“ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ಸಂದೇಶ್ ಕುಮಾರ್ ಸನ್ಮಾನ
ಹಿಂದ್ ಸಮಾಚಾರ ಸುದ್ದಿ | ಮಾರ್ಚ್ 2026:
ಕೊಣಂದೂರು: ಕೊಣಂದೂರಿನ ಹೆಸರಾಂತ ಉದ್ಯಮಿ ಹಾಗೂ ಸಂಧ್ಯಾ ಜ್ಯುವೆಲರ್ಸ್ ಮಾಲೀಕರಾದ ರೋ. ಸಂದೇಶ್ ಕುಮಾರ್ ಕೆ.ಎಂ ಅವರಿಗೆ 2025-26ನೇ ಸಾಲಿನ ಜಿಲ್ಲಾ ಮಟ್ಟದ “ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ” ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸಮಗ್ರ ಕೃಷಿ ಪದ್ಧತಿಯಲ್ಲಿ ಸಾಧನೆಗೈದಿರುವುದಕ್ಕಾಗಿ ಅವರಿಗೆ “ಶ್ರೇಷ್ಠ ಕೃಷಿಕ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಹಾಗೂ ಸಮಗ್ರ ಕೃಷಿ ಪದ್ಧತಿಯ ಅನುಷ್ಠಾನದಲ್ಲಿ ಅವರು ತೋರಿದ ನಿಷ್ಠೆ ಮತ್ತು ಸಾಧನೆಗೆ ಈ ಗೌರವ ಲಭಿಸಿದೆ.
ಸಂದೇಶ್ ಕುಮಾರ್ ಅವರು ವಿವಿಧ ಸಂಘ ಸಂಸ್ಥೆಗಳ ನಿರ್ದೇಶಕರಾಗಿ, ಸದಸ್ಯರಾಗಿ ಹಾಗೂ ದಾನಿಯಾಗಿ ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಬಹುಮುಖ ಸೇವೆಯನ್ನು ಪರಿಗಣಿಸಿ ಸರ್ಕಾರ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಸಂದೇಶ್ ಕುಮಾರ್ ಅವರ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.

ವರದಿ : ಮೇಘನ ಗಣೇಶ್

