ಸಿದ್ದಾಪುರ: ಸಿದ್ದಾಪುರ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಲೋಕ ಅದಾಲತ್. ಚಾಲ್ತಿಯಲ್ಲಿರುವ 682 ಹಾಗೂ 313 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥ.

ತಾಲೂಕಿನ ನ್ಯಾಯಾಲಯದಲ್ಲಿ ದಿನಾಂಕ 13 – 8 – 2002 ರಂದು ನ್ಯಾಯಾಧೀಶರಾದ ತಿಮ್ಮಯ್ಯ ಜಿ ಯವರ ಅಧ್ಯಕ್ಷತೆಯಲ್ಲಿ ಸಂಧಾನಕಾರರಾದ ಹೆಚ್ ಜಿ ಹೆಗಡೆ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ನಡೆಯಿತು.
ಸಿದ್ದಾಪುರ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ 31 ಸಿವಿಲ್ ಪ್ರಕರಣಗಳು, 651 ಕ್ರಿಮಿನಲ್ ಪ್ರಕರಣಗಳು ಒಟ್ಟು 682 ಪ್ರಕರಣಗಳು ಇತ್ಯರ್ಥಗೊಂಡಿದ್ದು ಒಟ್ಟು 47,85,619 ರೂಪಾಯಿ ವಸೂಲಿ ಯಾಗಿರುತ್ತದೆ ಹಾಗೂ 313 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡು 2,57,703 ರೂಪಾಯಿ ವಸೂಲಿ ಯಾಗಿರುತ್ತದೆ.
ಈ ಸಂದರ್ಭದಲ್ಲಿ ಸದರಿ ಪ್ರಕರಣಗಳ ಇತ್ಯರ್ಥಪಡಿಸಲು ಸಹಕರಿಸಿದ ನ್ಯಾಯವಾದಿ ಸಂಘದ ಎಲ್ಲಾ ನ್ಯಾಯವಾದಿಗಳಿಗೆ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೂ, ಹೆಸ್ಕಾಂ ಸಿದ್ದಾಪುರ ಹಾಗೂ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ್ ಸಿದ್ದಾಪುರದ ಸದಸ್ಯ ಕಾರ್ಯದರ್ಶಿಗಳಿಗೆ ನ್ಯಾಯಾಧೀಶರಾದ ತಿಮ್ಮಯ್ಯ ಜಿ ರವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿರುತ್ತಾರೆ. ಹಾಗೂ ಮುಂದಿನ ಲೋಕ ಅದಾಲತ್ ನಲ್ಲಿ ಇನ್ನು ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ನೆಮ್ಮದಿಯ ಜೀವನ ನಡೆಸುವಂತೆ ಪಕ್ಷ ಗಾರರಿಗೆ ಸಲಹೆ ನೀಡಿರುತ್ತಾರೆ.

ವರದಿ: ನಾಗರಾಜ ನಾಯ್ಕ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



