“ಅಡಿಕೆ ಕೃಷಿಕ ಆತ್ಮಹತ್ಯೆ”

ಶಿವಮೊಗ್ಗ: ಅಡಿಕೆ ಕೃಷಿಕ ಆತ್ಮಹತ್ಯೆ.

ಹೊಸನಗರ ತಾಲೂಕಿನ ಕರಿಮನೆ ಗ್ರಾ,ಪಂ ವ್ಯಾಪ್ತಿಯ ಕಿಳಮದೂರು ಗ್ರಾಮದಲ್ಲಿ ಅಡಿಕೆ ಬೆಳೆಗಾರನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲಬಾಧೆ ಹಾಗೂ ಇತ್ತೀಚೆಗೆ ಅಡಿಕೆ ಮರವು ಎಲೆಚುಕ್ಕೆರೋಗದಿಂದ ಅಡಿಕೆ ಫಸಲು ನಾಶವಾಗುತ್ತಿತ್ತು. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂದೇಹ ವ್ಯಕ್ತವಾಗಿದೆ. ಕರಿಮನೆ ಗ್ರಾ,ಪಂ ವ್ಯಾಪ್ತಿಯ ಕಿಳಮದೂರು ಗ್ರಾಮದ ಕೃಷ್ಣಪ್ಪ ಗೌಡ (60) ಮೃತ ವ್ಯಕ್ತಿ.

ಅಡಿಕೆ ತೋಟ ಮತ್ತು ಭತ್ತದ ಕೃಷಿ ಮಾಡಿಕೊಂಡಿದ್ದ ಕೃಷ್ಣಪ್ಪ ಗೌಡ ಎಂಬವರು ಅವರ ಸಹೋದರ ಯೋಗೇಂದ್ರ ಗೌಡ ಜಂಟಿ ಹೆಸರಿನಲ್ಲಿ 4 ಎಕರೆ 11 ಗುಂಟೆ, ಕೃಷ್ಣಪ್ಪ ಗೌಡ ಹೆಸರಿನಲ್ಲಿ 2 ಗುಂಟೆ 20 ಜಮೀನು ಹೊಂದಿದ್ದರು. ಎಲೆ ಚುಕ್ಕೆ ರೋಗದಿಂದ ಅಡಿಕೆ ತೋಟ ಸಂಪೂಣ೯ ಹಾಳಾಗಿದ್ದು, ತೊಂದರೆಗೆ ಸಿಲುಕಿದ್ದರು.

ಕೃಷಿ ಅಭಿವೃದ್ಧಿಗಾಗಿ ಬ್ಯಾಂಕ್‌ ಗಳಲ್ಲಿ ಸಾಲ ಮಾಡಿದ್ದರು. ಅಡಿಕೆ ಬೆಳೆ ಎಲೆಚುಕ್ಕೆ ರೋಗಕ್ಕೆ ತುತ್ತಾದ ಹಿನ್ನಲೆಯಲ್ಲಿ ಮಾಡಿದ ಸಾಲ ಹೇಗೆ ತೀರಿಸೋದು ಎಂದು ಯೋಚನೆಗೀಡಾಗಿ ಮನೆಯಲ್ಲಿ ಹೇಳಿಕೊಂಡಿದ್ದರು.

ಈ ಕಾರಣವೇ ನಮ್ಮ ತಂದೆಯ ಸಾವಿಗೆ ಕಾರಣ ಎಂದು. ಅದು ಬಿಟ್ಟು ಬೇರೆ ಯವುದು ಕಾರಣ ಇಲ್ಲ ಎಂದು ಅವರ ಮಗ ಸತೀಶ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸರು ತನಿಖೆ ನೆಡೆಸುತಿದ್ದಾರೆ. ಎಂದು ಮಾಹಿತಿ ತಿಳಿದು ಬಂದಿದೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *