ಹದಿನೈದು ವರ್ಷಗಳಿಂದ ಬೀದಿ ದೀಪ ಕಾಣದ ಹಂಚೀಪುರ ಗ್ರಾಮದ ಹೊಸ ಬಡಾವಣೆ

ನಂಜನಗೂಡು: ಜನಪ್ರತಿನಿಧಿಗಳೆ ಮತ್ತು ಅಧಿಕಾರಿಗಳೆ ನಿಮ್ಮ ಕಾರ್ಯವೈಖರಿಗೆ ನಾಚ್ಕೆ ಆಗ್ಬೇಕು ..?

ಸತತ ಬರೋಬ್ಬರಿ ಹದಿನೈದು ವರ್ಷಗಳಿಂದ ಬೀದಿ ದೀಪ ಕಾಣದ ಹಂಚೀಪುರ ಗ್ರಾಮದ ಹೊಸ ಬಡಾವಣೆಕಗ್ಗತ್ತಲಿನಲ್ಲಿ ದಿನ ದೂಡಿದರು ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗದ ಅಧಿಕಾರಿ ವರ್ಗ ಗ್ರಾಮದ ಹೊಸ ಬಡಾವಣೆಯಲ್ಲಿ ಬೆಳಕು ಕಾಣಲು ಕಛೇರಿಯಿಂದ ಕಛೇರಿಗೆ ಅಲೆದರು ಪ್ರಯೋಜನವಿಲ್ಲ.

ಬೆಳಕೇ ಇಲ್ಲದ ಬಡಾವಣೆಯಲ್ಲಿ ಬಡಮಕ್ಕಳ ವಿದ್ಯಾಭ್ಯಾಸ ಮೊಟಕು,ರಾಜಕೀಯ ದ್ವೇಷಕ್ಕೆ ಬಡ ರೈತ ಕೂಲಿಕಾರ್ಮಿಕರ ಮನೆಗಳ ಮೇಲೆ ಅಸ್ತ್ರ ಪ್ರಯೋಗ ಮಾಡಿರುವ ಅಧಿಕಾರಿ ವರ್ಗ,ನಂಜನಗೂಡು ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮವಾದ ಹಂಚೀಪುರ ಗ್ರಾಮದಲ್ಲಿ ಘಟನೆ.

ಬರೋಬ್ಬರಿ ಹದಿನೈದು ವರ್ಷಗಳಿಂದ ಹಂಚೀಪುರ ಗ್ರಾಮದ ಹೊಸ ಬಡಾವಣೆಯಲ್ಲಿ ಇಪ್ಪತ್ತು ಕುಟುಂಬ ವಾಸಿಸುತ್ತಿದೆ .ಆ ಇಪ್ಪತ್ತು ಕುಟುಂಬಗಳ ವಾಸಿಗಳು ರೈತರು ಕೂಲಿ ಕಾರ್ಮಿಕರು ಬಡ ವರ್ಗದವರಾಗಿದ್ದಾರೆ.

ಬೀದಿದೀಪ ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಜನಪ್ರತಿನಿಧಿಗಳ ಕಾಲು ಹಿಡಿದರು ಪ್ರಯೋಜನವಿಲ್ಲವಾಗಿದೆ.ಕಳೆದ 1ತಿಂಗಳ ಹಿಂದೆ ನಂಜನಗೂಡಿನ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ತಹಸೀಲ್ದಾರ್ ಶಿವಮೂರ್ತಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ದೀಪದ ವ್ಯವಸ್ಥೆಗೆ ಮುಂದಾಗಿದ್ದರು.

ಆದರೆ ಗ್ರಾಮದ ರಾಜಕೀಯ ದ್ವೇಷಕ್ಕಾಗಿ ಹೊಸ ಬಡಾವಣೆಯ ಇಪ್ಪತ್ತು ಕುಟುಂಬಗಳ ಮನೆಗಳು
ಕಗ್ಗತ್ತಲಿನಲ್ಲಿ ದಿನದೂಡುತ್ತಿವೆ.ಸ್ಥಳಿಯ ಶಾಸಕರಾಗಿರಲಿ ಮಾಜಿ ಮಂತ್ರಿಯಾಗಿರಲಿ ಹಂಚೀಪುರ ಗ್ರಾಮದ ಹೊಸ ಬಡಾವಣೆಯ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ.

ಮೂಲಭೂತ ಸೌಲಭ್ಯಕ್ಕಾಗಿ ಇಪ್ಪತ್ತು ಕುಟುಂಬಗಳ ಮಹಿಳೆಯರು ಮಕ್ಕಳು ಯಾತನೆ ಪಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವಾಗಿರುವ ಹಂಚಿಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಪ್ರತಿ ಸಭೆ ಸಮಾರಂಭಗಳಿಗೆ ತೆರಳಿ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಪಡಿಸಲಾಗಿದೆ.

ಜಿಲ್ಲಾಧಿಕಾರಿಗಳಿಗೂ ಕೂಡ ಸಾಕಷ್ಟು ಮನವಿ ಮಾಡಲಾಗಿದೆ ಜಿಲ್ಲಾ ಮಟ್ಟದಿಂದ ಗ್ರಾಮ ಪಂಚಾಯಿತಿಯ ವರೆಗೂ ಯಾವುದೇ ಅಧಿಕಾರಿಗಳು ಈ ನೊಂದ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ,ಸ್ವತಂತ್ರ ಭಾರತದಲ್ಲಿ ಅನಾಗರಿಕತೆಯ ಬದುಕು ಸಾಗಿಸುತ್ತಿರುವ ಬಡ ಜನರ ಬದುಕು ಬದಲಾಯಿಸುವವರು ಯಾರು ಎಂಬ ಯಕ್ಷ ಪ್ರಶ್ನೆ ಕಾಡತೊಡಗಿದೆ.

ಹಂಚೀಪುರ ಗ್ರಾಮದ ನೊಂದ ಜನರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದ್ದಾರೆ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *