“ದುರಾಡಳಿತ ದಿಂದ ಅಧೋಗತಿಗೆ ತಲುಪಿದ ಫಾರೂಕಿಯಾ ಶಿಕ್ಷಣ ಸಂಸ್ಥೆ”

ಮೈಸೂರು : ದುರಾಡಳಿತ ದಿಂದ ಅಧೋಗತಿಗೆ ತಲುಪಿದ ಫಾರೂಕಿಯಾ ಶಿಕ್ಷಣ ಸಂಸ್ಥೆ.

ಕೋಟ್ಯಾಂತರೂಪಾಯಿ ಸಾಲ ಪಡೆದು ತೀರಿಸಲಾಗದೇ ಪದೇ ಪದೇ ಶಾಲೆಯನ್ನು ಮುಚ್ಚಲು ಮುಂದಾಗಿದ್ದಾರೆ. ಸಂಸ್ಥೆ ಒಳಗೆ ಯಾವುದಾದರೂ ಸಮಸ್ಯೆಗಳಿದ್ದರೇ 10 ದಿನಗಳ ಒಳಗೆ ತಿಳಿಸಬೇಕು ಇಲ್ಲವಾದ್ದಲ್ಲಿ ರಸ್ತೆಗಿಳಿದು ಪ್ರತಿಭಟಿಸುವುದಾಗಿ ಫೆಡರೇಷನ್ ಆಫ್ ಮೈಸೂರು ಮುಸ್ಲಿಂ ಆರ್ಗನೈಸೇಷನ್ ಫಾರೂಕಿಯ ಸಂಸ್ಥೆಗೆ ಎಚ್ಚರಿಕೆ ನೀಡಿದೆ.

ಮೈಸೂರು ಖಾಸಗಿ ರೆಸಾರ್ಟ್ ನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಅಜೀಜುಲ್ಲಾ ಅಜ್ಜು ಮಾತನಾಡಿ
ಫಾರೂಕಿಯಾ ಶಿಕ್ಷಣ ಸಂಸ್ಥೆಗಳು ಒಂದು ಕಾಲದಲ್ಲಿ ಈ ಟ್ರಸ್ಟ್‌ನ ಶಿಕ್ಷಣ ಸಂಸ್ಥೆಗಳು ಪ್ರತಿಷ್ಠಿತವಾಗಿದ್ದವು . ಆದರೆ , ಕ್ರಮೇಣ ಟ್ರಸ್ಟ್‌ನಲ್ಲಿರುವವರ ದುರಾಡಳಿತದಿಂದಾಗಿ ಮುಚ್ಚಿಹೋಗುವ ಸ್ಥಿತಿ ತಲುಪಿವೆ . ಭಾರೀ ಮೊತ್ತದ ಸಾಲವನ್ನು ಪಡೆದು ಅದನ್ನು ತೀರಿಸಲಾಗದ ಸ್ಥಿತಿಗೆ ಟ್ರಸ್ಟ್ ತಲುಪಿದೆ ಇದುವರೆಗೂ ವಿದ್ಯಾರ್ಥಿ ಗಳಿಂದ ಬಂದ ಶುಲ್ಕ ಹಾಗೂ ಡೊನೇಷನ್ ಅನ್ನು ಏನು ಮಾಡಿದರೆಂಬುದು ತಿಳಿಯದಾಗಿದೆ .1985 ರಲ್ಲಿ ಸೊಸೈಟಿ ಅಂತ ಇತ್ತು.ನಂತರ ಅದನ್ನ ಟ್ರಸ್ಟ್‌ ಆಗಿ ಮಾಡಿಕೊಂಡಿದ್ದಾರೆ.ಇದು ನಮಗೆ ಅನುಮಾನ ಹುಟ್ಟಿಸುತ್ತಿದೆ.ಈ ರೀತಿ ಇನ್ನೂ ಅನೇಕ ಅಕ್ರಮ ಗಳು ನಡೆದಿವೆ. ಟ್ರಸ್ಟ್ ನ ಕಾರ್ಯದರ್ಶಿ ತಾಜ್ ಮೊಹಮ್ಮದ್ ಖಾನ್ ಇದಕ್ಕೆಲ್ಲ ಉತ್ತರ ಕೊಡಬೇಕು. ಜಿಲ್ಲಾಡಳಿತ ಹಾಗೂ ಸರ್ಕಾರ ತನಿಖೆ ನಡೆಸಿ ಸಂಸ್ಥೆ ಉಳಿವಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *