“ಮೂರು ತಿಂಗಳಿಗೆ ಕಿತ್ತುಹೋದ ರಸ್ತೆ 4.41 ಕೋಟಿ ಸ್ವಾಹ :ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಅರೋಪ”

ರಿಪ್ಪನ್‌ಪೇಟೆಯ: ಮೂರು ತಿಂಗಳಿಗೆ ಕಿತ್ತುಹೋದ ರಸ್ತೆ 4.41 ಕೋಟಿ ಸ್ವಾಹ,ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಅರೋಪ .

ರಿಪ್ಪನ್‌ಪೇಟೆಯ ಗವಟೂರು-ಪೂಜಾರದಿಂಬ ಸಂಪರ್ಕ ರಸ್ತೆಯ ಪಿಎಂಜಿಎಸ್‌ವೈ ಯೋಜನೆಯಡಿ 4.41 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿ ಕೇವಲ ಮೂರು ತಿಂಗಳಲ್ಲಿ ಕಿತ್ತು ಹೋಗಿರುವುದನ್ನು ಖಂಡಿಸಿ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದವರು ಇಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನುದ್ದೇಶಿಸಿ ಮಾತನಾಡಿದ ಬೇಳೂರು ಪೇ.ಸಿಎಂ ಅಲ್ಲ……ಪೇ.ಹಾಲಪ್ಪ….ಪೇ.ಸಂಸದ ಎಂದು ಟೀಕಿಸುವುದರೊಂದಿಗೆ ಬಾಳೆಹಣ್ಣು ತಿಂದು………! ಸಿಪ್ಪೆಯನ್ನು ಗುತ್ತಿಗೆದಾರರಿಗೆ ಬಿಟ್ಟಿದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂಬುವ ಹಾಗಿದೆ ಈ ಕಾಮಗಾರಿ. ರಾಜ್ಯ ಸರ್ಕಾರ ಶೇಕಡಾ 40 ಪರ್ಸೇಂಟ್ ಆಗಿ ಉಳಿದಿಲ್ಲ ಈಗ 80% ಕಮಿಷನ್ ಸರ್ಕಾರವಾಗಿದೆ ಎಂದರು.

ಕೇಂದ್ರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮಗಳ ಸಂಪರ್ಕ ರಸ್ತೆಯಲ್ಲಿಯೂ ಕಮೀಷನ್ ತಿನ್ನುವುದರ ಮೂಲಕ 4.40 ಕೋಟಿ ಹಣವನ್ನು ನೀರಿನಲ್ಲಿ ಹೋಮ ಮಾಡಿದ್ದಾರೆ. ಈಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಗುತ್ತಿಗೆದಾರ ಮತ್ತು ಪಿಎಂಜಿಎಸ್‌ವೈ ಯೋಜನೆಯ ಅಧಿಕಾರಿಗಳನ್ನು ಅಮಾನತು ಪಡಿಸುವಂತೆ ಸಭೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ನಾನು ಸೊರಬದಲ್ಲಿ ಮಾಡಿದ ಕಾಮಗಾರಿಗಳ ಬಗ್ಗೆ ಬೀಗುವ ಶಾಸಕ ಹರತಾಳು ಹಾಲಪ್ಪನವರಿಗೆ ಕ್ಷೇತ್ರದಲ್ಲಿ ಮಾಡಲಾಗಿರುವ ಕಳಪೆ ಕಾಮಗಾರಿ ಕಣ್ಣಿಗೆ ಬೀಳಲಿಲ್ಲವೇ ಕಳೆದ ಮೂರು ತಿಂಗಳ ಹಿಂದೆ ಮಾಡಲಾದ ಡಾಂಬರ್ ರಸ್ತೆಯೂ ಕಳಪೆಯಾಗಿರುವ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಬೆಳಗಾಗುವುದರೊಳಗೆ ಸಿಮೆಂಟ್ ರಸ್ತೆಯಾಗಿ ಪರಿವರ್ತನೆಯಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ ಇದೊಂದು ಭಷ್ಟಾಚಾರದ ಸರ್ಕಾರವಾಗಿದೆ.ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭಯವೇ ಇಲ್ಲದಂತಾಗಿ ತಾವು ಸಿಪ್ಪೆ ತಿನ್ನುವುದರಲ್ಲಿ ಏನು ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವೆಂದು ಹೇಳಿ ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಮತ್ತು ಅಧಿಕಾರಿಗಳನ್ನು ಅಮಾನತ್ತು ಪಡಿಸುವುದರೊಂದಿಗೆ ಕಾಮಗಾರಿಯನ್ನು ಹೊಸದಾಗಿ ಮಾಡುವುದು ಮತ್ತು ಈಗ ಮಾಡಲಾಗಿರುವ ಕಾಮಗಾರಿಯ ಹಣವನ್ನು ತಡೆಹಿಡಿಯುವಂತೆ ಅಗ್ರಹಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಲಗೋಡು ರತ್ನಾಕರ್, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ನಾಗರಾಜ್,

ರಿಪ್ಪಿನ್ ಪೇಟೆ ಗ್ರಾಮ ಪಂಚಾಯತಿ ಸದಸ್ಯ ಆಸಿಫ್, ಸಾಗರ ನಗರಸಭೆ ವಿರುದ್ಧ ಪಕ್ಷ ನಾಯಕರಾದ ಗಣಪತಿ ಮಂಡಗಳಲೆ, ಮಾಜಿ ತಾಲೂಕ್ ಪಂಚಾಯತ್ ಸದಸ್ಯರ ಸೋಮಶೇಖರ್ ಲಾವಿಗೇರೆ, ಮುಖಂಡರಾದ ಆನಂದ ಐಗಿನಬೈಲು,ಉಲ್ಲಾಸ್, ಫ್ಯಾನ್ಸಿ ರಮೇಶ್ ಹಾಗೂ ಸ್ಥಳೀಯರು ಉಪಸ್ಥಿದರು.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *