ಸಿಹಿಮೊಗೆಯ ಸಾಹಿತ್ಯ ಹಬ್ಬ – ಡಾ. ರಂಜನಿ ಬಿದರಲ್ಲಿ

ಸಿಹಿಮೊಗೆಯ ಸಾಹಿತ್ಯ ಹಬ್ಬ – ಡಾ. ರಂಜನಿ ಬಿದರಲ್ಲಿ

ಸಿಹಿಮೊಗೆಯ ಸಾಹಿತ್ಯ ಹಬ್ಬ
ಸಾಹಿತ್ಯ ಸಂಗೀತ ಕಲಾವಿಹೀನಃ|
ಸಾಕ್ಷಾತ್ ಪಶುಃ ಪುಚ್ಛವಿಷಾಣಹೀನಃ||
ಸಾಹಿತ್ಯ, ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತಿ ಅಥವಾ ಜ್ಞಾನವಿಲ್ಲದ ಮನುಷ್ಯನು ಬಾಲ ಮತ್ತು ಕೊಂಬುಗಳಿಲ್ಲದ ಪಶುವಿಗೆ ಸಮಾನ ಎನ್ನುತ್ತದೆ ಒಂದು ಸೂಕ್ತಿ. ಇದರ ಅರ್ಥ ಕೇವಲ ತಿನ್ನುವುದು, ಮಲಗುವುದು ಮತ್ತು ಇತರ ಪ್ರಾಣಿಗಳಂತೆ ಬದುಕುವುದು ಮನುಷ್ಯನ ಜನ್ಮದ ಸಾರ್ಥಕತೆಯಲ್ಲ. ಕಲೆ ಮತ್ತು ಸಾಹಿತ್ಯವು ಮನುಷ್ಯನಿಗೆ ಭಾವನೆ, ರಸಾನುಭೂತಿ ಮತ್ತು ಸಂಸ್ಕೃತಿಯನ್ನು ಕಲಿಸುತ್ತದೆ. ಈ ಸೌಂದರ್ಯ ಪ್ರಜ್ಞೆ ಇಲ್ಲದವನು ಮಾನವನಾಗಿದ್ದರೂ ಪ್ರಾಣಿಗೆ ಸಮಾನ ಎಂಬುದು ಇದರ ಭಾವಾರ್ಥ.

ನಮ್ಮ ಸಿಹಿಮೊಗೆಯ ನಾಗರೀಕರು ಇದಕ್ಕೆ ತದ್ವಿರುದ್ಧ. ತಲತಲಾಂತರದಿಂದ ಸಾಹಿತ್ಯ ಹಾಗೂ ಸಂಗೀತಾಸಕ್ತರು. ಇದೇ ಅಕ್ಷರ ಸಂಭ್ರಮ ಪರಂಪರೆಯ ಮುಂದುವರೆದ ಭಾಗವಾಗಿ ಅಭಿವ್ಯಕ್ತಿ ಟ್ರಸ್ಟ್ (ರಿ) ಇದೇ ಶನಿವಾರ ಹಾಗೂ ಭಾನುವಾರದಂದು (ಮೇ ೯ ಹಾಗೂ ೧೦ ರಂದು) ಕರ್ನಾಟಕ ಸಂಘದಲ್ಲಿ ಶಿವಮೊಗ್ಗ ಲಿಟ್ ಫೆಸ್ಟ್ ಎಂಬ ಶಿವಮೊಗ್ಗ ಸಾಹಿತ್ಯ ಹಬ್ಬವನ್ನು ಹಮ್ಮಿಕೊಂಡಿದೆ.
ಇಲ್ಲೇನಿದೆ???
• ವಾಕ್ಯಂ ರಸಾತ್ಮಕಂ ಕಾವ್ಯಂ ಎಂದು ಸಾರುವ ಒಂದು ಗೋಷ್ಠಿ – ಭಾರತೀಯ ಸಾಹಿತ್ಯದಲ್ಲಿ ರಸ-ಧ್ವನಿ ಔಚಿತ್ಯ
• ರಸ ಋಷಿ ಕುವೆಂಪುರವರ ಸಾಹಿತ್ಯದ ವಿಶೇಷ ನೋಟ – ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆಯ ಸಮನ್ವಯತೆ ಎಂಬ ಹೊಸ ನೋಟ ದೊರೆಯಲಿದೆ.
• ಕನ್ನಡದ ಮೇರು ಸಾಹಿತಿ ಎಸ್. ಎಲ್. ಭೈರಪ್ಪನವರ ಸಾಹಿತ್ಯ ಕನ್ನಡ ಓದುಗ ವಲಯವನ್ನು ಉಳಿಸಿ ಬೆಳೆಸಿದ ಪರಿ
• ಅಕ್ಕ ಅಲ್ಲಮರಂಥಹ ಜ್ಞಾನಿಗಳ ಅರಿವಿನ ಆಯಾಮವನ್ನು ನಮ್ಮಂಥಹ ಸಾಮಾನ್ಯರಿಗೆ ಮುಟ್ಟಿಸುವ ಗೋಷ್ಠಿ
• ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಪ್ರಕೃತಿ, ಪರಿಸರವೇ ಒಂದು ವಿಸ್ಮಯ. ಈ ಅವ್ಯಕ್ತ ವಿಸ್ಮಯಗಳ ಆಗರವನ್ನು ನಿಮ್ಮ ಮುಂದೆ ತೆರೆದಿಡುವಂಥ ಗೋಷ್ಠಿ
• ನಮ್ಮ ಹೆಮ್ಮೆಯ ಜಿ. ಎಸ್. ಶಿವರುದ್ರಪ್ಪನವರ ಕಅವ್ಯದ ಕುರಿತಾದ ಗೋಷ್ಠಿ ಸಾಮಗಾನ.
• ಇವೆಲ್ಲಾ ಸಾಹಿತ್ಯ ಚರ್ಚೆಯ ಕೊನೆಯಲ್ಲಿ ಕಲೆ ಮತ್ತು ಸಹಿತ್ಯ ಸಾಮಾಜಿಕ ಸ್ವಾಸ್ಥö್ಯ ಕಾಪಾಡುತ್ತಿರುವ ಪರಿಯ ಬಗ್ಗೆ ಚರ್ಚೆ…..
ಇವೆಲ್ಲಾ ಗೋಷ್ಠಿಗಳಲ್ಲಿ ನೀವು ಬರಿಯ ಕೇಳುಗರಾಗಿ ಅಷ್ಟೇ ಅಲ್ಲದೇ ಚರ್ಚೆಯಲ್ಲೂ ಭಾಗವಹಿಸಬಹುದು.
ಸಾಹಿತ್ಯದ ಚರ್ಚೆಯಷ್ಟೇ ಅಲ್ಲ ಪುಸ್ತಕಗಳನ್ನು ಕೊಳ್ಳಲೂ ಅವಕಾಶವಾಗುವಂತೆ ಪುಸ್ತಕ ಮಳಿಗೆಗಳಿವೆ.
ಇವೆಲ್ಲದರೊಂದಿಗೆ ಶನಿವಾರ ಸಂಜೆ ಅಂತಾರಾಷ್ಟಿçÃಯ ಖ್ಯಾತಿಯ ಪಿಟೀಲು ವಾದಕರಾದ ಡಾ. ಮೈಸೂರು ಮಂಜುನಾಥ್ ತಂಡದವರಿAದ ನಾದೋಲ್ಲಾಸ.


ಇದೇ ಶನಿವಾರ ಸಂಜೆ ೫ ರಿಂದ ಭಾನುವಾರ ಸಂಜೆ ೫ ರ ವರೆಗೆ ಕರ್ನಾಟಕ ಸಂಘದಲ್ಲಿ ನಡೆಯುವ ಈ ಕರ‍್ಯಕ್ರಮವು ನಿಮಗೆಲ್ಲರಿಗೂ ಆನಂದಾನುಭವದ ಆಗರವಾಗುವುದರಲ್ಲಿ ಸಂದೇಹವಿಲ್ಲ.
ನಿಮಗೆಲ್ಲರಿಗೂ ಇದೋ ಪ್ರೀತಿಯ ಆಮಂತ್ರಣ.

  • ಡಾ. ರಂಜನಿ ಬಿದರಲ್ಲಿ
    ಟ್ರಸ್ಟೀ, ಅಭಿವ್ಯಕ್ತಿ ಟ್ರಸ್ಟ್
    ಆಯುರ್ವೇದ ವೈದ್ಯರು.

Leave a Reply

Your email address will not be published. Required fields are marked *