ಪ್ರಶಾಂತ್ ಹಿರೇಮಠಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ

ಪ್ರಶಾಂತ್ ಹಿರೇಮಠಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ

ಮೈಸೂರು: ನಗರದ ಹಿರಿಯ ರಂಗಕರ್ಮಿ ಪ್ರಶಾಂತ್ ಹಿರೇಮಠ ಅವರು ಕಲಬುರಗಿಯ ರಂಗ ಸಂಗಮ ವೇದಿಕೆಯ ರಾಜ್ಯಮಟ್ಟದ ಎಸ್.ಬಿ.ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ.
ರಂಗ ಸಂಗಮ ವೇದಿಕೆಯ ರಾಜ್ಯಮಟ್ಟದ ಪ್ರಶಸ್ತಿ ಇದಾಗಿದ್ದು, 10 ಸಾವಿರ ರೂಪಾಯಿ ನಗದು, ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.
ಜುಲೈ 18ರಂದು ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿಯ ದಶಮಾನೋತ್ಸವ ಈ ಬಾರಿಯದು.
ಪ್ರಶಾಂತ್ ಹಿರೇಮಠ ಅವರು ಮೈಸೂರು ರಂಗಾಯಣದ ಕಲಾವಿದರಾಗಿ ನಿವೃತ್ತರಾಗಿದ್ದು, ಈಗಲೂ ನಾಟಕಗಳಲ್ಲಿ ಅಭಿ‌ನಯಿಸುವುದರ ಜೊತೆಗೆ ನಾಟಕಗಳನ್ನು ನಿರ್ದೇಶಿಸುತ್ತಿದ್ದಾರೆ ಎಂದು ರಂಗ ಸಂಗಮ ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *