“ವಿಪ್ರ ಜಾಗೃತಿ ವೇದಿಕೆಯ 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ”

ವಿಪ್ರ ಜಾಗೃತಿ ವೇದಿಕೆಯ 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ.

ಕಾರ್ಯಕ್ರಮವು ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ರಂಗಶಂಕರ ಸಭಾಂಗಣದಲ್ಲಿ ಆವರಣದಲ್ಲಿಆಯೋಜಿಸಲಾಯಿತು 2021-2022ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಖಡ 80% ಕ್ಕಿಂತ ಹೆಚ್ಚು ಅಂಕ ಪಡೆದ 55ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಆನಂತರ ವಿಪ್ರ ಜ್ಯೋತಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು

ಇಂದು ನಡೆದ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಪ್ರಜ್ಯೊತಿ ಸ್ಮರಣ ಸಂಚಿಯಲ್ಲಿನ ಲೇಖನವನ್ನು ಮ.ವಿ ರಾಂಪ್ರಸಾದ್ ಮೆಚ್ಚುಗೆ ವ್ಯಕ್ತ ಪಡಿಸಿದರು.ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಸ್ಮರಣ ಸಂಚಿಕೆಯ ಲೇಖನಗಳು ನೂರಾರು ವರ್ಷದಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ಅಮೂಲ್ಯವಾದ ಕೊಡುಗೆಯನ್ನು ಬ್ರಾಹ್ಮಣರು ಹಾಗೂ ಸಮಾಜ ನೀಡಿರುವುದನ್ನು ನೆನಪಿಸುತ್ತದೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಮಾ.ವಿ ರಾಮ್ ಪ್ರಸಾದ್. ನಗರಪಾಲಿಕೆ ಸದಸ್ಯರು ಎಂಸಿ ರಮೇಶ್ ವಿಪ್ರ ಮುಖಂಡರು ನಂ ಶ್ರೀಕಂಠ ಕುಮಾರ್. ಸಮಾಜಸೇವಕರಾದ ರಘುರಾಮ್ ವಾಜಪೇಯಿ. ಆದರ್ಶ ಸೇವಾ ಸಂಘದ ಅಧ್ಯಕ್ಷರಾದ ಜಿ ಆರ್ ನಾಗರಾಜ್. ಹೋಟೆಲ್ ಏಟ್ರಿಯಂ ಮಾಲೀಕರಾದ ಪುರಾಣಿಕ್. ವಿಪ್ರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ರಮೇಶ್. ವಿಪ್ರ ಜಾಗೃತಿ ವೇದಿಕೆಯ ಕಾರ್ಯದರ್ಶಿಗಳಾದ ಸುರೇಶ್ ಮುಳ್ಳೂರು.ವಿಪ್ರ ಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ನಾಗರಾಜ್ .ಮುರುಗೇಶ್ ಸಹ ಕಾರ್ಯದರ್ಶಿಗಳು, ಎಂ ವಿ ಮಂಜುನಾಥ್ ಖಜಾಂಚಿ. ವಿಪ್ರ ಜಾಗೃತಿ ವೇದಿಕೆಯ ನಿರ್ದೇಶಕರಾದ ಸುಚೀಂದ್ರ ಮೊದಲಾದವರು ಉಪಸ್ಥಿತರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *