ಮುಜಾಫರ್ ನಗರ್ : ವ್ಯಕ್ತಿಯೊಬ್ಬ ಕಲಬೆರಕೆ ಹಾಲು ಮಾರಾಟ ಮಾಡಿದ್ದಕ್ಕೆ 32 ವರ್ಷಗಳ ಬಳಿಕ ಶಿಕ್ಷೆ..!
ಉತ್ತರ ಪ್ರದೇಶದ ಮುಜಾಫರ್ ನಗರ ನ್ಯಾಯಾಲಯವು ಕಲಬೆರೆಕೆ ಹಾಲು ಮಾರಾಟ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, 32 ವರ್ಷಗಳ ನಂತರ ವ್ಯಕ್ತಿಯೊಬ್ಬರಿಗೆ 6 ತಿಂಗಳ ಜೈಲು ಶಿಕ್ಷೆ ಜೊತೆಗೆ 5,000 ರೂ ದಂಡ ವಿಧಿಸಿದ್ದಾರೆ.
1990ರ ಏಪ್ರಿಲ್ 21ರಂದು ಹರ್ಬಿರ್ ಸಿಂಗ್ ಎಂಬುವವರು ಕಲಬೆರಕೆ ಹಾಲು ಮಾರಾಟ ಮಾಡುತ್ತಿರುವುದು ತಿಳಿದು, ಹಾಲಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಹಾಲು ಕಲಬೆರಿಕೆ ಆಗಿರುವುದು ತಿಳಿದುಬಂದಿದೆ. ಈ ಸಂಬಂಧ ಫುಡ್ ಇನ್ಸ್ಪೆಕ್ಟರ್ ಸುರೇಶ್ ಚಾಂದ್ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಪ್ರಶಾಂತ್ ಕುಮಾರ್ ರವರು ಹಾಲು ಮಾರಾಟಗಾರ ಹರ್ಬಿರ್ ಸಿಂಗ್ ಗೆ ಜೈಲು ಶಿಕ್ಷೆಯ ಜೊತೆಗೆ 5000 ದಂಡ ವಿಧಿಸಿದ್ದಾರೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.


