ಭಾರತ ಜೋಡೋ ಯಾತ್ರೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಭಾಗಿ.

ಚೀಣ್ಯ ಗ್ರಾಮದಿಂದ ರಾಹುಲ್ ಗಾಂಧಿಯವರ ಜೊತೆಯಲ್ಲಿ ಹೆಜ್ಜೆ ಹಾಕಿದ ಶ್ರೀಮತಿ ಸೋನಿಯಾ ಗಾಂಧಿಯವರು ಕರ್ನಾಟಕ ಕಾಂಗ್ರೆಸ್ ನಾಯಕರಾದ ಶ್ರೀ ಸಿದ್ದರಾಮಯ್ಯ, ಶ್ರೀ ಡಿಕೆ ಶಿವಕುಮಾರ್, ಶ್ರೀ ಚೆಲುವರಾಯಸ್ವಾಮಿ ಜೊತೆಯಾಗಿ ಕರಡಿಯಾ ವರೆಗೆ ನಡೆದುಬಂದರು.
ಪಾದಯಾತ್ರೆಯುದ್ದಕ್ಕೂ ಹಳ್ಳಿ ಹಳ್ಳಿಗಳಿಂದ ನೆರೆದಿದ್ದ ಜನರು, ಕಳಸ ಹೊತ್ತ ಮಹಿಳೆಯರು, ಮಕ್ಕಳು ಸೋನಿಯಾ ಗಾಂಧಿಯವರನ್ನ ಕಂಡು ಪುಳಕಿತಗೊಂಡು ಅವರೊಂದಿಗೆ ಹೆಜ್ಜೆ ಹಾಕಿದರು.

ಈ ಯಾತ್ರೆ ಇಡೀ ಕರ್ನಾಟಕದ ಜನರು ಒಗ್ಗೂಡಿಸುತ್ತಿರುವುಗು ಅತ್ಯಂತ ಹೆಮ್ಮೆಯ ವಿಚಾರ. ಶ್ರೀಮತಿ ಸೋನಿಯಾ ಗಾಂಧಿಯವರ ಈ ಪ್ರತಿ ಹೆಜ್ಜೆಗಳಲ್ಲೂ ದೃಢತೆ, ವಿಶ್ವಾಸ, ಛಲ, ಬದ್ಧತೆ, ಸ್ಪಷ್ಟತೆ, ವಾತ್ಸಲ್ಯ, ಕರುಣೆ, ತಾಯ್ತನದ ಮಮತೆ ಕಂಡು ನೆರೆದಿದ್ದ ಜನಸಾಗರ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು.
ಅವಮಾನಗಳನ್ನು ಸಹಿಸಿ ಕೇವಲ ಪ್ರೀತಿಯನ್ನ ಹಂಚುವ ತ್ಯಾಗಗುಣ ಹಾಗೂ ಸಹಾನುಭೂತಿಯನ್ನ ಈ ಹಳ್ಳಿ ಹಳ್ಳಿಗೂ ಹರಡುತ್ತಿರುವುದಕ್ಕೆ ಇಂದಿನ ನಡಿಗೆ ಜೀವಂತ ಸಾಕ್ಷಿಯಾಗಿತ್ತು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



