೂರು ದಸರಾ -2022 ರ ಹಿನ್ನೆಲೆ ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಸಿದ್ಧತೆಗಾಗಿ ಬೀಡು ಬಿಟ್ಟಿರುವ ಗಜಪಡೆಗೆ ದತ್ತಾತ್ರೇಯ ಹೊಸ ಸೇರ್ಪಡೆಯಾಗಿರುವ ಸಂಭ್ರಮದ ಹಿನ್ನೆಲೆ ಸಾಂಸ್ಕೃತಿಕ ನಗರದ ಮೈಸೂರಿನ ಜನತೆಯ ಪರವಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ ಕಬ್ಬು ಬೆಲ್ಲ ಬಾಳೆಹಣ್ಣುನೀಡುವ ಮೂಲಕ ಸಿಹಿ ವಿತರಣೆಯೊಂದಿಗೆ,ದತ್ತಾತ್ರೇಯನ ಜನನವನ್ನು ಸಂಭ್ರಮದಿಂದ ಸ್ವಾಗತಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂಧರ್ಭದಲ್ಲಿ ಡಿಸಿಎಫ್ ಕರಿಕಾಳನ್,ಎಸಿಎಫ್ ಸಂತೋಷ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಭವ್ಯ,ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ,ಪ್ರತಿಧ್ವನಿ ಪ್ರಸಾದ್,ರೂಪೇಶ್,ಪುಟ್ಭಾಲ್ ಮಂಜು,ಗುಣಶೇಖರ್,ಫಾರೂಖ್,ಅರುಣ್,ಪೈಲ್ವಾನ್ ಮಹೇಶ್,ಚಿಕ್ಕಲಿಂಗು,ಉಮೇಶ್,ಲೋಕೇಶ್,ಹರೀಶ್,ಅಭಿಷೇಕ್ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *