ಶಿವಾಜಿ ಮಹಾರಾಜರ ಶೋಭಾಯಾತ್ರೆ ತಡೆ: ಪ್ರಶ್ನಿಸಿ ಮೆರವಣಿಗೆ ಮುನ್ನಡೆಸಿದ ಹರತಾಳು ಹಾಲಪ್ಪ

ಶಿವಾಜಿ ಮಹಾರಾಜರ ಶೋಭಾಯಾತ್ರೆ ತಡೆ: ಪ್ರಶ್ನಿಸಿ ಮೆರವಣಿಗೆ ಮುನ್ನಡೆಸಿದ ಹರತಾಳು ಹಾಲಪ್ಪ

ಸಾಗರ: ಇಂದು ಸಾಗರ ನಗರದಲ್ಲಿ ವಿಜೃಂಭಣೆಯಿಂದ ಸಾಗುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಶೋಭಾಯಾತ್ರೆ ಮಾರ್ಕೆಟ್ ರಸ್ತೆಯ ಮೂಲಕ ಬರುತ್ತಿದ್ದ ವೇಳೆ, ಬಿ.ಎಚ್.ರಸ್ತೆ ತಿರುವಿನಲ್ಲಿರುವ ದರ್ಗಾ ಸಮೀಪದಲ್ಲಿ ಮೆರವಣಿಗೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಅಲ್ಲಿ ನಡೆಯುತ್ತಿದ್ದ ನಮಾಜಿಗೆ ಅಡಚಣೆ ಆಗಬಾರದೆಂಬ ಕಾರಣದಿಂದ ಸ್ಥಳೀಯ ಪೊಲೀಸ್ ಆಡಳಿತವು ಸುಮಾರು 30 ನಿಮಿಷಗಳ ಕಾಲ ಮೆರವಣಿಗೆಯನ್ನು ತಡೆಹಿಡಿದಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಈ ಘಟನೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹರತಾಳು ಹಾಲಪ್ಪ ಅವರು ಈ ವಿಷಯವನ್ನು ಗಂಭೀರವಾಗಿ ಪ್ರಶ್ನಿಸಿದರು. ಮೆರವಣಿಗೆಯನ್ನು ಏಕೆ ತಡೆಹಿಡಿಯಲಾಗಿದೆ ಎಂದು ಅಲ್ಲಿದ್ದ ಎಎಸ್‌ಪಿ ಅಧಿಕಾರಿಗಳ ಬಳಿ ಅವರು ನೇರವಾಗಿ ಪ್ರಶ್ನಿಸಿ, ಬಳಿಕ ಮೆರವಣಿಗೆ ಮುಂದುವರಿಯುವಂತೆ ಕ್ರಮ ಕೈಗೊಂಡರು.
ಸ್ಥಳೀಯರ ಮಾತಿನ ಪ್ರಕಾರ, ಹಾಲಪ್ಪ ಅವರು ಸಮಯಕ್ಕೆ ಆಗಮಿಸಿರಲಿಲ್ಲವಾದರೆ ಮೆರವಣಿಗೆ ಇನ್ನೂ ಹೆಚ್ಚು ಸಮಯ ವಿಳಂಬವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಆಡಳಿತದ ಜವಾಬ್ದಾರಿಯೇ ಸರಿ. ಆದರೆ ಅದೇ ವೇಳೆ ನ್ಯಾಯ ಮತ್ತು ಸಮಾನತೆ ಎಲ್ಲರಿಗೂ ಒಂದೇ ರೀತಿಯಾಗಿ ಅನ್ವಯಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕೆಲವರು “ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ” ಎಂಬಂತೆ ನಡೆದುಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *