ತೀರ್ಥಹಳ್ಳಿ/ ಬೆಂಗಳೂರು :-ತೀರ್ಥಹಳ್ಳಿ ತಾಲ್ಲೂಕಿನ ಸಂಕದಹೊಳೆ ಕೆರೋಡಿ .ಕೆ. ಎಲ್ .ಪ್ರಸಾದ್ ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿಯಾಗಿ ಬಡ್ತಿ .

ಅನೇಕ ವರ್ಷಗಳಿಂದ ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸೌಧದಲ್ಲಿ ವಿವಿಧ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ , ಕೆ .ಎಲ್ . ಪ್ರಸಾದ್ ರವರು ಸರ್ಕಾರದ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿ ನಗರಾಭಿವೃದ್ಧಿ ಇಲಾಖೆ ಆಂತರಿಕ ಆರ್ಥಿಕ ಸಲಹೆಗಾರರಾಗಿ (ಇಂಟರ್ನಲ್ ಫೈನಾನ್ಷಿಯಲ್ ಅಡ್ವೈಸರ್ )ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ .ಕೆ .ಎಲ್. ಪ್ರಸಾದ್ ರವರು ವಿಧಾನಸೌಧದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ , ತಹಸೀಲ್ದಾರ್ ಆಗಿ ಸಹ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದವರಾಗಿದ್ದಾರೆ.
ಶ್ರೀಯುತರು ತೀರ್ಥಹಳ್ಳಿ ತಾಲ್ಲೂಕಿನ ಸಂಕದಹೊಳೆ ಸಮೀಪ ಕೆರೋಡಿ ಜಮೀನ್ದಾರ ಲೋಕಪ್ಪ ಗೌಡ ಮಗನಾಗಿದ್ದು .ಕೆರೋಡಿ ಕಾಂಪ್ಲೆಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನ ಮಾಲೀಕರಾದ ಮೋಹನ್ ಕೆರೋಡಿ ಅವರ ಸಹೋದರರ ಆಗಿರುತ್ತಾರೆ .ಕೆ.ಎಲ್ . ಪ್ರಸಾದ್ ರವರು ತೀರ್ಥಹಳ್ಳಿ ತಾಲ್ಲೂಕಿನ ಅಭಿವೃದ್ಧಿಯ ವಿಚಾರದಲ್ಲಿ ಅನೇಕ ಕೆಲಸ ಕಾರ್ಯಗಳನ್ನು ವಿಧಾನಸೌಧದಲ್ಲಿ ಮಾಡಿಸಿ ಆದೇಶ ಕೊಡಿಸಿಕೊಡುವಲ್ಲಿ ಹೆಚ್ಚಿನ ಶ್ರಮ ವಹಿಸಿದವರು.ಮುಂದೆಯೂ ಇವರಿಂದ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಜಿಲ್ಲೆಗೆ ಅಭಿವೃದ್ಧಿಗಾಗಿ ಹೆಚ್ಚಿನ ಸಹಕಾರ ದೊರೆಯಲೆಂದು ಆಶಿಸುತ್ತಾ ಬಡ್ತಿ ಪಡೆದ ಶ್ರೀಯುತರಿಗೆ ಅಭಿನಂದಿಸಿ, ಶುಭ ಕೋರಲಾಗಿದೆ .
ವರದಿ: ಲಿಯೋ ಅರೋಜ.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.


