ಮೈಸೂರು: ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಇಂದು ವೀರ ಸಾವರ್ಕರ್ ರಥ ಯಾತ್ರೆ ಆರಂಭವಾಯಿತು.

ವೀರ ಸಾವರ್ಕರ್ ಬಗ್ಗೆ ಕನ್ನಡ ನಾಡಿನಲ್ಲಿ ಅಪಪ್ರಚಾರ ನಡೆಯುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಇದೇ ವೇಳೆ ಯಡಿಯೂರಪ್ಪ ಕಿಡಿಕಾರಿದರು.
ಶಿವಮೊಗ್ಗ ಸೇರಿದಂತೆ ಇತರೆಡೆ ಸಾವರ್ಕರ್ ಭಾವಚಿತ್ರ ಪ್ರತಿಷ್ಠಾಪನೆ ಮಾಡಿರುವುದರ ವಿರುದ್ಧ ನಡೆದ ತೀವ್ರ ರೀತಿಯ ಹೋರಾಟದ ನಡುವೆ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ವೀರ ಸಾವರ್ಕರ್ ರಥ ಯಾತ್ರೆ ಆರಂಭಗೊಂಡಿದೆ. ವೀರ ಸಾವರ್ಕರ್ ಪ್ರತಿಷ್ಠಾನ ಈ ರಥಯಾತ್ರೆ ಆರಂಭಿಸಿದೆ.
ಮೈಸೂರು ಅರಮನೆಯ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಥ ಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು. ಬ್ರಿಟಿಷರಿಗಾಗಿ ವೀರ ಸಾವರ್ಕರ್ ಕೆಚ್ಚೆದೆಯ ಹೋರಾಟ ಮಾಡಿದರು. ದೇಶಕ್ಕಾಗಿ ತನ್ನ ಪದವಿಯನ್ನೆ ತಿರಸ್ಕರಿಸಿದ ನಿಸ್ವಾರ್ಥ ಹೋರಾಟಗಾರ ಆದರೆ ಸಾವರ್ಕರ್ ಬಗ್ಗೆ ಅಪಪ್ರಚಾರ ಮಾಡುತ್ತಾ ದೇಶದ ಮೌಲ್ಯಗಳಿಗೆ ಮಸಿ ಬಳೆಯುತ್ತಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಯಡಿಯೂರಪ್ಪ ಟೀಕಾ ಪ್ರಹಾರ ನಡೆಸಿದರು.
ರಥ ಯಾತ್ರೆ ಆರಂಭವಾಗುವ ವೇಳೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಿಡಿದಿದ್ದರು. “ನಾನು ಸಾವರ್ಕರ್, ವೀರ ಸಾವರ್ಕರ್” ಎಂಬ ಘೋಷಣೆಗಳನ್ನ ಮೊಳಗಿಸಿದರು. ಬ್ರಿಟಿಷರ ವಿರುದ್ಧ ವೀರ ಸಾವರ್ಕರ್ ನಡೆಸಿದ ಹೋರಾಟದ ಬಗೆಯನ್ನು ವಿವರಿಸಿ ಹೇಳಿದರು. ರಾಜ್ಯದ ಇತರೆಡೆ ಸಾವರ್ಕರ್ ಕಾರ್ಯಕ್ರಮಗಳಲ್ಲಿ ನಡೆದ ಗಲಾಟೆಗಳ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ರಥ ಯಾತ್ರೆಯು ಮೈಸೂರು ಹಾಗೂ ಚಾಮರಾಜನಗರದ ಹಳ್ಳಿ ಹಳ್ಳಿಗಳಿಗೂ ಸಂಚರಿಸಲಿದೆ. ಎಂಟು ದಿನಗಳ ಕಾಲ ಸಂಚರಿಸುವ ರಥ ಯಾತ್ರೆಯಲ್ಲಿ ವೀರ ಸಾವರ್ಕರ್ ಅವರ ಹೋರಾಟವನ್ನು ಎಲ್ ಇಡಿ ಮೂಲಕ ಜನರಿಗೆ ತೋರಿಸಲಾಗುತ್ತದೆ. ಸಾವರ್ಕರ್ ವಿರುದ್ಧ ನಡೆಯುತ್ತಿರುವ ಹೋರಾಟದ ನಡುವೆ ಮೈಸೂರಿನಲ್ಲಿ ಈಗ ಆರಂಭವಾಗಿರುವ ರಥ ಯಾತ್ರೆ ಬಹಳ ಮಹತ್ವ ಪಡೆದಿದೆ.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

