ಕೊಪ್ಪಳ: 112 ಕ್ಕೆ ಕರೆ ಮಾಡಲು ಸಾರ್ವಜನಿಕರಿಗೆ ಮಾಹಿತಿ ನೀಡಿದ ಪೊಲೀಸ್ ಸಿಬ್ಬಂದಿ.

ಪೊಲೀಸ್ ಸಿಬ್ಬಂದಿಯವರು ಸಾರ್ವಜನಿಕರು
ಕೌಟುಂಬಿಕ ಕಲಹ, ಸಮೂಹದ ಗಲಾಟೆಯ ಸಮಸ್ಯೆಗಳು ಉಲ್ಬಣಗೊಂಡರೆ 112 ಕ್ಕೆ ಕರೆ ಮಾಡಲು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸ್ ಅಧಿಕಾರಿ ಅಯ್ಯನ ಗೌಡರ ರವರು ಹಿರೇ ಜಂತಕಲ್ ಗ್ರಾಮದಲ್ಲಿ ಮಾತನಾಡಿದ ಅವರು ಗಂಗಾವತಿ ನಗರದಲ್ಲಿ ಯಾವುದೇ ವಾರ್ಡ್ ಆಗಲಿ ಅಥವಾ ಏರಿಯಾ ಆಗಲಿ ಯಾವುದೇ ಅನೈತಿಕ ಚಟುವಟಿಕೆಗಳನ್ನು ನಡೆದರೆ ತಕ್ಷಣ 112ಗೆ ಕರೆ ಮಾಡ ಬೇಕು.
ಸಾರ್ವಜನಿಕರು 112 ಕರೆ ಮಾಡಿದ ಐದು ನಿಮಿಷದಲ್ಲಿಯೇ ಕರೆ ಮಾಡಿದ ಸ್ಥಳಕ್ಕೆ ನಮ್ಮ ಪೊಲೀಸ್ ಸಿಬ್ಬಂದಿಯವರು ಬರುತ್ತಾರೆ ಮತ್ತು
ಬಾಲ್ಯ ವಿವಾಹ. ಇಸ್ಪೀಟು, ರಸ್ತೆ ಅಪಘಾತ ,
ಅಗ್ನಿ ಅವಘಡ ಸಂಭವಿಸಿದರೆ ಕೂಡಲೆ 112ಗೆ ಕರೆ ಮಾಡಿ ,
ಹಾಗೂ ಮುಂದಿನ ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ವಾರ್ಡ್ನಲ್ಲಿ ಗಣೇಶ ಮೂರ್ತಿ ಸ್ಥಾಪಿಸಿಬೇಕಾದರೆ ನಗರಸಭೆ ಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಜೆಸ್ಕಾಂ ಇಲಾಖೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶರಣೆಗೌಡ ಪೊ.ಪಾಟೀಲ್ ರಾಜು ಗೌಳಿ ಸೇರಿದಂತೆ ಇತರರು ಇದ್ದರು.
ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.
