ಪಶು ವೈದ್ಯ ಶಸ್ತ್ರಚಿಕಿತ್ಸಾ ತಜ್ಞ ಡಾಕ್ಟರ್ ಯುವರಾಜ್ ಹೆಗ್ಡೆಯವರಿಗೆ ರಾಷ್ಟ್ರಮಟ್ಟದ “ಪಶುಧಾನ್ ಪ್ರಹರೆ”ಇಂಡಿಯಾ ಅವಾರ್ಡ್ 2022.

ತೀರ್ಥಹಳ್ಳಿ: ತೀರ್ಥಹಳ್ಳಿ ಪಶುವೈದ್ಯ ಇಲಾಖೆಯ ಪಶು ವೈದ್ಯ ಶಸ್ತ್ರಚಿಕಿತ್ಸಾ ತಜ್ಞ ಡಾಕ್ಟರ್ ಯುವರಾಜ್ ಹೆಗ್ಡೆಯವರಿಗೆ ರಾಷ್ಟ್ರಮಟ್ಟದ “ಪಶುಧಾನ್ ಪ್ರಹರೆ”ಇಂಡಿಯಾ ಅವಾರ್ಡ್ 2022 ಪ್ರಶಸ್ತಿ ಪ್ರದಾನ .

ಇತ್ತೀಚಿನ ವರ್ಷಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪಶುವೈದ್ಯ ಇಲಾಖೆಯ ವೈದ್ಯರೊಬ್ಬರು ಮನೆ ಮಾತಾಗಿದ್ದಾರೆ.ತಮ್ಮ ವಿಶೇಷ ಸೇವೆಯಲ್ಲಿ ರಾತ್ರಿ- ಹಗಲು ಎನ್ನದೆ,ದಿನದ 24ಗಂಟೆಯಲ್ಲಿ ಯಾವುದೇ ಭಾಗದಲ್ಲಿ ಹಳ್ಳಿ ಇರಲಿ –ಪಟ್ಟಣ ವಿರಲಿ ,ಮಳೆ ,ಗಾಳಿ ಯಾವುದೇ ಕೆಟ್ಟ ಗಂಭೀರ ವಾತಾವರಣದಲ್ಲೂ ಪಶುಗಳಿಗೆ .ಶ್ವಾನಗಳಿಗೆ,ಪಕ್ಷಿಗಳಿಗೆ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ರಾತ್ರಿ ಹೊತ್ತು ಬೀದಿಗಳಲ್ಲಿ ಜಾನುವಾರುಗಳು ಅಪಘಾತವಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ ಹಿಂದೆ -ಮುಂದೆ ಯೋಚಿಸದೆ ಮೋಟಾರ್ ಸೈಕಲ್ ಏರಿಕೊಂಡು ಚಿಕಿತ್ಸೆಗೆ ತಯಾರಾಗುತ್ತರೆ.

ವಿಶೇಷವಾಗಿ ಪಶು ವೈದ್ಯಕೀಯ ಶಸ್ತ್ರಚಿಕಿತ್ಸೆಯಲ್ಲಿ ತಾಲ್ಲೂಕಿನಲ್ಲಿ ಹಾಗೂ ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಹೆಸರು ಪಡೆದಿರುವ ಡಾಕ್ಟರ್ ॥. ಯುವರಾಜ ಹೆಗ್ಡೆ .ಶ್ರೀಯುತರು ಪಶುವೈದ್ಯ ಮತ್ತು ಪ್ರಾಣಿ ಪಕ್ಷಿಗಳ ಚಿಕಿತ್ಸೆಯ ಜೊತೆಯಲ್ಲಿ ವಿಶೇಷವಾಗಿ ಗಂಭೀರ ಗಳಾದ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಜನರಿಂದ ಸೈ ಎನಿಸಿಕೊಂಡಿದ್ದಾರೆ .ಹೆಚ್ಚೇಕೆ ಜೆಸಿಬಿ ಯಂತ್ರಕ್ಕೆ ಸಿಲುಕಿದ ನಾಗರಹಾವನ್ನು ರಕ್ಷಣೆ ಮಾಡಿ ಅದಕ್ಕಾಗಿರುವ ಗಾಯವನ್ನು ಚಿಕಿತ್ಸೆ ನೀಡಿ ಸಂರಕ್ಷಣೆ ಮಾಡಿದ ಕೀರ್ತಿ ಇವರದು .ನೂರಾರು ಪ್ರಕರಣಗಳಲ್ಲಿ ರೈತರ ಜಾನುವಾರುಗಳು ,ಶ್ವಾನಗಳು ,ಬೆಕ್ಕು ,ಪಕ್ಷಿಗಳಿಗೆ ಕ್ಷಣಮಾತ್ರದಲ್ಲಿ ಚಿಕಿತ್ಸೆ ನೀಡಿ ನೂರಾರು ಪ್ರಾಣಗಳನ್ನು ಉಳಿಸಿದೆ ಕೀರ್ತಿ ಇವರದು .ವಿಶೇಷವಾಗಿ ಬೀದಿ ನಾಯಿ ಗಳಿರಲಿ ,ಸಾಕಿದ ನಾಯಿಗಳಿಗೆ ಅವುಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿದ ನೂರಾರು ಪ್ರಕರಣಗಳಲ್ಲಿ ಇವರು ನೇರವಾಗಿ ಭಾಗಿದಾರರಾಗಿದ್ದಾರೆ .ಗವಿಯಲ್ಲಿ ವೃತ್ತಿಯಲ್ಲಿ ಸೇವೆ ಸಲ್ಲಿಸುವ ಚಿರತೆಯೊಂದು ರೈತರಿಗೆ ತೊಂದರೆ ಕೊಡುತ್ತಿರುವ ಸಮಯದ ಅದನ್ನು ಸೆರೆಹಿಡಿಯಲು ಶ್ರಮ ಪಟ್ಟವರು .ಸ್ಥಳೀಯ ಕೆಲವು ಸಂಘ ಸಂಸ್ಥೆಗಳು ,ಸಮಾನ ಮನಸ್ಕ ಯುವಕರೊಂದಿಗೆ ಸೇರಿಕೊಂಡು ಹತ್ತಾರು ಬೀದಿ ಜಾನುವಾರುಗಳು ಅಪಘಾತಕ್ಕೀಡಾದಾಗ ಸ್ವಂತ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಇಂಜೆಕ್ಷನ್ ಔಷಧ ಉಪಚಾರ ನೀಡಿ ಜಾನುವಾರುಗಳ ,ಹಸುಗಳ ಆರೈಕೆ ಮಾಡಿದ ಜವಾಬ್ದಾರಿ ಹೊತ್ತವರು .ಇಂದಿನ ದಿನಗಳಲ್ಲಿ ವೈದ್ಯಕೀಯ ವೃತ್ತಿಯನ್ನು ಅನೇಕರು ವ್ಯಾಪಾರ, ವ್ಯವಹಾರವನ್ನುವೃತ್ತಿಯನ್ನು ಮಾಡಿಕೊಂಡಿದ್ದಾರೆ

ಡಾಕ್ಟರ್॥ ಯುವರಾಜ ಹೆಗ್ಡೆಯವರು ಜನರಿಂದ ಚಿಕಿತ್ಸೆಗಾಗಿ ಹಣದ ನಿರೀಕ್ಷೆ ಮಾಡದೆ ಚಿಕಿತ್ಸೆ ನೀಡುವುದು ತನ್ನ ಸೇವೆ ಎಂದು ಭಾವಿಸಿ ಕಾರ್ಯನಿರ್ವಹಿಸುತ್ತಿರುವುದು ತೀರ್ಥಹಳ್ಳಿ ತಾಲ್ಲೂಕಿನ ಹೆಮ್ಮೆ ಎಂದರೆ ತಪ್ಪಾಗಲಾರದು .ಇದನ್ನು ಗುರುತಿಸಿ ಶ್ರೀಯುತ ಡಾಕ್ಟರ್॥ ಯುವರಾಜ ಹೆಗಡೆಯವರನ್ನು “ಪಶುಪ್ರದಾನ ಪ್ರಹರೆ”ಇಂಡಿಯಾ ಅವಾರ್ಡ್ 2022ನೀಡಿ ಗೌರವಿಸಲಾಗಿದೆ .ಹಾಗೂ ಪಶುವೈದ್ಯ ಇಲಾಖೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆತಂದಿದ್ದು , ತೀರ್ಥಹಳ್ಳಿ ತಾಲ್ಲೂಕಿಗುಾ ಸಹ ದೊಡ್ಡ ಹೆಮ್ಮೆಯಾಗಿದೆ .ಇವರು ಈಗಾಗಲೇ ಹತ್ತಾರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಂಘ ಸಂಸ್ಥೆಗಳಲ್ಲಿ ಪ್ರಶಸ್ತಿಯನ್ನು ಪಡೆದು ,ಕ್ರೀಡಾಪಟು ಆಗಿರುತ್ತಾರೆ .ಈ ಪ್ರಶಸ್ತಿಯನ್ನು ಪಡೆದ ಡಾಕ್ಟರ್ ಯುವರಾಜ್ ಹೆಗ್ಡೆಯವರಿಗೆ ತೀರ್ಥಹಳ್ಳಿ ತಾಲ್ಲೂಕಿನ ಜನತೆಯ ,ರೈತರ ,ಪ್ರಾಣಿ ದಯಾ ನಾಗರಿಕರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಮತ್ತು ಶುಭಾಶಯಗಳು.

ವರದಿ ಲಿಯೋ ಅರೋಜ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *