ವಿಘ್ನನಿವಾರಕನ ಆಗಮನಕ್ಕೆ ಕೇವಲ ದಿನಗಳು ಬಾಕಿ ಕಲಾವಿದರ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ಗೌರಿ ಗಣೇಶ

ಮೈಸೂರು: ವಿಘ್ನನಿವಾರಕನ ಆಗಮನಕ್ಕೆ ಕೇವಲ ದಿನಗಳು ಬಾಕಿ
ಕಲಾವಿದರ ಕೈಯಲ್ಲಿ ಅರಳಿದ ಪರಿಸರ ಸ್ನೇಹಿ ಗೌರಿ ಗಣೇಶ.

ಕಳೆದೆರೆಡು ವರ್ಷಗಳಿಂದ ಕಳೆಗುಂದಿದ್ದ ಗಣೇಶ ಚತುರ್ಥಿ ಆಚರಣೆಯ ಸಂಭ್ರಮಕ್ಕೆ ಮತ್ತೆ ಜೀವಕಳೆ ಬಂದಿದ್ದು , ಮೈಸೂರಿನ ವಿವಿಧ ಭಾಗಗಳಲ್ಲಿ ಬಗೆ ಬಗೆಯ ಗಣಪತಿ ಮೂರ್ತಿಗಳು ಕಲಾವಿದರ ಕೈಯಲ್ಲಿ ಸುಂದರವಾಗಿ ಅರಳಿ ನಿಂತಿವೆ . ವಿಘ್ನನಿವಾರಕನ ಆಗಮನಕ್ಕೆ ಕೇವಲ ದಿನಗಳು ಬಾಕಿ ಇದ್ದು , ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಇತ್ತೀಚೆಗೆ ಜನರಲ್ಲಿ ಪರಿಸರ ಕಾಳಜಿ ಹೆಚ್ಚುತ್ತಿರುವುದರಿಂದ ಎಲ್ಲೆಡೆ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತು ನೀಡಲಾಗುತ್ತಿದೆ . ಈ ಹಿನ್ನೆಲೆ ನೈಸರ್ಗಿಕ ಬಣ್ಣಲೇಪನದೊಂದಿಗೆ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳ ಖರೀದಿಗೆ ಜನರು ಹೆಚ್ಚು ಉತ್ಸುಕರಾಗಿದ್ದು , ಸಾವಿರಾರು ಮೂರ್ತಿಗಳಿಗೆ ಮುಂಗಡ ಹಣ ನೀಡಿದ್ದಾರೆ . ಜತೆಗೆ ತಯಾರಕರು ಅರ್ಧ ಅಡಿಯಿಂದ ಹಿಡಿದು ಆರು ಅಡಿ ಎತ್ತರದವರೆಗಿನ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಕಲರ್ ಕಲರ್ ಪೇಪರ್ ಗಣಪತಿ, ಪ್ಲಾಸ್ಟರ್ ಪ್ಯಾರೀಸ್ ಗಣಪತಿಗೆ ಜನರು ಮಾರುಹೋಗದಂತೆ ಪರಿಸರ ಸ್ನೇಹಿ ಗೌರಿ ಗಣೇಶ ತಯಾರಿಕೆಯನ್ನು ಪರಿಸರ ಸ್ನೇಹಿ ಗಣಪತಿ ಕಲಾವಿದರು ಹಾಗೂ ಜೇಡಿ ಮಣ್ಣಿನ ಗೌರಿ ಗಣಪತಿ ತಯಾರಿಕಾ ಸಂಘದ ಸದಸ್ಯರು ಮಾಡಿಕೊಂಡು ಬರುತ್ತಿದ್ದಾರೆ.

ಕಿರೀಟ ವಸ್ತ್ರಾಭರಣ ತೊಟ್ಟು ಕೈಯಲ್ಲಿ ಅಂಕುಶ ಹಿಡಿದು ಬರುವುದು ಸಾಮಾನ್ಯ ಆದ್ರೆ ಈ ಬಾರಿಯೂ ವಿಶೇಷವೆಂಬಂತೆ ಶೇಷಗಣಪನಾಗಿ , ಸಿಂಹಾಸನರೂಢನಾಗಿ, ನಂದಿ ಮೇಲೇರಿ, ಕಮಲ ಗಣಪನಾಗಿ, ಮೂಸಿಕ ವಾಹನ, ವಿಷ್ಣುವಿನ ಅವತಾರ, ಸಿಂಹವಾಹನ, ಮತ್ಸ್ಯ ಗಣಪ ಹೀಗೆ ಹತ್ತು ಹಲವು ಅವತಾರಗಳಲ್ಲಿ ಮಾಡಲಾಗಿದೆ

ಪಿಒಪಿ ಗಣಪ ಮೂರ್ತಿಗಳ ನಿಷೇಧ ಹಿನ್ನೆಲೆಯಲ್ಲಿ ಮೈಸೂರಿನಾದ್ಯಂತ ಮಣ್ಣಿನ ಗಣಪ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ರಾಘವೇಂದ್ರ ಗೌರಿ ಗಣೇಶ ತಯಾರಕರ ಸಂಘದ ಅಧ್ಯಕ್ಷರು

