ವಾರಣಾಸಿಗೆ ಆಗಮಿಸಿದ ಐಷಾರಾಮಿ ಗಂಗಾ ವಿಲಾಸ್‌ ಕ್ರೂಸ್

ವಾರಣಾಸಿ: ವಾರಣಾಸಿಗೆ ಆಗಮಿಸಿದ ಐಷಾರಾಮಿ ಗಂಗಾ ವಿಲಾಸ್‌ ಕ್ರೂಸ್

ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿವರಿಂದ ಉದ್ಘಾಟನೆಗೊಳ್ಳಲಿರುವ ಕೋಲ್ಕತ್ತಾ-ವಾರಣಾಸಿ ಕ್ರೂಸ್‌ ಯಾನಕ್ಕಾಗಿ ಐಷಾರಾಮಿ ಗಂಗಾ ವಿಲಾಸ್‌ ಕ್ರೂಸ್‌ ಕೋಲ್ಕತ್ತಾದಿಂದ ವಾರಣಾಸಿಗೆ ಆಗಮಿಸಿದೆ.

ಡಿಸೆಂಬರ್ 22 ರಂದು ಕೋಲ್ಕತ್ತಾದಿಂದ ಹೊರಟ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯ ರಾಮನಗರ ಬಂದರಿಗೆ ಆಗಮಿಸಿದೆ ಮತ್ತು ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಇದರ ಯಾನಕ್ಕೆ ಚಾಲನೆ ನೀಡಲಿದ್ದಾರೆ.

ವಿಶ್ವದ ಅತಿ ಉದ್ದದ ನದಿ ವಿಹಾರ ರಾಮನಗರದಿಂದ ಹೊರಟು ಸಂತ ರವಿದಾಸ್ ಘಾಟ್‌ಗೆ ಆಗಮಿಸಲಿದ್ದು, ಅಲ್ಲಿ ಭವ್ಯ ಸ್ವಾಗತ ದೊರೆಯಲಿದೆ. ಕ್ರೂಸ್ ಆರಂಭದಲ್ಲಿ ವಾರಣಾಸಿಗೆ ಶನಿವಾರ ಆಗಮಿಸುವ ನಿರೀಕ್ಷೆಯಿತ್ತು ಆದರೆ ಮೂಲಗಳ ಪ್ರಕಾರ ಪ್ರತಿಕೂಲ ಹವಾಮಾನದಿಂದಾಗಿ ವಿಳಂಬವಾಗಿ ನಿನ್ನೆ ಆಗಮಿಸಿದೆ.

ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *