ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣ ಪದಚ್ಯುತಿ

ತೀರ್ಥಹಳ್ಳಿ / ಬೆಜ್ಜವಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಜಯ .ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣ ಪದಚ್ಯುತಿ.

ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣಯವರ ಮೇಲೆ ಗ್ರಾಮ ಪಂಚಾಯಿತಿಯ 14 ಸದಸ್ಯರಲ್ಲಿ 12ಸದಸ್ಯರು ವಿಶ್ವಾಸ ಇಲ್ಲವೆಂದು ಅವಿಶ್ವಾಸ ಮಂಡನೆ ಪತ್ರವನ್ನು ಶಿವಮೊಗ್ಗ ಉಪವಿಭಾಗಾಧಿಕಾರಿ ಗಳಿಗೆ ನೀಡಿದ್ದರು .ಉಪವಿಭಾಗಾಧಿಕಾರಿಗಳು ಸಭೆಯ ತಿಳುವಳಿಕೆಯನ್ನು ಹೊರಡಿಸಿದಾಗ ಸಭಾ ತಿಳಿವಳಿಕೆ ನೋಟಿಸ್ ನಿಯಮಬದ್ಧ ವಿಲ್ಲವೆಂದು ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣ ರವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು .ಉಪವಿಭಾಗಾಧಿಕಾರಿಗಳು ಹೊಸದಾಗಿ ಸಭಾ ತಿಳುವಳಿಕೆಯನ್ನು ಹೊರಡಿಸಿ ದಿನಾಂಕ 23ರಂದು ಅವಿಶ್ವಾಸ ನಿರ್ಣಯ ಸಭೆ ಯನ್ನು ನಿಗದಿಗೊಳಿಸಿದರು .ನಿನ್ನೆ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಉಪ ವಿಭಾಗಾಧಿಕಾರಿ ದೊಡ್ಡೇ ಗೌಡರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 12 ಸದಸ್ಯರು ಅವಿಶ್ವಾಸದ ಪರವಾಗಿ ಮತವನ್ನು ಚಲಾಯಿಸಿ ಓರ್ವ ಸದಸ್ಯರು ತಟಸ್ಥರಾಗಿ ಉಳಿದರು.

ಅವಿಶ್ವಾಸದ ಪರವಾಗಿ 12 ಮತಗಳು ಬಂದ ಕಾರಣ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣನವರು ಅಧ್ಯಕ್ಷತೆ ಪದಚ್ಯುತಿ ಆದಂತಾಯ್ತು .ಸದ್ಯದಲ್ಲೇ ನೂತನ ಅಧ್ಯಕ್ಷರು ಆಯ್ಕೆಯಾಗುವ ಸಂಭವವಿರುತ್ತದೆ .ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣ ರವರ ಪದಚ್ಯುತಿಗೊಳಿಸಲು ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಕೈಜೋಡಿಸಿದರು. ನಮ್ಮಲ್ಲಿ ಒಂದು ಗಾದೆ ಮಾತಿದೆ” ಅಭಿ ಪಿಕ್ಚರ್ ಬಾಕಿ ಹೈ !” ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ರಾಷ್ಟ್ರೀಯ ಹೆದ್ದಾರಿ 169ರ ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಇದ್ದು ,ಇಲ್ಲಿ ಭೂಮಿಗೆ ,ಖಾಲಿ ಜಾಗಕ್ಕೆ ಮತ್ತು ನಿವೇಶನಗಳಿಗೆ ಲಕ್ಷಾಂತರ ರೂಪಾಯಿಗಳ ಬೆಲೆ ಇದೆ .ಶಿವಮೊಗ್ಗ- ತೀರ್ಥಹಳ್ಳಿ ಕ್ಕಿಂತಲೂ ಬೆಜ್ಜವಳ್ಳಿಯಲ್ಲಿ ನಿವೇಶನಗಳನ್ನು ತೆಗೆದುಕೊಳ್ಳೋದು ದುಬಾರಿಯಾಗಿರುತ್ತವೆ.

ಈ ಗ್ರಾಮ ಪಂಚಾಯಿತಿಯಲ್ಲಿ ನಿವೇಶನಗಳ ಅಕ್ರಮ ಮಾರಾಟ ಮತ್ತು ಭೂ ಮಾಫಿಯದ ದೊಡ್ಡ ಗ್ಯಾಂಗ್ ಇದೆ .ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಡಿಮ್ಯಾಂಡ್ ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿಗೆ ನಿವೇಶನಗಳನ್ನು ಮಾರಾಟ ಮಾಡುತ್ತಿರುವ ದಂಧೆ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ .ತಾಲ್ಲೂಕು ತಹಸೀಲ್ದಾರ್ ಆಫೀಸಿನಲ್ಲಿ ಕದ್ದ ಮತ್ತು ಸೃಷ್ಟಿಸಿದ ನಕಲಿ ಹಕ್ಕು ಪತ್ರಗಳ ಕೇಂದ್ರಬಿಂದುವೇ ಬೆಜ್ಜವಳ್ಳಿ. ಮಾಳುಾರು .ಗಬಡ್ಡಿ ,ಸೀಕೆ ರಸ್ತೆ ಇಲ್ಲಿ ಕೆಲವು ನಕಲಿ ಹಕ್ಕು ಪತ್ರ ತರುವ ಸೃಷ್ಟಿಸುವ ಏಜೆಂಟರಿದ್ದಾರೆ .ಗಬಡ್ಡಿ , ನಂದ ಗದ್ದೆ ,ಮಾಳೂರು, ಬೆಜ್ಜವಳ್ಳಿ ಮುಂತಾದ ಭಾಗಗಳಲ್ಲಿ ಈಗಾಗಲೇ ಹತ್ತಾರು ನಿವೇಶನ ಲಕ್ಷ -ಲಕ್ಷ ರೂಪಾಯಿ ಗಳಿಗೆ ಬೇನಾಮಿಯಾಗಿ ಮಾರಾಟ ಮಾಡಲಾಗಿದೆ. ಜತೆಯಲ್ಲಿ ಅರಣ್ಯ ಭೂಮಿ ಮತ್ತು ಕಂದಾಯಗೆ ಬೇಲಿ ಹಾಕಿ ಮಾರಾಟ ಮಾಡುವ ದಂಧೆ.

ಅತಿ ಮುಖ್ಯವಾಗಿ ಈ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 6-7 ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿ ಕೋಳಿ ಫಾರಂಗಳಿವೆ .ಅವುಗಳು ಅಕ್ರಮವಾಗಿದ್ದು ಅವುಗಳಿಗೆ ಪರವಾನಿಗೆ ಸಹ ಇರುವುದಿಲ್ಲ .ಜತೆಯಲ್ಲಿ ಅರಣ್ಯ ಭೂಮಿಯಲ್ಲಿ ಬೆಜ್ಜವಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯ ಭೂಮಿಯಲ್ಲಿ ಬ್ರ್ಯಾಂಡಿ ಅಂಗಡಿ ಅಂದರೆ ಮದ್ಯದಂಗಡಿ ಗಳಿದ್ದು .ಮರಳು ಮಾಫಿಯಾ ಬಹುದೊಡ್ಡ ದಂಧೆ ಯಾಗಿರುತ್ತದೆ .ಆದಕಾರಣ ಈ ಎಲ್ಲ ವ್ಯವಹಾರಗಳಲ್ಲಿ ಇಲ್ಲಿ ಲಕ್ಷ- ಲಕ್ಷದ ದಂಧೆ ಮತ್ತು ವ್ಯವಹಾರ ನಡೆಯುತ್ತಿದೆ .ಇವುಗಳಿಗೆಲ್ಲಾ ಮುಖ್ಯ ಕೇಂದ್ರ ಬಿಂದುವೇ ಜನಪ್ರತಿನಿಧಿಗಳು ಎಂದು ಕೆಲವು ಅಧಿಕಾರಿಗಳು .ಅದಕ್ಕೇ ಹೇಳಿದ್ದು ” ಅಭಿ ಪಿಕ್ಚರ್ ಬಾಕಿ ಹೈ ” ಎಂದು.ಅಧ್ಯಕ್ಷರ ಪದಚ್ಯುತಿ ಏನು ನಡೆಯಿತು ಆದರೆ ಸದ್ಯದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮತ್ತು ನಡೆದಿರುವ ಹತ್ತಾರು ಹಗರಣಗಳು ಬಯಲಿಗೆ ಬರುವ ಎಲ್ಲಾ ಸಾಧ್ಯತೆಗಳಿವೆ .

ವರದಿ:ಲಿಯೋ ಅರೋಜ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *