“ಹೆಮ್ಮೆಯ ಭಾರತೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ”

ಮೈಸೂರು: ಹೆಮ್ಮೆಯ ಭಾರತೀಯ ” ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ
ಒಗ್ಗೂಡಿ ಭಾರತ ನಿರ್ಮಿಸೋಣ :ಡಾ॥ ಆರ್ ಎಚ್ ಪವಿತ್ರ

75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ
ಎಂ ಜಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ “ಹೆಮ್ಮೆಯ ಭಾರತೀಯ “
PROUD INDIAN AWARD 2022 ಪ್ರಶಸ್ತಿ ಪ್ರದಾನ ಮಾಡಲಾಯಿತು

PROUD INDIAN AWARD 2022 ಪ್ರಶಸ್ತಿ ಸ್ವೀಕರಿಸಿದ
ಅನುಸೂಯಾ ,ದೀಪಾ ಎನ್ ,ಡಾ॥ಹಲೀಮಾ ,ಸುಮಂಗಲಾ ದುರ್ಗದ್ ,ಅಶ್ವಿನಿ ಗೌಡ ,ರವಿನಂದನ್ ,ಎ ನಾಗರತ್ನ ,ಗುರು ಸಿ ವೀರತಪ್ಪ ,
ಆನಂದ್ ಮಾಂಡೋತ್,ಡಾ॥ದೀಪು ,ವಿಜಯಾ ಎನ್ ಕೆ ,ಸಿ ಜಿ ಮುತ್ತಣ್ಣ ,ಡಿ ಎಂ ಶ್ರೀಕಾಂತ್ ಪ್ರಸಾದ್ ,ರಾಜೇಶ್ ಎಂ ,ಚಿದು ಎಸ್ ಎಸ್ ,ರಚನಾ ಶಿವಕುಮಾರ್ ,ಮಾಲಾ ಶೆಣೈ ,
ಸುನಿತಾ ವೀರಕರ್ ,ಜ್ಯೋತಿ ,ಶಾರದಾ ಶೇಷಗಿರಿಗೌಡ ,ವಿದೂಷಿ ಎಸ್ ಎನ್ ಮೇಘನಾ ರಾವ್ ,ಆರ್ ಸುಜಾತಾ ವೆಂಕಟೇಶ್ ನಾಯ್ಡು ,ಶಲನ ಮರಗೋಡು,ಸಾನ್ವಿ ಸುಧಾಕರ್ ,ಕೆ ಆರ್ ಚರಣ್,
ಅವರಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು
ನಂತರ ಮಾತನಾಡಿದ ಕರಾಮುವಿ ಅರ್ಥ ಶಾಸ್ತ್ರ ವಿಭಾಗದ ಡಾ.ಆರ್ ಎಚ್ ಪವಿತ್ರ
ಸೈನಿಕ, ಶಿಕ್ಷಕ, ರೈತ ಇವರ ಅನುಪಮ ಸೇವೆಯಿಂದ ದೇಶ ಕಟ್ಟಲು ಸಾಧ್ಯ ಹಿರಿಯ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದೇವೆ. ಗಾಂಧಿ, ಪಟೇಲ್, ನೇತಾಜಿ, ಅಂಬೇಡ್ಕರ್, ತಿಲಕ್‌ರಂತಹ ಮಹಾ ಪುರುಷರು ಮುಂದಾಳತ್ವ ವಹಿಸಿ ಸ್ವಾತಂತ್ರ್ಯ ದೊರಕಿಸಿ ಬ್ರಿಟಿಷರಿಂದ ಮುಕ್ತಿಗೊಳಿಸಿದ್ದಾರೆ ಎಂದರು.

ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜರಾಂ ಮಾತನಾಡಿ
ಸರ್ವರಿಗೂ ಸಮಬಾಳು ಎಂಬ ತತ್ವದಲ್ಲಿ ನಂಬಿಕೆ ಇಟ್ಟು ಮುಂದೆ ಸಾಗೋಣ. ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಸರ್ವ ಜನಾಂಗವೂ ಒಂದಾಗಿ ಬಾಳಿ ದೇಶವನ್ನು ಸಧೃಢಗೊಳಿಸಬೇಕು. ದಶಕಗಳು ಕಳೆದರೂ ದೇಶವು ಹಿಂಸೆ, ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ, ನಿರುದ್ಯೋಗದಂತಹ ಸಮಸ್ಯೆಗಳಿಂದ ಮುಕ್ತಗೊಂಡಿಲ್ಲ. ನಾವೆಲ್ಲ ಒಗ್ಗೂಡಿ ಭಾರತ ನಿರ್ಮಿಸೋಣ ಎಂದರು.
ಶ್ರೀದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ರವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷರಾದ ಡಾ॥ ಆರ್ ಎಚ್ ಪವಿತ್ರಾ ,ಶ್ರೀ ಕಲ್ಪವೃಕ್ಷ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಬಸವರಾಜ ಪೂಜಾರಿ ,ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜರಾಮ್ ,ಚಲನಚಿತ್ರ ನಟಿ ನಿರ್ಮಾಪಕರಾದ ಮೇರಿ ಸುನೀತಾ ಸಿಂಗ್ ,ರೂಪದರ್ಶಿ ಶಿಲ್ಪಾ ಸುಧಾಕರ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್ , ಶ್ರೀದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ,ವಿದ್ಯಾ ,ಹಾಗೂ ಇನ್ನಿತರರು ಹಾಜರಿದ್ದರು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *