ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಚುನಾವಣೆ 2026–29 ದಿನಕರ ಅವರಿಗೆ ಸ್ಟೇಟ್ ಚಿಹ್ನೆ ‘ಕ್ರಮ ಸಂಖ್ಯೆ 25’
ಹಿಂದ್ ಸಮಾಚಾರ ನ್ಯೂಸ್ ಡೆಸ್ಕ್ – ಮಾರ್ಚ್ 7, 2026
ಸಾಗರ: ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಆಗಿರುವ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ 2026–29 ಅವಧಿಯ ಚುನಾವಣೆಯನ್ನು ಮಾರ್ಚ್ 8ರಂದು ನಡೆಸಲಾಗುತ್ತಿದೆ.

ಶಿವಪ್ಪನಾಯಕ ನಗರದ ನಿವಾಸಿಯಾಗಿರುವ ದಿನಕರ ಅವರಿಗೆ ಸಮಾಜ ಸೇವೆ ಮತ್ತು ಮಾನವೀಯ ಕಾರ್ಯಗಳಿಗಾಗಿ ಸ್ಟೇಟ್ ಚಿಹ್ನೆಯ ಕ್ರಮ ಸಂಖ್ಯೆ 25 ನೀಡಲಾಗಿದೆ. ದಿನಕರ ಅವರು ತಮ್ಮ ಜೀವನವನ್ನು ಜನಸೇವೆಗೆ ಸಮರ್ಪಿಸಿಕೊಂಡು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರು ಮತ್ತು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು, ರಕ್ತದಾನ ಶಿಬಿರಗಳು ಹಾಗೂ ಆರೋಗ್ಯ ಸಂಬಂಧಿತ ಸೇವಾ ಚಟುವಟಿಕೆಗಳನ್ನು ಆಯೋಜಿಸುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಸಮಾಜದಲ್ಲಿ ಉತ್ತಮ ಹೆಸರಿರುವ ವ್ಯಕ್ತಿಗಳನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಾಗಿದೆ. ಸ್ವಚ್ಛ ಮತ್ತು ನ್ಯಾಯಸಮ್ಮತ ಆಡಳಿತ ನೀಡುವುದರ ಜೊತೆಗೆ ನ್ಯಾಸ ಪ್ರತಿಷ್ಠಾನದ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಅವರ ಸೇವಾ ಮನೋಭಾವವನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ಸಮಾಜದ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ದಿನಕರ ಅವರಿಗೆ ಸ್ನೇಹಿತರು, ಬಂಧುಗಳು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ದಿನಕರ ಅವರಂತಹ ಸಮಾಜಮುಖಿ ವ್ಯಕ್ತಿಗಳು ಸಮಾಜಕ್ಕೆ ಪ್ರೇರಣೆಯಾಗಿದ್ದು, ಅವರ ಸೇವಾ ಚಟುವಟಿಕೆಗಳು ಇನ್ನಷ್ಟು ಜನರಿಗೆ ಸಹಾಯವಾಗಲಿ ಎಂಬ ಆಶಯ ವ್ಯಕ್ತವಾಗಿದೆ.