ನಾವು 35 ವರ್ಷಗಳಿಂದ ಮಣ್ಣಿನ ಗಣಪತಿ ತಯಾರಿಕೊಂಡು ಬರುತ್ತಿದ್ದೇವೆ ಶೇಕಡಾ 90 ರಷ್ಟು ಜನರು ಮಣ್ಣಿನ ಗಣಪತಿ ಹೇಳುತ್ತಿದ್ದಾರೆ
ಇತ್ತಿಚಿನ ದಿನಗಳಲ್ಲಿ ಗೌರಿ ಗಣೇಶ ಹಬ್ಬ ಪ್ರತಿಷ್ಠೆ ಯಾಗಿದೆ ಸಾರ್ವಜನಿಕ ರಲ್ಲಿ ಮನವಿ ಮಾಡುವುದು ಪರಿಸರ ಗಣಪತಿ ಬಳಸಿ ಅದು ಪರಿಸರಕ್ಕೆ ಯಾವುದೇ ರೀತಿಯ ಹನಿಯಾಗುವುದಿಲ್ಲ ಆದರೆ ಪ್ಲಾಸ್ಟಿಕ್ ಗಣಪತಿ, ಪೇಪರ್ ಗಣಪತಿಗಳು 80ರಷ್ಟು ಪ್ಲಾಸ್ಟಿಕ್ ಬಳಕೆಯಾಗಿದೆ ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದರು.

ಪುಟ್ಟಸ್ವಾಮಿ, ಗಣೇಶ ಮೂರ್ತಿ ತಯಾರಿಸುವ ಕಲಾವಿದ

ಕಳೆದ 40 ವರ್ಷದಿಂದ 
ಗಣಪತಿ ಮಾಡುತ್ತಿದ್ದೇನೆ ತಂದೆ ಹೇಳಿಕೊಟ್ಟ ಕಸುಬನ್ನು ಮುಂದುವರೆಸಿಕೊಂಡು ಬರುತ್ತಿದ್ದಾನೆ ಕಳೆದ ಎರಡು ವರ್ಷಗಳಿಂದ ಕೊರೊನ ಇರುವುದರಿಂದ ತೊಂದರೆ ಅನುಭವಿಸುತ್ತಿದೇವು ಈ ವರ್ಷ ಸರ್ಕಾರ ಎಲ್ಲ ಕಡೆ ಗಣಪತಿ ಇಡಲು ನಿರ್ಧಾರ ಅನುಮತಿ ನೀಡಿದೆ ಗಣಪತಿ ಬೇಡಿಕೆ ಹೆಚ್ಚಿದೆ.

ನಮ್ಮ ಉದ್ದೇಶ ಪರಿಸರ ಉಳಿಸುವ ಸಲುವಾಗಿ ,ಗಣಪತಿ ಹಬ್ಬ ಶುರುವಾಗುವ 4 ರಿಂದ 5 ತಿಂಗಳ ಹಿಂದಿನಿಂದಲೇ ಗಣಪತಿ ತಯಾರಿಕೆ ಮಾಡಲಾಗುವುದು ಜೇಡಿ ಮಣ್ಣನ್ನು ಮಾತ್ರ ಬಳಸಿ ತಯಾರು ಮಾಡುತ್ತಿರುವ ಪರಿಸರ ಸ್ನೇಹಿ ಗಣಪತಿ ಯಾಗಿದೆ ವಾಟರ್ ಕಲರ್ ಬಣ್ಣ ಹಚ್ಚಿ ಗಣಪತಿ ತಯಾರಿಸಲಾಗುವುದು ಯಾವುದೇ ಇತರೆ ಬಣ್ಣವನ್ನು ಪರಿಸರ ಗಣಪತಿಗೆ ಹಚ್ಚುವುದಿಲ್ಲಾ ಎಂದರು.

ಭಾನು, ಗೌರಿ ಗಣೇಶ ಮೂರ್ತಿ ತಯಾರಿಸುವ ಕಲಾವಿದರು.

ಕಳೆದ 70 ವರ್ಷಗಳಿಂದ ನಮ್ಮ ತಾತ ಗೌರಿ ಗಣೇಶ ಮೂರ್ತಿಗಳನ್ನು ಮಾಡಿಕೊಂಡು ಬರುತ್ತಿದ್ದರೆ ನಾನು 15 ವರ್ಷಗಳಿಂದ ಮಾಡುತ್ತಿದ್ದೇನೆ ಅರ್ಧ ಅಡಿಯಿಂದ ಮೂರುವರೆ ಅಡಿಯತನಕ 
ಗಣಪತಿ ತಯಾರಿಕೆ ಮಾಡುತ್ತೆವೆ ಈ ಬಾರಿ ಸರ್ಕಾರ ಮನೆ ಮನೆಗಳಲ್ಲಿ ಗಣಪತಿ ಇಡಲು ಅನುಮತಿ ನೀಡಿದೆ ಇದರಿಂದ ಗೌರಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ ಜೇಡಿ ಮಣ್ಣಿನ ಕೊರತೆ ಇದೆ ಕೆರೆಗಳಲ್ಲಿ ನೀರು ಇರುವುದರಿಂದ ಮಣ್ಣು ಸಿಗುತ್ತಿಲ್ಲ ಉಳಿದಂತೆ ವ್ಯಾಪಾರ ವಹಿವಾಟು ಚನ್ನಾಗಿದೆ ಎಂದರು.

ವಿಶೇಷ ವರದಿ : ನಂದಿನಿ ‌ಮೈಸೂರು

Leave a Reply

Your email address will not be published. Required fields are marked *